ನವದೆಹಲಿ, (ಮೇ.10): ಸುಮಾರ ಒಂದೂವರೆ ತಿಂಗಳ ನಂತರ ಪ್ಯಾಸೆಂಜರ್ ರೈಲ್ವೆ ಸೇವೆ ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.

 ಮೇ 12 ರಿಂದ ಪ್ಯಾಸೆಂಜರ್‌ ರೈಲುಗಳು ಸಂಚಾರ ಆರಂಭಿಸಲಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಲಿದೆ. ವಿಶೇಷ ರೈಲುಗಳಂತೆ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಬೆಂಗಳೂರು ಸೇರಿದಂತೆ 15 ಪ್ರಮುಖ ಸ್ಥಳಗಳಿಗೆ ಈ ರೈಲುಗಳು ಸಂಚರಿಸಲಿವೆ ಎಂದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಅಮ್ಮಂದಿರಿಗೆ ವಿಶ್ವವೇ ಹೇಳಿತು ನಮನ; ದುಬೈನಲ್ಲಿ IPL ನಡೆಸಲು ಆಹ್ವಾನ; ಮೇ.10ರ ಟಾಪ್ 10 ಸುದ್ದಿ!

ರಾಷ್ಟ್ರ ರಾಜಧಾನಿ ನವದೆಹಲಿ, ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ನಾ, ಬಿಸಲ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾವ್, ಕೇಂದ್ರ ಮುಂಬೈ, ಅಹಮದಾಬಾದ್ ಹಾಗೂ ಜಮ್ಮುವಿನಲ್ಲಿ ರೈಲ್ವೆ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ.

ನಾಳೆ (ಸೋಮವಾರ) ಸಂಜೆ  4 ಗಂಟೆಯಿಂದ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಲಿದ್ದು, ಮರು ದಿನದಿಂದಲೇ ರೈಲುಗಳು ಸಂಚರಿಸಲಿವೆ. ಟಿಕೆಟ್‌ ಬುಕ್‌ ಮಾಡಬಯಸುವ ಪ್ರಯಾಣಿಕರು ರೈಲ್ವೇ ಇಲಾಖೆಯ ವೆಬ್‌ ಸೈಟ್‌ ನಲ್ಲಿ ಮಾತ್ರ ಬುಕ್‌ ಮಾಡಬೇಕಾಗಿದೆ.

ಪ್ರಯಾಣದ ವೇಳೆ ಪ್ರಯಾಣಿಕರು ತಮ್ಮ ಲಗೇಜ್‌ ಗಳನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಬೇಕಾಗುತ್ತದಲ್ಲದೇ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ.