ಡಿಸೆಂಬರ್ 4 ಭಾರತೀಯ ನೌಕಾಪಡೆ ದಿನಾಚರಣೆ. 1971ರ ಡಿಸೆಂಬರ್ 4 ರಂದು ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದ ಭಾರತೀಯ ನೌಕಾಪಡೆ ಪ್ರತಿ ವರ್ಷ ಈ ದಿನವನ್ನು ನೌಕಾಪಡೆ ದಿನವಾಗಿ ಆಚರಿಸುತ್ತಿದೆ. ಇದೀಗ ಭಾರತೀಯ ನೌಕಾಪಡೆ ದಿನಾಚರಣೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

ನವಜದೆಹಲಿ(ಡಿ.04): 1971ರ ಯುದ್ಧದದಲ್ಲಿ ಪಾಕಿಸ್ತಾನದ ಕರಾಚಿ ಬಂದರು ಮೇಲೆ ದಾಳಿ ಮಾಡಿ ಪಾಕಿಸ್ತಾನದ ಸದ್ದಡಗಿಸಿದ ನೌಕಾಪಡೆ ಪ್ರತಿ ವರ್ಷ ದಾಳಿ ಮಾಡಿದ ಡಿಸೆಂಬರ್ 4ನೇ ದಿವನ್ನು ನೌಕಾಪಡೆ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಕೊರೋನಾ ಕಾರಣ ಈ ಬಾರಿಯ ನೌಕಾಪಡೆ ದಿನಾಚರಣೆ ವಿಶೇಷವಾಗಿತ್ತು. ಈ ವಿಶೇಷ ದಿನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಶುಭಕೋರಿದ್ದಾರೆ.

ಭಾರತದ ನೌಕಾದಳಕ್ಕೆ F-18 ಫೈಟರ್ಸ್ ಜೆಟ್ ನೀಡಲು ಮುಂದಾದ ಅಮೆರಿಕ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೌಕಾಪಡೆಯ ಎಲ್ಲಾ ಸಿಬ್ಬಂದಿಗಳಿಗೆ, ಸೇವೆ ಸಲ್ಲಿಸಿದ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ. ನೌಕಾಪಡೆ ಶುಭದಿನಾಚರಣೆಯಂದು ಎಲ್ಲಾ ಸಿಬ್ಬಂದಿಗಳಿಗೆ ಶುಭಾಶಯ. ನಮ್ಮ ಸಮುದ್ರ, ಗಡಿಗಳನ್ನು ಸುರಕ್ಷಿತವಾಗಿಡುವಲ್ಲಿ ಮುಂಚೂಣಿಯಲ್ಲಿರುವ ನೌಕಾಪಡೆಗೆ ಅಭಿನಂದನೆಗಳು. ಶೌರ್ಯ, ಧೈರ್ಯ ಹಾಗೂ ವೃತ್ತಿಪರತೆಗೆ ವಂದನೆಗಳು ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಭಾರತೀಯ ನೌಕಾಪಡೆಗೆ ಅಮೆರಿಕದಿಂದ ಬಂತು ಮೊದಲ ಪೊಸೈಡಾನ್ 8I ಏರ್‌ಕ್ರಾಫ್ಟ್!.

ಎಲ್ಲಾ ನೌಕಾಪಡೆಯ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ನೌಕಾಪಡೆಯ ದಿನಾಚರಣೆಯ ಶುಭಾಶಯ. ಕರಾವಳಿಯನ್ನು ರಕ್ಷಿಸುತ್ತಿರುವ , ಸಮುದ್ರದಲ್ಲಿ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ, ಅಗತ್ಯ ಸಮಯದಲ್ಲಿ ಮಾನವೀಯ ನೆರವು ನೀಡುತ್ತಿರುವ ಹಾಗೂ ನಮ್ಮ ಕಡಲ ಸಂಪ್ರದಾಯವನ್ನು ಅದೇ ಗೌರವದಿಂದ ಉಳಿಸಿಕೊಂಡಿರುವ ನಮ್ಮ ಹೆಮ್ಮೆಯ ನೌಕಾಪಡೆಗೆ ವಂದನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Scroll to load tweet…

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ನಾಯಕರು ನೌಕಾಪಡೆ ದಿನಾಚರಣೆಗ ಶುಭಕೋರಿದ್ದಾರೆ.

Scroll to load tweet…