Asianet Suvarna News Asianet Suvarna News

ಸರಕು ಸಾಗಾಣಿಕೆಯಿಂದ ಬರೊಬ್ಬರಿ 4160 ಕೋಟಿ ರೂ. ಲಾಭ ಗಳಿಸಿದ ನೈಋತ್ಯ ರೈಲ್ವೆ

* ಕೊವಿಡ್ ಸಂಕಷ್ಟದ ಮಧ್ಯೆ ಭರ್ಜರಿ ಲಾಭ ಗಳಿಸಿದ ನೈಋತ್ಯ ರೈಲ್ವೆ..!!
*ಕೋವಿಡ್ ಮಧ್ಯೆ ಸರಕು ಸಾಗಾಣಿಕೆಯಿಂದ ಬರೊಬ್ಬ 4160 ಕೋಟಿ ರೂ. ಲಾಭ ಗಳಿಸಿದ ನೈಋತ್ಯ ರೈಲ್ವೆ..!!
* ಕಳೆದ ಹಣಕಾಸು ವರ್ಷಕ್ಕಿಂತ 15.5% ಅಭಿವೃದ್ಧಿಯನ್ನು ದಾಖಲಿಸಿದೆ.!
* ಗುಜರಿ ವಸ್ತುಗಳ ಮಾರಾಟದಿಂದ  ರೂ.138.04 ಕೋಟಿ ದಾಖಲೆಯ ಗಳಿಕೆ

South western Railway Net Profit Rs 4160 Crore In 2021 rbj
Author
Bengaluru, First Published Apr 1, 2022, 10:17 PM IST

ವರದಿ: ಗುರುರಾಜ ಹೂಗಾರ

ಹುಬ್ಬಳ್ಳಿ, (ಏ.01): ಪ್ರಯಾಣಿಕರಿಗೆ ಗುಣಮಟ್ಟದ ರೈಲು ಸೇವೆ ಜೊತೆಗೆ ಸರಕು ಸಾಗಾಣಿಕೆಯಲ್ಲಿ ನೈಋತ್ಯ ರೈಲ್ವೆ(South western Railway) 2021-22 ರ ಆರ್ಥಿಕ  ವರ್ಷದಲ್ಲಿ ಭರ್ಜರಿ ಪ್ರಗತಿ ಸಾಧಿಸಿದೆ.  2021-22 ರ ಹಣಕಾಸು ವರ್ಷದಲ್ಲಿ, ನೈಋತ್ಯ(SWR) ರೈಲ್ವೆ 44.12 ಮಿಲಿಯನ್ ಟನ್( million Tons) ಸರಕು ಸಾಗಣೆ ಮಾಡುವ ಮೂಲಕ 4160 ಕೋಟಿ ಆದಾಯ ಗಳಿಸಿದೆ.ಇದು ಕಳೆದ ಹಣಕಾಸು ವರ್ಷಕ್ಕಿಂತ( Last financial year) 15.5% ಹೆಚ್ಚು ಅಭಿವೃದ್ಧಿಯನ್ನು ದಾಖಲಿಸಿದೆ. ಸರಕು ಸಾಗಾಣಿಕೆಯಲ್ಲಿ ಕಬ್ಬಿಣ, ಸಿಮೆಂಟ್, ಆಹಾರ ಧಾನ್ಯಗಳನ್ನು ಸಾಗಾಟ ಹೆಚ್ಚಿನ ಪ್ರಮಾಣದ ಮಾಡಲಾಗಿದೆ.

ಇನ್ನು  2021-22 ರಲ್ಲಿ ನೈಋತ್ಯ ರೈಲ್ವೆ ತನ್ನ ಪಾರ್ಸೆಲ್  ಸೇವನೆಯಿಂದ( Parcel service)  ಬರೋಬ್ಬರಿ 121.56 ಕೋಟಿ. ಆದಾಯ ಗಳಿಕೆ ಮಾಡಿದ್ದು   238 ಆಟೋಮೊಬೈಲ್ ರೇಕ್‌ಗಳನ್ನು ಲೋಡ್ ಮಾಡಿ ಅದ್ಭುತ ಸೇವೆ ನೀಡಿದೆ. ಇನ್ನು ನೈಋತ್ಯ ರೈಲ್ವೆಯು ಗುಜರಿ( Scarp) ವಸ್ತುಗಳ ಮಾರಾಟದಲ್ಲು, ರೈಲ್ವೆ ಬೋರ್ಡ್(Railway Board) ನಿಗದಿಪಡಿಸಿದ ಗುರಿಯನ್ನು ಮೀರಿ  138.04 ಕೋಟಿ ದಾಖಲೆಯ ಗಳಿಕೆ ಮಾಡಿದ್ದು ಕೇವಲ ಸರಕು ಸಾಗಾಣಿಕೆ ಮಾತ್ರವಲ್ಲ ನೈಋತ್ಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಪ್ರಯಾಣಿಕರಿಗೆ ಗುಣಮಟ್ಟದ ಸಾರಿಗೆ ಸೇವೆ ಒದಗಿಸುವಲ್ಲಿ ಹಿಂದೆ ಬಿದ್ದಿಲ್ಲ.

South Western Railway: ನೈಋುತ್ಯ ರೈಲ್ವೆಯಿಂದ ವರ್ಷದಲ್ಲಿ 209 ಕಿಮೀ ರೈಲು ಮಾರ್ಗ ನಿರ್ಮಾಣ
 

2021-22 ರ ಅವಧಿಯಲ್ಲಿ, 187 ಕಿಲೋಮೀಟರ್ ಉದ್ದ ದ್ವಿಪಥಿಕರಣ( Doubling) ಮತ್ತು 22 ಕಿಲೋಮೀಟರ್ ಹೊಸ ಮಾರ್ಗ(New Railway line), ಮತ್ತು 511.7 ಕಿಲೋ ವಿದ್ಯುತಿಕರಣ (Electrification). ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು(Net Zero Carbon emission) ಸಾಧಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆ  ವರ್ಷದಲ್ಲಿ 26 ರೈಲುಗಳನ್ನು ಎಲೆಕ್ಟ್ರಿಕ್ ರೈಲ್ವೆ ಗಳಾಗಿ ಪರಿವರ್ತಿಸಲಾಗಿದೆ.

ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ( General Manager) ಸಂಜೀವ್ ಕಿಶೋರ್ ರವರು ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಇಲಾಖೆಯ ಪ್ರಧಾನ ಮುಖ್ಯಸ್ಥರ ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿ. ಪ್ರಮುಖ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದಕ್ಕೆ  ನೌಕರರಿಗೆ ಅಭಿನಂದಿಸಿ, ಪ್ರಶಂಸೆ  ವ್ಯಕ್ತಪಡಿಸಿದ್ದಾರೆ.

ಗ್ರಾಹಕರಿಗೆ ಸುರಕ್ಷಿತ ಪ್ರಯಾಣಕ್ಕೆ ಮೊದಲ ಆದ್ಯತೆ, ಇನ್ನಷ್ಟು ಗುಣಮಟ್ಟದ ಸೇವೆ ಒದಗಿಸಲು ಶ್ರಮಿಸುವಂತೆ ಕರೆ‌ ನೀಡಿದ್ದಾರೆ.

Follow Us:
Download App:
  • android
  • ios