ಭಾರತೀಯ ರೈಲ್ವೇ, ನಿಲ್ದಾಣಗಳಲ್ಲಿ ಹಲವು ವಿಶೇಷತೆಗಳಿವೆ. ಈ ಪೈಕಿ ಭಾರತದ ಅತೀ ಉದ್ದನೆಯ ಹೆಸರು ಹೊಂದಿದ ರೈಲು ನಿಲ್ದಾಣ ಯಾವುದು? ಈ ಹೆಸರಿನಲ್ಲಿದೆ 57 ಪದ.
ನವದೆಹಲಿ(ಜ.26) ಭಾರತೀಯ ರೈಲ್ವೇ ವಿಶ್ವದ ಅತೀ ದೊಡ್ಡ ರೈಲು ಸಂಪರ್ಕ ಜಾಲ ಪಟ್ಟಿಯಲ್ಲಿ ಸ್ಥಾನ ಪಡಿದಿದೆ. ಪ್ರತಿ ದಿನ 19,000ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತದೆ. ವಾರ್ಷಿಕವಾಗಿ 421 ಬಿಲಿಯನ್ ಜನ ರೈಲಿನ ಮೂಲಕ ಪ್ರಯಾಣಿಸುತ್ತಾರೆ. ಹಲವು ವಿಶೇಷತೆ ಹೊಂದಿರುವ ಭಾರತೀಯ ರೈಲ್ವೇಯಲ್ಲಿ ಅತೀ ಉದ್ದನೆಯ ಹೆಸರು ಹೊಂದಿ ರೈಲು ನಿಲ್ದಾಣ ಯಾವುದು? ಈ ಪ್ರಶ್ನೆಗೆ ಖುದ್ದು ರೈಲ್ವೇ ಸಚಿವಾಯ ಉತ್ತರ ನೀಡಿದೆ. ದೊಡ್ಡ ಹೆಸರಿನ ನಿಲ್ದಾಣದ ಹೆಗ್ಗಳಿಕೆಗೆ ತಮಿಳುನಾಡಿಗೆ ಸಂದಿದೆ.
ಭಾರತದಲ್ಲಿ 8000 ರೈಲ್ವೇ ನಿಲ್ದಾಣಗಳಿವೆ. ಈ ಪೈಕಿ ಚೆನ್ನೈನ ಸೆಂಟ್ರಲ್ ರೈಲ್ವೇ ನಿಲ್ದಾಣ ಭಾರತದ ಅತೀ ಉದ್ದನೆಯ ಹೆಸರು ಹೊಂದಿರ ರೈಲು ನಿಲ್ದಾಣ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಸಂಪೂರ್ಣ ಹೆಸರು ಪುರಚ್ಚಿ ತಲೈವರ್ ಡಾ. ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೇ ಸ್ಟೇಶನ್(Puratchi Thalaivar Dr. M.G. Ramachandran Central Railway). ಆದರೆ ಈ ಹೆಸರು ಇತ್ತೀಚೆಗೆ ಇಡಲಾಗಿದೆ. ಈ ನಿಲ್ದಾಣದ ಆರಂಭಿಕ ಹೆಸರು ಮಡ್ರಾಸ್ ಸೆಂಟ್ರಲ್ ರೈಲು ನಿಲ್ದಾಣ ಎಂದಾಗಿತ್ತು.
ಟಿಕೆಟ್ ರಿಸರ್ವೇಶನ್ ಮಾಡದ ಪ್ರಯಾಣಿಕರಿಗೆ ಗುಡ್ ನ್ಯೂಸ್, 10 ಹೊಸ ರೈಲು ಸೇವೆ ಆರಂಭ
ಸದ್ಯ ಅತೀ ಉದ್ದನೆಯ ಹೆಸರು ಪುರಚ್ಚಿ ತಲೈವರ್ ಡಾ. ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೇ ಸ್ಟೇಶನ್‌ಗಗೆ ಸಂದಿದೆ. ಆದರೆ ಬ್ರಿಟಿಷರ ಕಾಲದಲ್ಲಿ ಈ ನಿಲ್ದಾಣಕ್ಕೆ ಮಡ್ರಾಸ್ ಸೆಂಟ್ರಲ್ ಎಂದು ಹೆಸರಿಟ್ಟಿದ್ದರೆ, ಬಳಿಕ ಚೆನ್ನೈ ಸೆಂಟ್ರಲ್ ಎಂದು ಮರುನಾಮಕರಣ ಮಾಡಲಾಗಿತ್ತು. 2019ರಲ್ಲಿ ಮತ್ತೆ ಮರುನಾಮಕರಣ ಮಾಡಿ ಅತೀ ಉದ್ದನೆ ಹೆರು ಇಡಲಾಗಿತ್ತು. ತಮಿಳುನಾಡಿನ AIADMK ಸರ್ಕಾರ ಈ ಹೆಸರನ್ನು ಕೇಂದ್ರಕ್ಕೆ ಸೂಚಿಸಿತ್ತು. ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರಿಗೆ ಗೌರವ ಸೂಚಕವಾಗಿ ಈ ಹೆಸರು ಇಡಲಾಗಿದೆ.
ಎರಡನೇ ಅತೀ ಉದ್ದನೇಯ ರೈಲು ನಿಲ್ದಾಣ ಅನ್ನೋ ಹೆಗ್ಗಳಿಕೆಗೆ ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಗಡಿಯಲ್ಲಿರುವ ವಿಎನ್ ರಾಜುವರಿಪೇಟ ನಿಲ್ದಾಣಕ್ಕೆ ಸಂದಿದೆ. ಈ ನಿಲ್ದಾಣದ ಸಂಪೂರ್ಣ ಹೆಸರು ವೆಂಕಟನರಸಿಂಹರಾಜುವರಿಪೇಟ ರೈಲು ನಿಲ್ದಾಣ(Venkata Narasimha Rajuvaripet railway station). 2019ಕ್ಕಿಂತ ಮೊದಲು ಈ ವಿಎನ್ ರಾಜುವರಿಪೇಟ ನಿಲ್ದಾಣ ದೇಶದ ಅತೀ ಉದ್ದನೆ ಹೆಸರಿನ ರೈಲು ನಿಲ್ದಾಣ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ 2019ರಲ್ಲಿ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದ ಹೆಸರು ಮರುನಾಮಕರಣ ಮಾಡುವ ಮೂಲಕ ವಿಎನ್ ರಾಜುವರಿಪೇಟ ಎರಡನೇ ಸ್ಥಾನಕ್ಕೆ ಕುಸಿಯಿತು.
ವಂದೇ ಭಾರತ್ ಸೇರಿ ಕೆಲ ರೈಲಿನಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಉಚಿತ ಪ್ರಯಾಣ ಆಫರ್
