ದಾಳಿಗೆ ಅಮೆರಿಕ ಸಿದ್ಧತೆ ಬೆನ್ನಲ್ಲೇ ಇರಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಮಹತ್ವದ ಸೂಚನೆ ನೀಡಿದೆ. ಭಾರತೀಯ ವಿದೇಶಾಂಗ ಇಲಾಖೆ ಸೂಚನೆ ಬೆನ್ನಲ್ಲೇ ಭಾರತೀಯರು ಇದೀಗ ಭಾರತಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ. 

ನವದೆಹಲಿ (ಫೆ.23) ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ದಟ್ಟವಾಗಿದೆ. ಶನಿವಾರ (ಫೆ.21) ಇರಾನ್ ಮೇಲೆ ಅಮೆರಿಕ ದಾಳಿ ಮಾಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಶನಿವಾರ ನಿರೀಕ್ಷಿತ ದಾಳಿ ನಡೆದಿಲ್ಲ. ಇದೀಗ ಎರಡು ದಿನಗಳ ಬಳಿಕ ಅಮೆರಿಕ ದಾಳಿಗೆ ಸಜ್ಜಾಗಿದೆ. ಅಮೆರಿಕ ದಾಳಿ ಮಾಡುವುದು ಬಹುತೇಕ ಖಚಿತಗೊಂಡಿದೆ. ಇದರ ಬೆನ್ನಲ್ಲೇ ಭಾರತೀಯ ವಿದೇಶಾಂಗ ಇಲಾಖೆ ಇರಾನ್‌ಲ್ಲಿ ನೆಲೆಸಿರುವ ಭಾರತೀಯರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಇರಾನ್‌ನಲ್ಲಿರುವ ಭಾರತೀಯರು ಇರಾನ್ ತೊರೆಯಲು ಸೂಚಿಸಿದೆ. ಆದಷ್ಟು ಬೇಗ ಲಭ್ಯವರುವ ವಿಮಾನಗಳ ಮೂಲಕ ಭಾರತಕ್ಕೆ ಮರಳಲು ಸೂಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇರಾನ್‌ನಲ್ಲಿನ ಭದ್ರತಾ ಪರಿಸ್ಥಿತಿ ಹದಗೆಟ್ಟಿದೆ. ಸದ್ಯ ಭಾರತೀಯ ನಾಗರೀಕರು ಇರಾನ್ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಇದೇ ವೇಳೆ ಇರಾನ್‌ನಲ್ಲಿನ ಭಾರತೀಯ ನಾಗರೀಕರು ಅನಗತ್ಯ ಪ್ರಯಾಣ ತಪ್ಪಿಸಲು ಸೂಚಿಸಿದ್ದಾರೆ. ಇರಾನ್‌ನಲ್ಲಿ ಗಲಭೆ, ಪ್ರತಿಭಟನೆಗಳಿಂದ ದೂರವಿರಲು ಸೂಚಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿರವು ಸೂಚನೆ

ಇರಾನ್‌ನಲ್ಲಿ ನೆಲೆಸಿರುವ ಭಾರತೀಯ ನಾಗರೀಕರು ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿರಲು ಸೂಚಿಸಿದೆ. ರಾಯಭಾರ ಕಚೇರಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡದ ಭಾರತೀಯರು ತಕ್ಷಣವೇ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಇರಾನ್‌ನಲ್ಲಿ ಹೆಚ್ಚುತ್ತಿರುವ ಅರಾಜಕತೆ, ಯುದ್ಧ ಭೀತಿಗಳಿಂದ ಭಾರತೀಯ ಸುರಕ್ಷತೆಗಾಗಿ ಈ ಸೂಚನೆ ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ತುರ್ತು ಪರಿಸ್ಥಿತಿಗಳು ಎದುರಾಗುತ್ತಿರುವ ಕಾರಣ ಭಾರತೀಯರು ತಮ್ಮ ಪ್ರಯಾಣದ ದಾಖಲೆ ಪತ್ರಗಳಾದ ಇಮಿಗ್ರೇಶನ್ ದಾಖಲೆ, ಪಾಸ್‌ಪೋರ್ಟ್ , ಗುರುತಿನ ಚೀಟಿ ಸೇರಿದಂತೆ ಇತರ ದಾಖಲೆ ಪತ್ರಗಳನ್ನು ರೆಡಿಯಾಗಿ ಇಟ್ಟುಕೊಳ್ಳವಂತೆ ಪ್ರಕಟಣೆಯಲ್ಲಿ ಸೂಚಿಸಿದೆ.ಯಾವುದೇ ಸಂದರ್ಭದಲ್ಲಿ ನೆರವು ಅಥವಾ ಮಾಹಿತಿ ಬೇಕಿದ್ದಲ್ಲಿ ಇರಾನ್ ಭಾರತೀಯರ ರಾಯಭಾರ ಕಚೇರಿ ಸಂಪರ್ಕಿಸುವಂತೆ ಸೂಚಿಸಿದೆ.