ಭಾರತೀಯ ನೌಕಾಪಡೆಗೆ ಅಮೆರಿಕದಿಂದ ಬಂತು ಮೊದಲ ಪೊಸೈಡಾನ್ 8I ಏರ್‌ಕ್ರಾಫ್ಟ್!

ಕಳೆದೊಂದು ವರ್ಷದಿಂದ ಭಾರತೀಯ ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ, ಯುದ್ಧವಿಮಾನ, ರೆಡಾರ್ ಸೇರಿದಂತೆ ಹಲವು ಯುದ್ದೋಪಕರಣಗಳು ಸೇರ್ಪಡೆಯಾಗಿದೆ. ಫ್ರಾನ್ಸ್‌ನಿಂದ ರಾಫೆಲ್ ಫೈಟರ್ ಜೆಟ್ ಭಾರಿ ಸದ್ದು ಮಾಡಿದೆ. ಇದೀಗ ಅಮೆರಿಕದಿಂದ ಖರೀದಿಸಿರುವ  ಪೊಸೈಡಾನ್ 8I ಏರ್‌ಕ್ರಾಫ್ಟ್ ಭಾರತೀಯ ನಕೌಪಡೆಗೆ ಸೇರಿಕೊಂಡಿದೆ.

Indian Navy receives Poseidon 8I anti submarine warfare aircraft from US ckm

ನವದೆಹಲಿ(ನ.19): ಭಾರತೀಯ ನಾಕೌಪಡೆ ಮೊತ್ತ ಮೊದಲ ಪೊಸೈಡಾನ್ 8I ಆ್ಯಂಟಿ ಸಬ್‌ಮರೈನ್ ಏರ್‌ಕ್ರಾಫ್ಟ್ ಸೇರ್ಪಡೆಗೊಂಡಿದೆ. ಅತ್ಯಾಧುನಿಕ ಸೆನ್ಸಾರ್, ಕಡಲಲ್ಲಿ ವಿರೋಧಿಗಳ ಮೇಲೆ ಹದ್ದಿನ ಕಣ್ಣಿಡಬಲ್ಲ ಹಾಗೂ ಜಲಂತರ್ಗಾಮಿ ವಿರೋಧಿ ಏರ್‌ಕ್ರಾಫ್ಟ್ ಇದಾಗಿದ್ದು, ಅಮೆರಿಕದಿಂದ ಖರೀದಿಸಲಾಗಿದೆ.

ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ: ರುದ್ರಂ ಆ್ಯಂಟಿ ರೇಡಿಯೇಶನ್ ಕ್ಷಿಪಣಿ ಪರೀಕ್ಷೆ ಯಶಸ್ವಿ!

ಬರೋಬ್ಬರಿ 1.1 ಬೀಲಿಯನ್ ಅಮೆರಿಕನ್ ಡಾಲರ್(81,61,73,05,000 ರೂಪಾಯಿ) ನೀಡಿ ಭಾರತ 4 ಪೊಸೈಡಾನ್ 8I ಆ್ಯಂಟಿ ಸಬ್‌ಮರೈನ್ ಏರ್‌ಕ್ರಾಫ್ಟ್ ಖರೀದಿಸಿದೆ. ಇದರಲ್ಲಿ ಮೊದಲ ಏರ್‌ಕ್ರಾಫ್ಟ್ ಇದೀಗ ಭಾರತೀಯ ನೌಕಾಪಡೆ ಸೇರಿಕೊಂಡಿದೆ. ಭಾರತೀಯ ನೌಕಾಪಡೆ P-8I ಏರ್‌ಕ್ರಾಫ್ಟ್ ಹೊಂದಿದೆ. ಈ ಏರ್‌ಕ್ರಾಫ್ಟ್‌ಗಳನ್ನು ಹಿಂದೂ ಮಹಾಸಾಗರದಲ್ಲಿ ಚೀನಾ ಯುದ್ದನೌಕೆ, ಸಬ್ ಮರಿನ್ ಮೇಲೆ ಹದ್ದಿನ ಕಣ್ಮಿಡಲು ನಿಯೋಜಿಸಲಾಗಿದೆ.

ಇಸ್ರೇಲ್ ನಿರ್ಮಿತ ಫಾಲ್ಕನ್ ಖರೀದಿಗೆ ಭಾರತ ಒಪ್ಪಂದ: ಚೀನಾ, ಪಾಕ್‌ಗೆ ಶುರುವಾಯ್ತು ನಡುಕ!...

ನೂತನ ಪೊಸೈಡಾನ್ 8I ಏರ್‌ಕ್ರಾಫ್ಟ್ ಗೋವಾದ ನೇವಲ್ ಬೇಸ್‌ನಲ್ಲಿರುವ INS ಹನ್ಸಾ ಮೇಲೆ ಬಂದಿಳಿದಿದೆ. 2016ರಲ್ಲಿ ರಕ್ಷಣಾ ಸಚಿವರು ಅಮೆರಿಕ ಜೊತೆ 1.1 ಬೀಲಿಯನ್ ಡಾಲರ್ ಒಪ್ಪಂದ ಮೂಲಕ ಪೊಸೈಡಾನ್ 8I ಏರ್‌ಕ್ರಾಫ್ಟ್ ಖರೀದಿಸಿದ್ದರು. 4 ವರ್ಷಗಳ ಬಳಿಕ ಪೊಸೈಡಾನ್ 8I ಏರ್‌ಕ್ರಾಫ್ಟ್ ಭಾರತದ ನೌಕಾಪಡೆ ಸೇರಿಕೊಂಡಿದೆ.

ಕಳೆದ ವರ್ಷ ಕೇಂದ್ರ ಸರ್ಕಾರ P-8I ಖರೀದಿ ಒಪ್ಪಂದವನ್ನು ಕ್ಲೀಯರ್ ಮಾಡಿದೆ. ಕೆಲ ತಿಂಗಳುಗಳ ಹಿಂದೆ  P-8I ಏರ್‌ಕ್ರಾಫ್ಟ್‌ಗಳನ್ನು ಪೂ್ರ್ವ ಲಡಾಖ್‌ನಲ್ಲಿ ಚೀನಾ ಸೈನ್ಯದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು  P-8I ಏರ್‌ಕ್ರಾಫ್ಟ್ ನಿಯೋಜಿಸಲಾಗಿದೆ.

Latest Videos
Follow Us:
Download App:
  • android
  • ios