Asianet Suvarna News Asianet Suvarna News

ದೀಪಾವಳಿ ಸೇರಿ ಸಾಲು ಸಾಲು ಹಬ್ಬಕ್ಕೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಭಾರತೀಯ ರೈಲ್ವೇ!

ನವರಾತ್ರಿ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. 

Indian railways to run 6000 additional train for diwali other festival season ckm
Author
First Published Sep 27, 2024, 7:18 PM IST | Last Updated Sep 27, 2024, 7:18 PM IST

ನವದೆಹಲಿ(ಸೆ.27) ಹಬ್ಬಗಳ ಋತು ಆರಂಭಗೊಂಡಿದೆ. ಈಗಾಗಲೇ ಗಣೇಶ ಚತುರ್ಥಿ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೀಗ ನವರಾತ್ರಿ ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಕ್ಕೆ ಭಾರತ ಸಜ್ಜಾಗುತ್ತಿದೆ. ಹಬ್ಬ ಆಚರಿಸಲು ಸಜ್ಜಾಗಿರುವ ಭಾರತೀಯರಿಗೆ ಇದೀಗ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ. ಈ ಬಾರಿಯ ಹಬ್ಬಗಳ ಸಮಯದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು, ಪ್ರಯಾಣಿಕರು ಅರಾಮವಾಗಿ ಊರಿಗೆ ತೆರಳಿ ಹಬ್ಬ ಆಚರಿಸಲು ಹೆಚ್ಚುವರಿಯಾಗಿ 6,000 ರೈಲು ಸೇವೆ ನೀಡಲಿದೆ. ಇಷ್ಟೇ ಅಲ್ಲ 12,500 ಹೆಚ್ಚುವರಿ ಕೋಚ್‌ಗಳು ಸೇವೆ ನೀಡಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಕಳೆದ ವರ್ಷದ ಹಬ್ಬದ ವೇಳೆ 4,429 ರೈಲುಗಳನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಆದರೂ ಸಂಚಾರ ದಟ್ಟಣೆ ವರದಿಯಾಗಿತ್ತು. ಹೀಗಾಗಿ ಈ ಬಾರಿ 6,000 ಹೆಚ್ಚುವರಿ ರೈಲುಗಳನ್ನು ಬಿಡಲಾಗುತ್ತಿದೆ. ಇದರಿಂದ 1 ಕೋಟಿ ಪ್ರಯಾಣಿಕರು ಯಾವುದೇ ಅಡೆ ತಡೆ ಇಲ್ಲದೆ ತಮ್ಮ ತಮ್ಮ ಊರಿಗೆ ತೆರಳಿ ನೆಮ್ಮದಿಯಾಗಿ ಪೂಜೆ, ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಹಿರಿಯ ನಾಗರೀಕರಿಗೆ ರೈಲಿನಲ್ಲಿದೆ 3 ವಿಶೇಷ ಸೌಲಭ್ಯ, ಟಿಕೆಟ್ ಬುಕಿಂಗ್ ಮುನ್ನ ತಿಳಿದುಕೊಳ್ಳಿ!

ದುರ್ಗಾ ಪೂಜೆ ಅಕ್ಟೋಬರ್ 9 ರಂದು ಆರಂಭಗೊಳ್ಳುತ್ತಿದೆ. ಅಕ್ಟೋಬರ್ 31ರಂದ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ನವೆಂಬರ್ 8 ಹಾಗೂ 9 ರಂದು ಛಾತ್ ಪೂಜೆ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದಕ್ಕಾಗಿ ಹೆಚ್ಚುವರಿ ರೈಲುಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಸ್ಪೆಷಲ್ ಟಿಕೆಟ್ ಚೆಕಿಂಗ್ ಕೂಡ ಇರಲಿದೆ. ಇದರಿಂದ ಟಿಕೆಟ್ ರಹಿತ ಪ್ರಯಾಣಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದಿದ್ದಾರೆ.

ಹಬ್ಬದ ಸಂದರ್ಭಗಳಲ್ಲಿ ಟಿಕೆಟ್ ರಹಿತ ಪ್ರಯಾಣಕರು ಬುಕಿಂಗ್ ಮಾಡಿದ ಪ್ರಯಾಣಿಕರಿಗೂ ಸಮಸ್ಯೆಯಾದ ಹಲವು ಘಟನೆಗಳು ನಡೆದಿದೆ. ಹೀಗಾಗಿ ಈ ಬಾರಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ರೈಲ್ವೇ ಸಚಿವರು ಹೇಳಿದ್ದಾರೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರು ಟಿಕೆಟ್ ಸಿಗದೆ ಪರದಾಡುವ ಪರಿಸ್ಥಿಗಳು ಎದುರಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ರೈಲುಗಳನ್ನು ಬಿಡಲಾಗಿದೆ. 

ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ ಅಳಿಲು, ರೈಲು ಪ್ರಯಾಣ ರದ್ದುಗೊಳಿಸಿದ ಅಧಿಕಾರಿಗಳು!

ಬಹುತೇಕ ರಾಜ್ಯಗಳಿಗೆ ಹೆಚ್ಚುವರಿ ರೈಲು ಸಂಚಾರ ಮಾಡಲಿದೆ. ಈ ಪೈಕಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯಗಳಿಗೆ ಪ್ರಮಾಣ ಹೆಚ್ಚಾಗಲಿದೆ. ಇದರ ಜೊತೆಗೆ ಸುರಕ್ಷತೆಗೊ ಆದ್ಯತೆ ನೀಡಲು ಸೂಚಿಸಲಾಗಿದೆ. ರೈಲು ಪ್ರಯಾಣ, ರೈಲಿನಲ್ಲಿ ನೀಡುವ ಆಹಾರಗಳಲ್ಲಿ ಎಡವಡ್ಡು ಆಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
 

Latest Videos
Follow Us:
Download App:
  • android
  • ios