ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಇದೀಗ ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್‌ಗೆ PRS ತಂತ್ರಜ್ಞಾನ ಪರಿಚಯಿಸಿದೆ. ಏನಿದು ಹೊಸ PRS ತಂತ್ರಜ್ಞಾನ? ಇದರಿಂದ ಟಿಕೆಟ್ ಬುಕ್ ಮಾಡೋ ಪ್ರಯಾಣಿಕರಿಗೆ ಆಗೋ ಲಾಭವೇನು?
ನವದೆಹಲಿ (ಆ.11) ಭಾರತೀಯ ರೈಲ್ವೇ ಪ್ರಯಾಣಿಕರಿಗೆ ಗುಡ್ ನ್ಯೂಸ್. ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರು ರೈಲು ಟಿಕೆಟ್ ಬುಕಿಂಗ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಬುಕಿಂಗ್ ವೇಳೆ ಸರ್ವರ್ ಡೌನ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳಿಗೆ ಇದೀಗ ಭಾರತೀಯ ರೈಲ್ವೇ ಪರಿಹಾರ ಕಂಡುಕೊಂಡಿದೆ. ಇದೀಗ ರೈಲ್ವೇ ಇಲಾಖೆ ಟಿಕೆಟ್ ಬುಕಿಂಗ್‌ಗೆ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ತಂತ್ರಜ್ಞಾನ ಪರಿಚಯಿಸಿದೆ. ಹೊಸ PRS ತಂತ್ರಜ್ಞಾನದಿಂದ ತಕ್ಕಾಲ್, ಸಾಮಾನ್ಯ ರೈಲು ಟಿಕೆಟ್ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ಬುಕ್ ಮಾಡಲು ಸಾಧ್ಯವಿದೆ.
25 ಸಾವಿರದಿಂದ 1.5 ಲಕ್ಷ ಸಾಮರ್ಥ್ಯ
ಭಾರತೀಯ ರೈಲ್ವೇ ಇಲಾಖೆಯಲ್ಲಿ ಹಾಲಿ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪ್ರತಿ ನಿಮಿಷಕ್ಕೆ 25 ಸಾವಿರ ಟಿಕೆಟ್ ಬುಕಿಂಗ್ ಸಾಮರ್ಥ್ಯ ಹೊಂದಿತ್ತು. ಆದರೆ ಹೊಸ PRS ತಂತ್ರಜ್ಞಾನದಿಂದ ಪ್ರತಿ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಮರ್ಥ್ಯ ಹೊಂದಿದೆ. ಪ್ರತಿ ನಿಮಿಷದ ಟಿಕೆಟ್ ಬುಕಿಂಗ್ ಸಾಮರ್ಥ್ಯ ಹೆಚ್ಚಿಸಿರುವ ಕಾರಣ ಪ್ರಯಾಣಿಕರು ಯಾವುದೇ ಸಮಸ್ಯೆ ಇಲ್ಲದ, ಸುಲಭವಾಗಿ ಟಿಕೆಟ್ ಬುಕಿಂಗ್ ಸಾಧ್ಯವಾಗಲಿದೆ. ಈ ಸಾಮರ್ಥ್ಯ ಹೆಚ್ಚಳದಿಂದ ಲಾಗಿನ್ ಸಮಸ್ಯೆಗಳು, ಸರ್ವರ್, ಪೇಮೆಂಟ್ ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ.
ರೈಲು ಪ್ರಯಾಣಕ್ಕೆ ಟಿಕೆಟ್ ಬುಕಿಂಗ್ ಮಾಡಲು ಅತೀ ಹೆಚ್ಚಿನ ಬಳಕೆದಾರರು ವೆಬ್‌ಸೈಟ್, ಆ್ಯಪ್ ಮೂಲಕ ಪರಿಶೀಲನೆ ನಡೆಸುತ್ತಾರೆ. ಇದರಿಂದ ಹಲವರು ಬಾರಿ ಪ್ರಯಾಣಿಕರಿಗೆ ಸೀಟು ಇದೆ ಎಂದರೂ ಬುಕಿಂಗ್ ಮಾಡುವಾಗ ಸಮಸ್ಯೆಗಳು ಎದುರಾಗುತ್ತಿತ್ತು. ಒಂದೇ ಬಾರಿ ಅತೀ ಹೆಚ್ಚಿನ ಬಳಕೆದಾರರು ಸೈಟ್ ಅಥವಾ ಆ್ಯಪ್ ಬಳಕೆ ಮಾಡುವಾಗ ಜಾಮ್ ಸಮಸ್ಯೆಗಳು ತೀವ್ರವಾಗಿತ್ತು. ಆದರೆ ಹೊಸ PRS ವ್ಯವಸ್ಥೆಯಿಂದ ಪ್ರತಿ ನಿಮಿಷಕ್ಕೆ 40 ಲಕ್ಷ ಎನ್‌ಕ್ವೆರಿ ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ. ಹಳೇ ವ್ಯವಸ್ಥೆಯಲ್ಲಿ ಕೇವಲ 4 ಲಕ್ಷ ಎನ್‌ಕ್ವೆರಿ ಸಾಮರ್ಥ್ಯ ಹೊಂದಿತ್ತು.
ಆರ್ಟಿಫೀಶಿಯಲ್ ಇಂಟಲಿಜೆನ್ಸ್, ಕ್ಲೌಡ್ ತಂತ್ರಜ್ಞಾನವನ್ನು ರೈಲ್ವೇ ಸಚಿವಾಲಯ ಬಳಸಿಕೊಂಡಿದೆ. ಇದರಿಂದ ಪ್ರಯಾಣಿಕರ ಸುದೀರ್ಘ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ. ಬೇಸಿ ಕಾಲದಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದರು. ಒಂದು ಹಾಗೂ ಎರಡು ನಿಮಿಷಗಳಲ್ಲಿ ತತ್ಕಾಲ್ ಟಿಕೆಟ್ ಮುಗಿದು ಹೋಗುತ್ತಿತ್ತು. ಇದೀಗ ಎಲ್ಲಾ ಸಮಸ್ಯೆಗಳು ಬಗೆ ಹರಿದಿದೆ. ಹೊಸ PRS ತಂತ್ರಜ್ಞಾನ ಹಂತ ಹಂತವಾಗಿ ಜಾರಿಗೊಳ್ಳುತ್ತಿದೆ.


