Gen Z ಪೀಳಿಗೆಯವರಂತೂ ಯಾವುದಕ್ಕೂ ಚಿಂತೆ ಮಾಡೋದಿಲ್ಲ, ಕೇರ್‌ ಮಾಡೋದಿಲ್ಲ, ಜವಾಬ್ದಾರಿ ತಗೊಳಲ್ಲ ಎನ್ನುವ ದೂರು ಇದೆ. ಈಗ ಬೆಂಗಳೂರಿನ ಕನ್ನಡಿಗನೋರ್ವ ಏಕಾಏಕಿ ಕೆಲಸ ಬಿಟ್ಟು, ಸಮಸ್ಯೆ ತಂದುಕೊಂಡಿದ್ದಾರೆ. 

ಬೆಂಗಳೂರು ಮೂಲದ ಅಂಶುಲ್ ಉತ್ತಯ್ಯ ಎನ್ನುವ Gen Z ಯುವಕನೊಬ್ಬ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಆಮೇಲೆ ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಕೆಲಸ ಬೋರ್‌ ಆಗ್ತಿದೆ ಎಂದು ಕೆಲಸ ಬಿಟ್ಟಿದ್ದಾರೆ. ಆಮೇಲೆ ಬೇರೆ ಕೆಲಸ ಸಿಕ್ಕಿಲ್ಲ ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ. ಮಾರ್ಕೆಟ್‌ ಡೌನ್‌ ಆಗಿದೆ ಎಂದು ಅವ ಬೇಸರ ಮಾಡಿಕೊಂಡಿದ್ದಾರೆ. 22 ವರ್ಷದ ಅಂಶುಲ್ ಉತ್ತಯ್ಯ ಅವರು, “ಯಾವುದೇ ಪ್ಲಾನ್ ಮಾಡಲಿಲ್ಲ, ಹಾಗೆಯೇ ಇರೋ ನನ್ನ ಮೊದಲ ಕೆಲಸವನ್ನು ಬಿಟ್ಟೆ. ಈಗ ಹೊಸ ಉದ್ಯೋಗ ಹುಡುಕಲು ಕಷ್ಟಪಡ್ತಿದ್ದೀನಿ. ನಾನು ಫಸ್ಟ್‌ ಇಂಟರ್‌ವ್ಯೂ ಕೊಟ್ಟಿದ್ದೆ. ಕೆಲಸ ಬಿಟ್ಟಮೇಲೆ ಬೇಜಾರಾಗುತ್ತಿದೆ" ಎಂದು ಹೇಳಿದ್ದಾರೆ.

ಕೆಲಸ ಇದ್ರೆ ಹೇಳಿ

"ಹೊಸ ಜಾಬ್‌ ಹುಡುಕೋದು ಕಷ್ಟವಾಗುತ್ತದೆ ಅಂತ ಗೊತ್ತಿರಲಿಲ್ಲ. ಜಾಬ್‌ ಮಾರ್ಕೆಟ್‌ ಯಾಕೆ ಇಷ್ಟು ಕೆಟ್ಟದಾಗಿದೆ? ನಾನು ತುಂಬ ದಿನಗಳಿಂದ ಹುಡುಕಿದರೂ ಜಾಬ್‌ ಮಾತ್ರ ಸಿಗಲಿಲ್ಲ. ನಿಮಗೆ ಜಾಬ್‌ ಬಗ್ಗೆ ಗೊತ್ತಿದ್ದರೆ, ಎಲ್ಲಿಯಾದರೂ ಇದ್ದರೆ ದಯವಿಟ್ಟು ಮೆಸೇಜ್‌ ಮಾಡಿ” ಎಂದು ಮನವಿ ಮಾಡಿದ್ದಾರೆ.

ಅಂಶುಲ್‌ ಅವರು ನಾನು ನಾಳೆ ರಾಜೀನಾಮೆ ಕೊಡ್ತಿದ್ದೀನಿ ಎಂದು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದರು. ಆಸ್ಟ್ರೇಲಿಯಾದ ಎರಡು ಯುನಿವರ್ಸಿಟಿಗಳಿಂದ ಉನ್ನತ ವ್ಯಾಸಂಗ ಮಾಡಲು ಆಫರ್ ಬಂದರೂ ಕೂಡ ಅವರು ಆಸಕ್ತಿ ಇಲ್ಲ ಎಂದು ಬಿಟ್ಟರು.

ಪಾಲಕರಿಗೆ ಇಷ್ಟವಿಲ್ಲ

“ನಾನು ಮಾಡೋ ಕೆಲಸ ಇಷ್ಟ ಇಲ್ಲ. ನನ್ನ ಬಳಿ ಮತ್ತೆ ಕೆಲಸ ಮಾಡಲು ಇಷ್ಟವೇ ಇಲ್ಲ ಎನ್ನೋಮಟ್ಟಕ್ಕೆ ಬೇಸರ ಬಂದಿತ್ತು. ನನ್ನ ಟೈಮ್‌ ಹಾಳು ಮಾಡಿಕೊಳ್ತಿದೀನಿ ಎಂದು ಅನಿಸಿ ಜಾಬ್‌ ಬಿಟ್ಟೆ. ನನ್ನ ಪಾಲಕರಿಗೆ ಇದೆಲ್ಲ ಇಷ್ಟವೇ ಇರಲಿಲ್ಲ" ಎಂದು ಹೇಳಿದ್ದಾರೆ.

ಅಂಶುಲ್‌ ಈ ಬಗ್ಗೆ ಫಸ್ಟ್‌ ವಿಡಿಯೋ ಹಾಕಿದಾಗ ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 10,000 ಫಾಲೋವರ್ಸ್‌ ಇದ್ದು, ಈಗ ಫಾಲೋವರ್ಸ್‌ ಸಂಖ್ಯೆ 32,000 ದಾಟಿದೆ.

ಅನೇಕರು ಈ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ.

  • ವೃತ್ತಿ ಅಥವಾ ಕೆಲಸ ಮತ್ತು ಹವ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡುವುದು ಮುಖ್ಯ. ಹವ್ಯಾಸದಿಂದ ಸಂಪಾದನೆ ಬರಬೇಕು, ಅಲ್ಲಿಯವರೆಗೆ ನೀವು ಮಾಡುವ ಉದ್ಯೋಗ ಆರ್ಥಿಕವಾಗಿ ಗಟ್ಟಿಯನ್ನಾಗಿ ಮಾಡುವುದು
  • ಧೈರ್ಯದಿಂದ ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದೀರಿ, ಒಳ್ಳೆಯದಾಗಲಿ
  • ಸತ್ಯ ಏನು?
  • ಇಂದು ಎಂಎನ್‌ಸಿ ಕಂಪೆನಿಗಳು ಅಥವಾ ಬೇರೆ ಕಂಪೆನಿಗಳಲ್ಲಿ ಒತ್ತಡ ಜಾಸ್ತಿ ಆಗ್ತಿದೆ, ಎಲ್ಲವೂ ನಷ್ಟದಲ್ಲಿದೆ. ಹೀಗಾಗಿ ಉದ್ಯೋಗಿಗಳ ಮೇಲೆ ಒತ್ತಡ ಕೂಡ ಜಾಸ್ತಿಯಾಗ್ತಿದೆ. ರಜೆಗಳು ಸಿಗೋದಿಲ್ಲ, ಟಾರ್ಗೆಟ್‌, ಆಫೀಸ್‌ ರಾಜಕೀಯದಿಂದ ಉದ್ಯೋಗಿಗಳು ಕೆಲಸ ಬಿಡುವ ಮನಸ್ಸು ಮಾಡುತ್ತಾರೆ. ಇನ್ನು ಲೇಆಫ್‌ ಕೂಡ ತಾಂಡವವಾಡುತ್ತಿದೆ. ಹೀಗಾಗಿ ಅನೇಕರು ಸ್ವಂತ ಉದ್ಯೋಗ ಮಾಡಲು ರೆಡಿಯಾಗುತ್ತಾರೆ.