ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ ಅಳಿಲು, ರೈಲು ಪ್ರಯಾಣ ರದ್ದುಗೊಳಿಸಿದ ಅಧಿಕಾರಿಗಳು!
ರೈಲು ನಿಲ್ದಾಣದಲ್ಲಿ ರೈಲು ಕೆಲ ಹೊತ್ತು ನಿಂತಿತ್ತು. ಇನ್ನು ಕೆಲ ಹೊತ್ತಲ್ಲೇ ರೈಲು ಹೊರಡಬೇಕು. ಆದರೆ ಒಂದು ಅಳಿಲಿನ ಕಾರಣದಿಂದ ರೈಲನ್ನು ರದ್ದು ಮಾಡಿದ ಘಟನೆ ನಡೆದಿದೆ.
ಲಂಡನ್(ಸೆ.23) ರೈಲು ಹಳಿಯಲ್ಲಿನ ಸಮಸ್ಯೆ, ಪ್ರವಾಹ, ತಾಂತ್ರಿಕ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ರೈಲು ರದ್ದಾದ ಉದಾಹರಣೆಗಳಿವೆ. ಆದರೆ ಒಂದು ಅಳಿಲಿನ ಕಾರಣದಿಂದ ರೈಲು ರದ್ದಾದ ಘಟನೆ ನಡೆದಿದೆ. ಹೌದು, ಟಿಕೆಟ್ ಇಲ್ಲದೆ ಅಳಿಲು ರೈಲು ಹತ್ತಿದೆ. ಪರಿಣಾಮ ರೈಲು ರದ್ದುಗೊಳಿಸಲಾಗಿದೆ. ಸಣ್ಣ ಅಳಿಲು ರೈಲಿನ ಬೋಗಿ ಹತ್ತಿದೆ. ಅತ್ತಿದಿಂದಿತ್ತ, ಓಡಾಡಿದೆ. ರೈಲಿನ ಸೀಟಿನಲ್ಲಿ ಕುಳಿತಿದೆ. ಇಷ್ಟೇ ನೋಡಿ. ಅಧಿಕಾರಿಗಳು ಬೇರೆ ದಾರಿ ಕಾಣದ ರೈಲು ಪ್ರಯಾಣ ರದ್ದು ಮಾಡಿದ್ದಾರೆ. ಬಳಿಕ ಈ ರೈಲಿನಲ್ಲಿ ಸೀಟು ಕಾಯ್ದಿರಿಸಿದ ಪ್ರಯಾಣಿಕರಿಗೆ ಬೇರೆ ವಿಶೇಷ ರೈಲು ನೀಡಿದ ಘಟನೆ ಬ್ರಿಟನ್‌ನ ಗೇಟ್‌ವಿಕ್‌ನಲ್ಲಿ ನಡೆದಿದೆ.
ಭಾರತದ ರೈಲಿನಲ್ಲಿ ಪ್ಲಾಟ್‌ಪಾರ್ಮ್‌ನಲ್ಲಿನ ನಾಯಿಗಳೂ ಪ್ರಯಾಣ ಮಾಡಿದ ಹಲವು ವಿಡಿಯೋಗಳು ವೈರಲ್ ಆಗಿದೆ. ನಾಯಿಗಳಿದೆ ಅನ್ನೋ ಕಾರಣಕ್ಕೆ ರೈಲು ನಿಲ್ಲಿಸಿದ ಅಥವಾ ರದ್ದು ಮಾಡಿದ ಘಟನೆ ನಡೆದಿಲ್ಲ. ಆದರೆ ಯುಕೆಯ ಗ್ರೇಟ್ ವೆಸ್ಟರ್ನ್ ರೈಲ್ವೇ ನಿರ್ಧಾರ ಹಲವರಿಗೆ ಅಚ್ಚರಿ ತಂದರೂ, ದಿಟ್ಟ ಕ್ರಮ ಎಂದು ಮತ್ತೆ ಕೆಲವರು ಪ್ರಶಂಸಿದ್ದಾರೆ.
ಬೆಂಗಳೂರಿನ ಕಂಟೊನ್ಮೆಂಟ್ ರೈಲು ನಿಲ್ದಾಣ ದುರಸ್ತಿ, ಡಿ.20ರ ವರೆಗೆ 41 ರೈಲು ನಿಲುಗಡೆ ರದ್ದು!
ರೈಲು ಪ್ರಯಾಣಿಕರನ್ನು ಹೊತ್ತ ರೈಲು ರೆಡ್‌ಹಿಲ್ ನಿಲ್ದಾಣಕ್ಕೆ ಆಗಮಿಸಿತ್ತು. ಇನ್ನೇನು ರೈಲು ಹೊರಬೇಕು ಅನ್ನುವಷ್ಟರಲ್ಲಿ ರೈಲಿನ ಬೋಗಿಯೊಳಗೆ ಅಳಿಲು ಹತ್ತಿದೆ. ಪ್ರಯಾಣಿಕರನ್ನು ಹೊರಗೆ ಇಳಿಯಲು ಸೂಚಿಸಿದ ಅಧಿಕಾರಿಗಳು, ಅಳಿಲನ್ನು ಹೊರಗೆ ಓಡಿಸಲು ಪ್ರಯತ್ನ ಪಟ್ಟಿದ್ದಾರೆ. ಅದೆಷ್ಟೇ ಪ್ರಯತ್ನಪಟ್ಟರೂ ಅಳಿಲು ಮಾತ್ರ ಹೊರಗೆ ಹೋಗಿಲ್ಲ.
ರೈಲಿನ ಬೋಗಿಯೊಳಗೆ ಅತ್ತಿಂದಿತ್ತ ಓಡಲು ಆರಂಭಿಸಿದೆ. ರೈಲು ಅಧಿಕಾರಿಗಳು ಸುಸ್ತಾಗಿದ್ದಾರೆ. ರೈಲು ಹೊರಡಬೇಕಾದ ಸಮಯ ಕಳೆದಿದಿದೆ. ಆದರೆ ಅಳಿಲು ಮಾತ್ರ ಬೋಗಿಯೊಳಗೆ ಸುತ್ತು ಹೊಡೆದಿದೆ. ವಿಳಂಬಗೊಂಡ ಕಾರಣ ಬೇರೆ ಅನಾಹುತಕ್ಕೆ ಕಾರಣಾಗಲಿದೆ ಅನ್ನೋ ಕಾರಣಕ್ಕೆ ರೈಲನ್ನೇ ರದ್ದುಗೊಳಿಸಲಾಗಿದೆ. ಈ ಕುರಿತು ರೈಲು ಅಧಿಕಾರಿಗಳು ಎರಡು ಪ್ರಮುಖ ಕಾರಣ ನೀಡಿದ್ದಾರೆ.
ಯಶವಂತಪುರ ರೈಲ್ವೇ ನಿಲ್ದಾಣ ಕಾಮಗಾರಿಯಿಂದ ಕೆಲ ರೈಲು ಸೇವೆ ರದ್ದು, ಇಲ್ಲಿದೆ ಕ್ಯಾನ್ಸಲ್ ಪಟ್ಟಿ!
ರೈಲು ಹೊರಗೆ ಓಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ರೈಲು ಹೊರಡಲು ವಿಳಂಬವಾಗಿದೆ. ವಿಳಂಬವಾಗಿ ರೈಲು ಹೊರಟರೆ ಇನ್ನುಳಿದ ರೈಲುಗಳನ್ನು ಕ್ರಾಸಿಂಗ್ ಬಳಿ ವಿಳಂಬ ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದ ಇತರ ಹಲವು ರೈಲುಗಳಿಗೆ ಸಮಸ್ಯೆಯಾಗಲಿದೆ ಎಂದಿದ್ದಾರೆ. ಇದೇ ವೇಳೆ ಚಲಿಸುತ್ತಿರುವ ರೈಲಿನಿಂದ ಅಳಿಲು ಹೊರಗೆ ಜಿಗಿದರೆ ಅಪಾಯ ಹೆಚ್ಚು ಎಂದಿದ್ದಾರೆ.
ಈ ಘಟನೆಯನ್ನು ರೈಲು ಅಧಿಕಾರಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ರೆಡ್‌ಹಿಲ್ ರೈಲು ರದ್ದಾಗಿದೆ. ಟಿಕೆಟ್ ಇಲ್ಲದೆ ಅಳಿಲು ರೈಲು ಹತ್ತಿದೆ. ಇದು ರೈಲು ನಿಯಮಕ್ಕೆ ವಿರುದ್ಧವಾಗಿದೆ. ಹೊರಗೆ ಓಡಿಸಲು ನಾವು ಪ್ರಯತ್ನಿಸಿದೆವು. ಆದರೆ ನಮಗೆ ಸಾಧ್ಯವಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.