ಟಿಕೆಟ್ ರಿಸರ್ವೇಶನ್ ಮಾಡದ ಪ್ರಯಾಣಿಕರಿಗೆ ಗುಡ್ ನ್ಯೂಸ್, 10 ಹೊಸ ರೈಲು ಸೇವೆ ಆರಂಭ

ಟ್ರೈನ್ ಟಿಕೆಟ್ ರಿಸರ್ವೇಶನ್ ಮಾಡದೇ ಪ್ರಯಾಣಿಸುವ ಪ್ರಯಾಣಿಕರಿಗೆ ಇದೀಗ ಭಾರತೀಯ ರೈಲ್ವೇ ಗುಡ್ ನ್ಯೂಸ್ ನೀಡಿದೆ. ಬೆಂಗಳೂರು-ಚೆನ್ನೈ ಸೇರಿ 10 ಹೊಸ ರೈಲುಗಳು ಈ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಯಾವ ಮಾರ್ಗ, ಟಿಕೆಟ್ ದರ ಎಷ್ಟು?

Indian railways launch 10 new trains for passenger without prior reservation tickets

ನವದೆಹಲಿ(ಜ.20) ಭಾರತೀಯ ರೈಲ್ವೇ ಈಗಾಗಲೇ ಹಲವು ಹೊಸ ರೈಲು ಸೇವೆ, ವಂದೇ ಭಾರತ್, ಅಮೃತ ಭಾರತ್ ಸೇರಿದಂತೆ ಹಲವು ರೈಲು ಸೇವೆಗಳನ್ನು ನೀಡಿದೆ. ಸದ್ಯ ಭಾರತದ ರೈಲು ಸೇವೆ ಮೇಲ್ದರ್ಜೆಗೆ ಏರಿಸಲಾಗಿದೆ. ಗುಣಮಟ್ಟ ಉತ್ತಮಗೊಂಡಿದೆ. ಪ್ರಯಾಣ ಸುಲಭವಾಗಿದೆ. ಟಿಕೆಟ್ ಬುಕಿಂಗ್ ಸೇರಿದಂತೆ ಎಲ್ಲಾ ಮಾಹಿತಿಗಾಗಿ ಪರಿಣಾಮಕಾರಿಯಾಗಿ ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ರೈಲು ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಟಿಕೆಟ್ ರಿಸರ್ವೇಶನ್ ಮಾಡಿ ಪ್ರಯಾಣಿಸುವವರಿಗೆ ಹೆಚ್ಚಿನ ಸಮಸ್ಯೆಗಳು ಆಗುವುದಿಲ್ಲ. ಆದರೆ ರೈಲ್ವೇ ನಿಲ್ದಾಣಕ್ಕೆಬಂದು ಜನರಲ್ ಟಿಕೆಟ್ ಪಡೆದು ಪ್ರಯಾಣಿಸುವವರ ಪಾಡು ಹೇಳತೀರದು. ಕಿಕ್ಕಿರಿದು ತುಂಬಿದ ಜನರಲ್ ಬೋಗಿ, ಉಸಿರಾಡಲು ಜಾಗವಿಲ್ಲದೆ ಪಡಬಾರದ ಕಷ್ಟು ಪಡುತ್ತಿದ್ದಾರೆ. ಈ ಸಮಸ್ಯೆಗೆ ಉತ್ತರವಾಗಿ ಭಾರತೀಯ ರೈಲ್ವೇ ಇದೀಗ ಟಿಕೆಟ್ ರಿಸರ್ವೇಶನ್ ಮಾಡದೆ ಕೌಂಟರ್ ಮೂಲಕ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗಾಗಿ 10 ಹೊಸ ರೈಲು ಸೇವೆ ಆರಂಭಿಸಿದೆ. ಚೆನ್ನೈ-ಬೆಂಗಳೂರು ಸೇರಿದಂತೆ 10 ಮಾರ್ಗಗಳಲ್ಲಿ ಈ ರೈಲುಗಳು ಸೇವೆ ನೀಡಲಿದೆ.

ಈ ರೈಲು ಬೋಗಿಗಳು ಜನರಲ್ ಹಾಗೂ ಚೇರ್ ಕಾರ್ ಕೋಚ್‌ಗಳಾಗಿದೆ. ಇನ್ನು ಯುಟಿಎಸ್ ಆ್ಯಪ್ ಮೂಲಕವೂ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ವಿಶೇಷ ಅಂದರೆ ಈ 10 ರೈಲುಗಳಲ್ಲಿ ಪ್ರಯಾಣಿಸಲು ಕೌಂಟರ್ ಮೂಲಕ ಟಿಕೆಟ್ ಖರೀದಿಸಿದರೂ ಸಾಕು. ಅಂದರೆ ರೈಲು  ನಿಲ್ದಾಣದಲ್ಲಿ ಖರೀದಿಸುವ ಜನರಲ್ ಟಿಕೆಟ್‌ನಲ್ಲೂ ನಿಮಗೆ ಆಸನ ಕಾಯ್ದಿಕರಿಸಲಾಗುತ್ತದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಪ್ರಯಾಣಿಸಲು ಬಯಸಿದ ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಸಿಗಲಿದೆ. ಈ ರೀತಿಯ 10 ರೈಲು ಸೇವೆಗಳನ್ನು ಭಾರತೀಯ ರೈಲ್ವೇ ಆರಂಭಿಸಿದೆ. 

ಭಾರತೀಯ ರೈಲ್ವೇಯಿಂದ ಹೊಸ 50 ಅಮೃತ ಭಾರತ್ ರೈಲು, ಯಾವ ಮಾರ್ಗದಲ್ಲಿ ಸೇವೆ?

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್
ಹೊರಡುವ ಸಮಯ, ಚೆನ್ನೈನಿಂದ ಬೆಳಗ್ಗೆ 8 ಗಂಟೆಗೆ
ಆಗಮನ ಸಮಯ, ಬೆಂಗಳೂರು ರೈಲು ನಿಲ್ದಾಣಕ್ಕೆ ಮಧ್ಯಾಹ್ನ 3.30ಕ್ಕೆ

10 ಹೊಸ ರೈಲು ಹಾಗೂ ಮಾರ್ಗ
ಹೈದರಾಬಾದ್-ವಿಜಯವಾಡ ಎಕ್ಸ್‌ಪ್ರೆಸ್
ಹೊರಡುವ ಸಮಯ, ಹೈದರಾಬಾದ್‌ನಿಂದ ಬೆಳಗ್ಗೆ 7.30
ಆಗಮನ ಸಮಯ, ವಿಜಯವಾಡ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆಗೆ

ದೆಹಲಿ ಜೈಪುರ ಎಕ್ಸ್‌ಪ್ರೆಸ್
ಹೊರಡುವ ಸಮಯ, ದೆಹಲಿಯಿಂದ ಬೆಳಗ್ಗೆ 6 ಗಂಟೆಗೆ
ಆಗಮನ ಸಮಯ, ವಾರಣಾಸಿ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 1.30ಕ್ಕೆ

ಮುಂಬೈ-ಪುಣೆ ಸೂಪರ್‌ಫಾಸ್ಟ್
ಹೊರಡುವ ಸಮಯ, ಮುಂಬೈನಿಂದ ಬೆಳಗ್ಗೆ 7 ಗಂಟೆ
ಆಗಮನ ಸಮಯ, ಪುಣೆ ನಿಲ್ದಾಣಕ್ಕೆ ಬೆಳಗ್ಗೆ 11 ಗಂಟೆಗೆ

ಲಖನೌ ವಾರಾಣಸಿ ಎಕ್ಸ್‌ಪ್ರೆಸ್
ಹೊರಡುವ ಸಮಯ, ಲಖನೌನದಿಂದ ಬೆಳಗ್ಗೆ 7 ಗಂಟೆಗೆ
ಆಗಮನ ಸಮಯ, ವಾರಾಣಿಸಿ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 1.30ಕ್ಕೆ

ವಂದೇ ಭಾರತ್ ಸೇರಿ ಕೆಲ ರೈಲಿನಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಉಚಿತ ಪ್ರಯಾಣ ಆಫರ್

ಕೋಲ್ಕತಾ ಪಾಟ್ನ ಇಂಟರ್‌ಸಿಟಿ
ಹೊರಡುವ ಸಮಯ, ಕೋಲ್ಕಾತದಿಂದ ಬೆಳಗ್ಗೆ 5 ಗಂಟೆಗೆ
ಆಗಮನ ಸಮಯ, ಪಾಟ್ನಾ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 2 ಗಂಟೆಗೆ

ಅಹಮ್ಮದಾಬಾದ್ ಸೂರತ್ 
ಹೊರಡುವ ಸಮಯ, ಅಹಮ್ಮದಾಬಾದ್‌ನಿಂದ ಬೆಳಗ್ಗೆ 7 ಗಂಟೆಗೆ
ಆಗಮನ ಸಮಯ, ಸೂರತ್ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 1.30ಕ್ಕೆ

ಪಾಟ್ನಾ ಗಯಾ ಎಕ್ಸ್‌ಪ್ರೆಸ್
ಹೊರಡುವ ಸಮಯ, ಪಾಟ್ನಾದಿಂದ ಬೆಳಗ್ಗೆ 6 ಗಂಟೆಗೆ
ಆಗಮನ ಸಮಯ,ಗಯಾ ರೈಲು ನಿಲ್ದಾಣಕ್ಕೆ ರಾತ್ರಿ 9.30ಕ್ಕೆ

ಜೈಪುರ್ ಅಜ್ಮೀರ್ ಫಾಸ್ಟ್
ಹೊರಡುವ ಸಮಯ, ಜೈಪುರದಿಂದ ಬೆಳಗ್ಗೆ 8 ಗಂಟೆಗೆ
ಆಗಮನ ಸಮಯ,ಅಜ್ಮೀರ್ ರೈಲು ನಿಲ್ದಾಣಕ್ಕೆ 11.30ಕ್ಕೆ 

ಭೋಪಾಲ್ ಇಂದೋರ್
ಹೊರಡುವ ಸಮಯ, ಭೋಪಾಲ್‌ನಿಂದ ಬೆಳಗ್ಗೆ 6.30ಕ್ಕೆ
ಆಗಮನ ಸಮಯ, ಇಂದೋರ್ ರೈಲು ನಿಲ್ದಾಣಕ್ಕೆ ಮಧ್ಯಾಹ್ನ 12 ಗಂಟೆಗೆ
 

Latest Videos
Follow Us:
Download App:
  • android
  • ios