ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಅರ್ಧ ಭಾರತ ಕೇಳಿದ ಪ್ರೊಫೆಸರ್, ಪ್ರತಿಭಟನೆ ಆರಂಭ!
ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಎಲ್ಲೆಡೆ ರಾಮನಾಮ ಮೊಳಗುತ್ತಿದೆ. ಇದು ಕೆಲವರನ್ನು ಕೆರಳಿಸಿದೆ. ಇದರ ಬೆನ್ನಲ್ಲೇ ಮುಸ್ಲಿಂ ಪ್ರೊಫೆಸರ್ ಮಾಡಿರುವ ಟ್ವೀಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ಭಾರತೀಯ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಅರ್ಧಕ್ಕೂ ಹೆಚ್ಚು ಭೂಭಾಗವನ್ನೇ ಕೇಳಿದ ಪೋಸ್ಟ್ ಕೋಲಾಹಲ ಸೃಷ್ಟಿಸಿದೆ.
ಪಾಟ್ನಾ(ಜ.07) ಭಾರತ ಈಗಾಗಲೇ ಘನಘೋರ ವಿಭಜನೆಯ ನೋವು ಅನುಭವಿಸಿದೆ. ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಕೂಗನ್ನು ಪುರಸ್ಕರಿಸಿ 1947ರಲ್ಲಿ ಪಾಕಿಸ್ತಾನ ರಚನೆಯಾಗಿತ್ತು. ಆದರೆ ಪಾಕಿಸ್ತಾನದಿಂದ ಭಾರತಕ್ಕಾಗಿರುವ ನಷ್ಟ, ನೋವು, ಉಪಟಳ ಇನ್ನೂ ಕಡಿಮೆಯಾಗಿಲ್ಲ. ಇದೀಗ ಭವ್ಯ ರಾಮ ಮಂದಿರ ನಿರ್ಮಾಣವಾದ ಬೆನ್ನಲ್ಲೇ ಇದೀಗ ಭಾರತದಲ್ಲಿರುವ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಅನ್ನೋ ಕೂಗು ಬಲವಾಗುತ್ತಿದೆ. ಧರ್ಮದ ಆಧಾರದಲ್ಲಿ ಮತ್ತೊಮ್ಮೆ ಭಾರತವನ್ನು ವಿಭಜಿಸು ಪ್ರಯತ್ನಕ್ಕೆ ಕೆಲವರು ಕೈಹಾಕಿದ್ದಾರೆ. ಬಿಹಾರದ ಜಯ ಪ್ರಕಾಶ್ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಖುರ್ಷೀದ್ ಅಲಂ ಇದೀಗ ಭಾರತೀಯ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ವಿವಾದ ಎಬ್ಬಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಪೋಸ್ಟ್ ಕೋಲಾಹಲವನ್ನೇ ಎಬ್ಬಿಸಿದೆ. ಒಂಂದೆದೆ ವಿದ್ಯಾರ್ಥಿಗಳು, ಸಂಘಟನೆಗಳು ತೀವ್ರ ಪ್ರತಿಭಟನೆ ಆರಂಭಿಸಿದ್ದಾರೆ. ಇತ್ತ ಆಡಳಿತ ಮಂಡಳಿಯ ಖಡಕ್ ಎಚ್ಚರಿಕೆ ಬೆನ್ನಲ್ಲೇ ಪ್ರೊಫೆಸರ್ ರಾಜೀನಾಮೆ ನೀಡಿದ್ದಾರೆ.
ಪ್ರೊಫೆಸರ್ ಖುರ್ಷೀದ್ ಅಲಂ ಮಾಡಿರುವ 2 ಭಾರತ ವಿರೋಧಿ ಪೋಸ್ಟ್ ಪ್ರತಿಭಟೆಯನ್ನು ತೀವ್ರಗೊಳಿಸಿದೆ. ಒಂದು ಪೋಸ್ಟ್‌ನಲ್ಲಿ ಯುನೈಟೆಡ್ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ, ಜಿಂದಾಬಾದ್ ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಭಾರತೀಯ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರಬೇಕು. ಈ ರಾಷ್ಟ್ರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ತಾಗಿಕೊಂಡು ಇರಬೇಕು ಎಂದು ಬಹುತೇಕ ಅರ್ಧ ಭಾರತದ ಭೂಭಾಗವನ್ನೇ ಕೇಳಿದ್ದಾರೆ.
ರಾಮ ಮಂದಿರ ಉದ್ಘಾಟನೆ ಬೆನ್ನಲ್ಲೇ ಮುಸ್ಲಿಂ ಸಮುದಾಯಕ್ಕೆ ಒವೈಸಿ ಮಹತ್ವದ ಕರೆ!
ಅಸಿಸ್ಟೆಂಟ್ ಪ್ರೊಫೆಸರ್ ಖುರ್ಷೀದ್ ಅಲಂ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಈ ಪೋಸ್ಟ್ ಕ್ಷಣಾರ್ಧದಲ್ಲೇ ವಿವಾದಕ್ಕೆ ಕಾರಣವಾಗಿದೆ. ಜಯ ಪ್ರಕಾಶ್ ವಿಶ್ವವಿದ್ಯಾಲದ ವಿದ್ಯಾರ್ಥಿಗಳು ಹಾಗೂ ಇತರ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದೆ. ಇದರ ಬೆನ್ನಲ್ಲೇ ವಿಶ್ವವಿದ್ಯಾಲಯ ಖುರ್ಷೀದ್ ಅಲಂಗೆ ನೋಟಿಸ್ ನೀಡಿತ್ತು.
ಕೇವಲ ನೋಟಿಸ್‌ನಿಂದ ಪ್ರತಿಭಟನಾಕಾರರು ತಣ್ಣಗಾಗಿಲ್ಲ, ಪ್ರತಿಭಟನೆ ತೀವ್ರಗೊಂಡಿದೆ. ರಸ್ತೆ ತಡೆದು, ಕಾಲೇಜುಗಳ ಮುಂದೆ ಭಾರಿ ಪ್ರತಿಭಟನೆ ನಡೆಸಲಾಗಿತ್ತು. ಇದೇ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಇತ್ತ ಕಾಲೇಜು ಆಡಳಿತ ಮಂಡಳಿ ಪ್ರೊಫೆಸರ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪ್ರೊಫೆಸರ್ ರಾಜೀನಾಮೆ ನೀಡಿದ್ದಾರೆ.
ಪ್ರೊಫೆಸರ್ ಪೋಸ್ಟ್ ಕುರಿತು ಕಾಲೇಜು ಆಡಳಿತ ಮಂಡಳಿ ರಾಜಭವನ, ಜಿಲ್ಲಾಧಿಕಾರಿ ಹಾಗೂ ಸಬ್ ಇನ್ಸ್‌ಪೆಕ್ಟರ್‌ಗೆ ವಿವರಣೆ ನೀಡಿದೆ. ಇಷ್ಟೇ ಅಲ್ಲ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಇತ್ತ ರಾಜೀನಾಮೆ ನೀಡಿದ ಪ್ರೊಫಸರ್ ಅಲಂ, ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಅದರಂತೆ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಭಾರತ ಜಾತ್ಯಾತೀತ ರಾಷ್ಟ್ರ ಎಂದು ಸಂವಿಧಾನ ಹೇಳಿದೆ. ಆದರೆ ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಇನ್ನು ಕೋರ್ಟ್ ನೀಡಿರುವ ತೀರ್ಪು ಕೂಡ ಮುಸ್ಲಿಮರಿಗೆ ವಿರುದ್ಧವಾಗಿದೆ. ಹೀಗಾಗಿ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಅವಶ್ಯಕತೆ ಇದೆ ಎಂದು ತಮ್ಮ ಪೋಸ್ಟ್‌ಗೆ ಸಮರ್ಥನೆ ನೀಡಿದ್ದಾರೆ.
ಶೀಘ್ರವೇ ಇನ್ನೊಂದು ಪುಲ್ವಾಮಾ ದಾಳಿ ನಡೆಯಲಿದೆ: ಮದ್ರಾಸದ ವಿದ್ಯಾರ್ಥಿಯಿಂದ ಟ್ವಿಟ್ಟರ್‌ನಲ್ಲಿ ಪೋಸ್ಟ್