ರೈಲು ಬ್ರೇಕ್ ಹಾಕಿದ ನಂತರ ನಿಲ್ಲುವ ದೂರವು ರೈಲಿನ ವೇಗ, ಬ್ರೇಕ್‌ಗಳ ಸಾಮರ್ಥ್ಯ ಮತ್ತು ಹಳಿಯ ಸ್ಥಿತಿಯಂತಹ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. 

ನವದೆಹಲಿ: ರೈಲುಗಳ ವೇಗವಾಗಿ ಚಲಿಸುತ್ತಿರುವಾಗ ಅದರ ಪಕ್ಕ ನಿಲ್ಲಲು ಭಯವಾಗುತ್ತದೆ. ಚಲಿಸುತ್ತಿರುವ ರೈಲನ್ನು ದೂರದಿಂದಲೇ ನೋಡಿದ್ರೆ ಭಯವಾಗುತ್ತದೆ. ರೈಲು ವೇಗವಾಗಿ ಚಲಿಸುತ್ತಿರುವ ಸಂದರ್ಭ ಅದರ ಪಕ್ಕ ನಿಂತಾಗ ಭೂಮಿ ನಡುಗಿದ ಅನುಭವವಾಗುತ್ತದೆ. ನಿಲ್ದಾಣ ದೂರವಿರುವಾಗಲೇ ರೈಲು ತನ್ನ ವೇಗವನ್ನು ಕಡಿಮೆ ಮಾಡಿಕೊಳ್ಳಲು ಆರಂಭಿಸುತ್ತದೆ. ಲೋಕೋಪೈಲಟ್‌ಗಳು ಪ್ಲಾಟ್‌ಫಾರಂ ಪ್ರವೇಶಕ್ಕೂ ಮುನ್ನವೇ ಬ್ರೇಕ್ ಹಾಕಿರುತ್ತಾರೆ. ಅಂದಾಜು ಲೆಕ್ಕದಲ್ಲಿ ರೈಲು ಸರಿಯಾಗಿ ಪ್ಲಾಟ್‌ಫಾರಂನಲ್ಲಿ ನಿಲುಗಡೆಯಾಗುತ್ತದೆ. ಕೆಲವೊಮ್ಮೆ ಮುಂದಿನ ಕೋಚ್‌ಗಳು ಪ್ಲಾಟ್‌ಫಾರಂನಿಂದ ಮುಂದೆ ಹೋಗಿರೋದನ್ನು ರೈಲು ಪ್ರಯಾಣಿಕರು ಗಮನಿಸಿರುತ್ತಾರೆ. ಹಾಗಾದ್ರೆ ಬ್ರೇಕ್ ಹಾಕಿದ ನಂತರ ರೈಲು ಎಷ್ಟು ದೂರದವರೆಗೆ ಚಲಿಸುತ್ತೆ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಶೇ.99ರಷ್ಟು ಜನರಿಗೆ ಈ ವಿಷಯವೇ ಗೊತ್ತಿಲ್ಲ.

ನೀವು ಬೈಕ್ ಅಥವಾ ಕಾರ್ ಚಲಾಯಿಸುತ್ತಿರುವಾಗ ಇದಕ್ಕಿದ್ದಂತರೆ ಬ್ರೇಕ್ ಹಾಕಿದ್ರೂ ನಿಮ್ಮ ವಾಹನ ಸ್ವಲ್ಪ ದೂರ ಕ್ರಮಿಸಿದ ನಂತರ ನಿಲುಗಡೆಯಾಗುತ್ತದೆ. ಬ್ರೇಕ್ ಹಾಕಿದ ಬಳಿದ 50 ರಿಂದ 60 ಮೀಟರ್ ಚಲಿಸಿದ ಬಳಿಕ ವಾಹನ ನಿಲ್ಲುತ್ತದೆ. ಅದೇ ರೀತಿ, ರೈಲಿಗೆ ಬ್ರೇಕ್ ಹಾಕಿದಾಗ, ಸ್ವಲ್ಪ ದೂರ ಹೋದ ನಂತರ ಅದು ನಿಲ್ಲುತ್ತದೆ. ರೈಲು ನಿಲ್ದಾಣ ಸುಮಾರು ದೂರದಲ್ಲಿದ್ದಾಗಲೇ ಬ್ರೇಕ್ ಹಾಕಲಾಗಿರುತ್ತದೆ. ಬ್ರೇಕ್ ಹಾಕಿದ ನಂತರ ಸುಮಾರು ಸಮಯದ ಬಳಿಕ ರೈಲು ನಿಲುಗಡೆಯಾಗುತ್ತದೆ.

ಬ್ರೇಕ್ ಹಾಕಿದ ನಂತರ ರೈಲು ನಿಲ್ಲಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ನಿಲುಗಡೆಯ ಸಮಯ ರೈಲು ಚಲಿಸುವ ವೇಗ ಮತ್ತು ಕೋಚ್‌ಗಳ ಮೇಲೆ ಆಧಾರಿತವಾಗಿರುತ್ತದೆ ಎಂದು ತಂತ್ರಜ್ಞರು ಹೇಳುತ್ತಾರೆ.

ತಂತ್ರಜ್ಞರು ಹೇಳೋದೇನು?

ಬ್ರೇಕ್ ಹಾಕಿದ ನಂತರ ರೈಲು ನಿಲ್ಲುವ ಅಂತರವು ಪ್ರತಿ ರೈಲಿನ ವೇಗ, ಬ್ರೇಕ್‌ಗಳ ಸಾಮರ್ಥ್ಯ ಮತ್ತು ಹಳಿಯ ಸ್ಥಿತಿಯಂತಹ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ.

ಸಾಮಾನ್ಯವಾಗಿ ಒಂದು ರೈಲು ನಿಲ್ಲುವ ಮೊದಲು ಬ್ರೇಕ್ ಹಾಕಿದ ನಂತರ 800 ರಿಂದ 1200 ಮೀಟರ್ ದೂರವನ್ನು ಕ್ರಮಿಸುತ್ತದೆ. ಯಾವುದೇ ರೈಲು ಇದ್ದಕ್ಕಿದ್ದಂತೆ ನಿಲ್ಲುವುದಿಲ್ಲ, ಬದಲಿಗೆ ಸಮಯ ತೆಗೆದುಕೊಳ್ಳುತ್ತದೆ. ರೈಲಿನ ವೇಗ ಹೆಚ್ಚಾದಷ್ಟು ನಿಲುಗಡೆಯಾಗುವ ಸಮಯ ಮತ್ತು ದೂರ ಸಹ ಹೆಚ್ಚಾಗುತ್ತದೆ.

1 ರಿಂದ 1.5 ಮೈಲುಗಳಷ್ಟು ದೂರ

ಒಂದು ರೈಲು ಗಂಟೆಗೆ 55 ಮೈಲು ವೇಗದಲ್ಲಿ ಚಲಿಸುತ್ತಿದ್ದರೆ ಮತ್ತು ಅದು ಸರಕು ರೈಲಾಗಿದ್ದರೆ, ಅದು 1 ರಿಂದ 1.5 ಮೈಲುಗಳಷ್ಟು ದೂರವನ್ನು ತೆಗೆದುಕೊಳ್ಳಬಹುದು. ರೈಲಿನ ಬ್ರೇಕಿಂಗ್ ಸಾಮರ್ಥ್ಯವು ಅದರ ನಿಲ್ಲಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಬ್ರೇಕ್‌ಗಳು ಉತ್ತಮ ಸ್ಥಿತಿಯಲ್ಲಿದ್ದರೆ ಅವು ರೈಲನ್ನು ಪರಿಣಾಮಕಾರಿಯಾಗಿ ನಿಲ್ಲಿಸುತ್ತವೆ. ಮೇಲ್ಮೈ ಗುಣಮಟ್ಟ ಮತ್ತು ಇಳಿಜಾರಿನಂತಹ ಹಳಿಗಳ ಪರಿಸ್ಥಿತಿಗಳು ಯಾವುದೇ ರೈಲಿನ ನಿಲುಗಡೆ ಅಂತರದ ಮೇಲೆ ಪರಿಣಾಮ ಬೀರುತ್ತವೆ.

8 ಬೋಗಿಗಳ ಪ್ಯಾಸೆಂಜರ್ ರೈಲು

ರೈಲು ಪೈಲಟ್ ತುರ್ತು ಬ್ರೇಕ್ ಹಾಕಿದರೆ, ಆ ಸಮಯದಲ್ಲಿ ರೈಲು ವೇಗವಾಗಿ ಚಲಿಸುತ್ತಿರುವುದರಿಂದ ರೈಲು ನಿಲ್ಲಲು ಹೆಚ್ಚಿನ ದೂರ ಕ್ರಮಿಸಬೇಕಾಗುತ್ತದೆ. ವರದಿಯ ಪ್ರಕಾರ, ಗಂಟೆಗೆ 80 ಮೈಲಿ ವೇಗದಲ್ಲಿ ಚಲಿಸುವ 8 ಬೋಗಿಗಳ ಪ್ಯಾಸೆಂಜರ್ ರೈಲು ನಿಲ್ಲಬೇಕಾದರೆ, ಅದು ಒಂದು ಮೈಲಿ ದೂರವನ್ನು ಕ್ರಮಿಸಬೇಕು. ಸರಕು ಸಾಗಣೆ ರೈಲುಗಳು ದೂರದಿಂದಲೇ ಬ್ರೇಕ್ ಹಾಕಿ ಸುಮಾರು ದೂರದವರೆಗೆ ನಿಧಾನವಾಗಿ ಚಲಿಸುತ್ತಿರುತ್ತವೆ. ಸಾಮಾನ್ಯವಾಗಿ ಗೂಡ್ಸ್ ರೈಲುಗಳು 40 ರಿಂದ 50 ವ್ಯಾಗನ್ ಹೊಂದಿರುತ್ತವೆ. ಇವುಗಳು ಅತ್ಯಧಿಕ ತೂಕವನ್ನು ಹೊಂದಿರುತ್ತವೆ.