ಡೆಹ್ರಾಡೂನ್(ಜೂ.13):  ಕಳೆದ ಎರಡೂವರೆ ತಿಂಗಳಿನಿಂದ ದೇಶದೆಲ್ಲಡೆ ಕೊರೋನಾ ವೈರಸ್ ಸದ್ದು. ಇದರ ನಡುವೆ ಡೆಹ್ರಡೂನ್‌ನಲ್ಲಿರುವ ಭಾರತೀಯ ಮಿಲಟರಿ ಅಕಾಡೆಮಿಯಲ್ಲಿ ಎಲ್ಲಾ ಮುಂಜಾಗ್ರತ ಕ್ರಮಗಳೊಂದಿಗೆ ಸೈನ್ಯಾಧಿಕಾರಿಗಳ ತರಬೇತಿ ನಿರಂತವಾಗಿ ಸಾಗಿತ್ತು. ಇದೀಗ ಸೈನ್ಯಾಧಿಕಾರಿ ಕೋರ್ಸ್‌ನಲ್ಲಿ ಪದವಿ ಪಡೆದು ಪಾಸಾದ ಒಟ್ಟು 333 ಅಧಿಕಾರಿಗಳು ಪಾಸಿಂಗ್ ಔಟ್ ಪರೇಡ್ ಮಾಡಿದ್ದಾರೆ. 

ಕಾಶ್ಮೀರಿ ಪಂಡಿತರ ಕೈಯಲ್ಲಿನ್ನು ಗನ್..? ಜಮ್ಮು ಮಾಜಿ ಡಿಜಿಪಿ ಹೇಳಿದ್ದಿಷ್ಟು..!

333 ಸೈನ್ಯಾಧಿಕಾರಿಗಳ ಪೈಕಿ 146 ರೆಗ್ಯೂಲರ್ ಕೋರ್ಸ್ ಹಾಗೂ 129 ಟೆಕ್ನಕಲ್ ಪದವಿ ಕೋರ್ಸ್ ಯಶಸ್ವಿಯಾಗಿ ಮುಗಿಸಿದ್ದಾರೆ. 9 ವಿವಿದ ದೇಶಗಳ 90 ಮಂದಿ ಈ ಕೋರ್ಸ್ ಪಾಸಾಗಿದ್ದು, ಇದೀಗ ವಿದೇಶಿಗರು ತಮ್ಮ ತಮ್ಮ ಸೇನೆ ಸೇರಿಕೊಳ್ಳಲಿದ್ದಾರೆ. ಇನ್ನುಳಿದ ಭಾರತೀಯರು ಭಾರತೀಯ ಸೇನೆಗೆ ಸೇರಲಿದ್ದಾರೆ.

ನದಿಗೆ ಹಾರಿ ಗರ್ಭಿಣಿ ಜಿಂಕೆ ರಕ್ಷಿಸಿದ ಭಾರತೀಯ ಸೇನಾ ಯೋಧರು!.

2020ರ ಮೊದಲ ಬ್ಯಾಚ್‌ನ 333 ಮಂದಿ ವಿಶೇಷ ಪಾಸಿಂಗ್ ಔಟ್ ಪರೇಡ್ ನಡೆಸಿದ್ದಾರೆ. ಇವರ ಪರೇಡನ್ನು ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರ್ವಾನೆ ವೀಕ್ಷಿಸಿದರು. ಕೊರೋನಾ ವೈರಸ್ ಕಾರಣ ಇದೇ ಮೊದಲ ಬಾರಿಗೆ ಪೋಷಕರು, ಕುಟುಂಬಸ್ಥರು, ಆಪ್ತರ ಪ್ರವೇಶಕ್ಕೆ ಅನುಮತಿ ನಿರಾಕರಿಸಿಲಾಗಿತ್ತು. ಎಲ್ಲಾ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಪರೇಡ್ ಆಯೋಜಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

ಹಲವು ನಿರ್ಬಂಧ ಹೇರಲಾಗಿದ್ದ  ಕಾರಣ ಪಾಸಿಂಗ್ ಔಟ್ ಪರೇಡ್ ಕುರಿತು ನೇರ ಪ್ರಸಾರವನ್ನು ಭಾರತೀಯ ಸೇನಾ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಡಲಾಗಿತ್ತು. ಪ್ರತಿ 6 ತಿಂಗಳಲ್ಲಿ ಭಾರತೀಯ ಮಿಲಿಟರಿ ಅಕಾಡಮಿ ಪಾಸಿಂಗ್ ಔಟ್ ಪರೇಡ್ ಆಯೋಜಿಸುತ್ತದೆ. ಕೋರ್ಸ್ ಪಾಸಾಗಿ ಸೈನ್ಯಕ್ಕೆ ಸೇರಲು ಸಜ್ಜಾಗಿರುವರಿಗಾಗಿ ಪರೇಡ್ ನಡೆಸಲಾಗುತ್ತಿದೆ.