Asianet Suvarna News Asianet Suvarna News

ಈ ರೈಲು ನಿಲ್ದಾಣದಲ್ಲಿ ವರ್ಷದ 15 ದಿನ ಮಾತ್ರ ಟ್ರೈನ್ ನಿಲುಗಡೆ, ಇನ್ನುಳಿದ ದಿನ ಹಾಳುಕೊಂಪೆ!

ವರ್ಷದ 365 ದಿನದಲ್ಲಿ ಕೇವಲ 15 ದಿನ ಮಾತ್ರ ಈ ನಿಲ್ದಾಣದಲ್ಲಿ ಟ್ರೈನ್ ನಿಲುಗಡೆ ಮಾಡಲಾಗುತ್ತದೆ. ಇನ್ನುಳಿದ ಯಾವುದೇ ದಿನ ನಿಲುಗಡೆ ಇಲ್ಲ, ಯಾರೂ ಇಳಿಯುವವರು, ಹತ್ತುವವರೂ ಇಲ್ಲ. ಈ ವಿಶೇಷ ರೈಲು ನಿಲ್ದಾಣ ಎಲ್ಲಿದೆ? ಯಾಕೆ ಹೀಗೆ?
 

Train stops this railway station only 15 days of Pitru Paksha in a year ckm
Author
First Published Sep 15, 2024, 10:31 PM IST | Last Updated Sep 15, 2024, 10:31 PM IST

ಭಾರತೀಯ ರೈಲ್ವೇ ಪ್ರತಿ ದಿನ ಕೋಟ್ಯಾಂತರ ಜನರಿಗೆ ರೈಲು ಸೇವೆ ನೀಡುತ್ತಿದೆ. ಭಾರತದ ಬಹುತೇಕ ಪ್ರಯಾಣಿಕರು ರೈಲು ಸೇವೆಯನ್ನೇ ನೆಚ್ಚಿಕೊಂಡಿದ್ದಾರೆ. ಇದೀಗ ಭಾರತೀಯ ರೈಲ್ವೇ ಆಧುನಿಕರಣಗೊಳ್ಳುತ್ತಿದೆ. ಹೊಸ ರೈಲು, ವಂದೇ ಭಾರತ್, ಅತ್ಯುತ್ತಮ ದರ್ಜೆಯ ರೈಲು ನಿಲ್ದಾಣ ಒದಗಿಸುತ್ತಿದೆ. ದೂರ ಪ್ರಯಾಣದ ರೈಲುಗಳು ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಇನ್ನು ಸ್ಥಳೀಯ, ಕೆಲವೇ ದೂರದ ರೈಲುಗಳು ಬಹುತೇಕ ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ. ಆದರೆ ಇಲ್ಲೊಂದು ನಿಲ್ದಾಣವಿದೆ. ಈ ನಿಲ್ದಾಣದಲ್ಲಿ ರೈಲು ವರ್ಷದ 15 ಮಾತ್ರ ನಿಲುಗಡೆಯಾಗುತ್ತದೆ. ಇನ್ನುಳಿದ ದಿನ ಇಲ್ಲಿ ರೈಲು ನಿಲ್ಲುವುದಿಲ್ಲ, ಜನರು ಇರುವುದಿಲ್ಲ. ಈ ವೇಳೆ ಹಾಳು ಕೊಂಪೆಯಾಗುತ್ತದೆ. 

365 ದಿನದಲ್ಲಿ ಕೇವಲ 15 ದಿನ ಮಾತ್ರಈ ದಾರಿ ಮೂಲಕ ಹಾದು ಹೋಗುವ ಎಲ್ಲಾ ರೈಲು ನಿಲುಗಡೆಯಾಗುತ್ತದೆ. ಈ ವಿಶೇಷ ರೈಲು ನಿಲ್ದಾಣ ಬಿಹಾರದಲ್ಲಿದೆ. ಅನುಗ್ರಹ ನಾರಾಯಣ ರೋಡ್ ರೈಲು ನಿಲ್ದಾಣವೇ ಈ ವಿಶೇಷ ಹಾಗೂ ಕುತೂಹಲ ರೈಲು ನಿಲ್ದಾಣ. ಈ ರೈಲು ನಿಲ್ದಾಣಧಲ್ಲಿ ಟಿಕೆಟ್ ಕೌಂಟರ್ ಕೂಡ ಇಲ್ಲ. ಕಾರಣ ವರ್ಷದ 15 ದಿನ ಬಿಟ್ಟು ಈ ನಿಲ್ದಾಣದಲ್ಲಿ ಯಾವ ರೈಲು ನಿಲುಗಡೆಯಾಗುವುದಿಲ್ಲ.

ಭಾರತದ ಈ ರೈಲು ನಿಲ್ದಾಣಕ್ಕೆ ತೆರಳಲು ಭಾರತೀಯರಿಗೂ ಬೇಕು ಪಾಸ್‌ಪೋರ್ಟ್, ವೀಸಾ!

ಇದೊಂದು ಸಣ್ಣ ರೈಲು ನಿಲ್ದಾಣ. ಆದರೆ ಪಿತೃ ಪಕ್ಷದ ವೇಳೆ ಈ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತದೆ. ಹೌದು, ಪಿತೃಪಕ್ಷದ 15 ದಿನ ಎಲ್ಲಾ ರೈಲುಗಳು ನಿಲುಗಡೆಯಾಗುತ್ತದೆ. ಇದಕ್ಕೆ ಕಾರಣ, ಈ ರೈಲು ನಿಲ್ದಾಣದ ಪಕ್ಕದಲ್ಲೇ ಪನ್‌ಪನ್ ನದಿ ಹರಿಯುತ್ತದೆ. ಇದಕ್ಕೆ ಆದಿ ಗಂಗಾ ನದಿ ಎಂದೂ ಕರೆಯುತ್ತಾರೆ. ನದಿ ತಟದ ಪನ್‌ಪನ್ ಘಾಟ್‌ನಲ್ಲಿ ಪಿಂಡದಾನ, ಪಿತೃಪಕ್ಷ ವಿಧಿವಿಧಾನಗಳನ್ನು ಮಾಡಲಾಗುತ್ತದೆ. ಇಲ್ಲಿ ವಿಧಿವಿಧಾನ ಮಾಡಿದವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಅನ್ನೋದು ನಂಬಿಕೆ.

ಪ್ರಮುಖವಾಗಿ ಪಿತೃಪಕ್ಷದ ಕಾರ್ಯಗಳಿಗೆ ಈ ನದಿ ಘಾಟ್ ಅತ್ಯಂತ ಪ್ರಮುಖವಾಗಿದೆ. ಕೇವಲ ಪಿತೃಪಕ್ಷದಲ್ಲಿ ಮಾತ್ರ ಇಲ್ಲಿಗೆ ಜನ ಆಗಮಿಸುತ್ತಾರೆ. ಇನ್ನುಳಿದ ಯಾವುದೇ ದಿನ ಇಲ್ಲಿಗೆ ಯಾರೂ ಆಗಮಿಸುವುದಿಲ್ಲ. ಹೀಗಾಗಿ ಪಿತೃಪಕ್ಷದ ವೇಳೆ ಹಲವುಭಾಗಗಳಿಂದ ಜನರು ಆಗಮಿಸಿ ವಿಧಿವಿಧಾನ ಪೂರೈಸುತ್ತಾರೆ. ಹೀಗಾಗಿ ಈ 15 ದಿನ ಮಾತ್ರ ಇಲ್ಲಿ ರೈಲು ನಿಲುಗಡೆಯಾಗುತ್ತದೆ. ಈ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ಎಲ್ಲಾ ರೈಲುಗಳು ವರ್ಷದಲ್ಲಿ ಈ 15 ದಿನ ನಿಲುಗಡೆ ಮಾಡುತ್ತದೆ. 

ದಕ್ಷಿಣ ರೈಲ್ವೆಯಲ್ಲಿ ನೇಮಕಾತಿ ಆರಂಭ: SSLC, ಡಿಗ್ರಿ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೆ ಉದ್ಯೋಗವಕಾಶ!

ಇನ್ನುಳಿದ ದಿನದಲ್ಲಿ ಈ ರೈಲು ನಿಲ್ದಾಣ ಗಿಡಗಂಟಿಗಳಿಂದಲೇ ತುಂಬಿರುತ್ತದೆ. ಈ ರೈಲು ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ, ವುಮೆನ್ ಚೇಂಜಿಂಗ್ ರೂಮ್ ಸೇರಿದಂತೆ ಯಾವುದೇ ಮೂಲಸೌಕರ್ಯ ಈ ನಿಲ್ದಾಣದಲ್ಲಿ ಇಲ್ಲ. 
 

Latest Videos
Follow Us:
Download App:
  • android
  • ios