Asianet Suvarna News Asianet Suvarna News

ನದಿಗೆ ಹಾರಿ ಗರ್ಭಿಣಿ ಜಿಂಕೆ ರಕ್ಷಿಸಿದ ಭಾರತೀಯ ಸೇನಾ ಯೋಧರು!

ಇತ್ತ ಮೂಕ ಪ್ರಾಣಿಗಳ ಮೇಲೆ ಸ್ಫೋಟಕದ ಪ್ರಹಾರ| ಅತ್ತ ಗಡಿಯಲ್ಲಿ ಮೂಕ ಪ್ರಾಣಿಯನ್ನು ರಕ್ಷಿಸಿದ ಸೈನಿಕರು| ಅಮಾನವೀಯ ನಡೆ ನಡುವೆ ಸೈನಿಕರು ಮೆರೆದ ಈ ಮಾನವೀಯ ನಡೆ ವೈರಲ್| ಗರ್ಭಿಣಿ ಜಿಂಕೆಯನ್ನು ರಕ್ಷಿಸಿದ ಭಾರತೀಯ ಯೋಧರು

Indian Army rescues an endangered barking deer in West Kameng At Arunachal pRadesh
Author
Bangalore, First Published Jun 7, 2020, 3:51 PM IST

ಇಟಾನಗರ್(ಜೂ.6): ಕೆಲ ದಿನಗಳ ಹಿಂದೆ ಸ್ಫೋಟಕ ತುಂಬಿದ್ದ ಹಣ್ಣು ತಿಂದು ಆನೆಯೊಂದು ಮೃತಪಟ್ಟಿತ್ತು, ಇದಾದ ಬಳಿಕ ಸ್ಪೋಟಕ ತಿಂದು ಗರ್ಭಿಣಿ ಹಸು ನರಳಾಡುತ್ತಿರುವ ದೃಶ್ಯ ಜನರನ್ನು ರೋಸಿ ಹೋಗುವಂತೆ ಮಾಡಿದೆ. ಮೂಕ ಪ್ರಾಣಿಗಳ ಮೇಲಿನ ದೌರ್ಜನ್ಯ ವಿರುದ್ಧ ಜನರು ಸಿಡಿದೆದ್ದಿದ್ದು, ದುರುಳರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಕೂಗೆದ್ದಿದೆ. ಹೀಗಿರುವಾಗಲೇ ಭಾರತೀಯ ಸೇನಾ ಯೋಧರು ಮೆರೆದ ಮಾನವೀಯತೆ ಜನರ ಈ ಕೋಪವನ್ನು ಕೊಂಚ ಶಮನಗೊಳಿಸಿದೆ. ಅರುಣಾಚಲ ಪ್ರದೇಶದಲ್ಲಿ ನದಿಯೊಂದರಲ್ಲಿ ನೀರಿನ ರಭಸಕ್ಕೆ ಸಿಲುಕಿ ಮುಳುಗುತ್ತಿದ್ದ ಗರ್ಭಿಣಿ ಜಿಂಕೆಯನ್ನು ಯೋಧರು ರಕ್ಷಿಸಿದ್ದಾರೆ.

ಹೌದು ಈ ಘಟನೆ ಜೂನ್ 2 ರಂದು ನಡೆದಿದೆ. easterncomd ಅಧಿಕೃತ ಖಾತೆಯಿಂದ ಈ ಮಾಹಿತಿ ಲಭ್ಯವಾಗಿದೆ. ಈ ಘಟನೆ ಸಂಬಂಧ ಟ್ವೀಟ್ ಮಾಡಲಾಗಿದ್ದು, 'ಭಾರತೀಯ ಸೇನೆಯ ಯೂನಿಟ್ ಒಂದು ಜೂನ್ 2 ರಂದು ಅರುಣಾಚಲ ಪ್ರದೇಶದ ಜಾಯ್ಡಿಂಗ್ ಖೋ ನದಿಯಲ್ಲಿ ಸಿಲುಕಿದ್ದ ಜಿಂಕೆಯನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಇದನ್ನು ಈಗಲ್ಸ್ ನೆಸ್ಟ್ ಅಭಯಾರಣ್ಯಕ್ಕೆ ಬಿಡಲಾಗಿದೆ' ಎಂದು ಬರೆದಿದ್ದಾರೆ. 

ಇನ್ನು ಲಭ್ಯವಾದ ಮಾಹಿತಿ ಅನ್ವಯ ಸೈನಿಕರ ಈ ತಂಡ ಪೆಟ್ರೋಲಿಂಗ್‌ಗೆದು ತೆರಳಿತ್ತು. ಹೀಗಿರುವಾಗ ದಾರಿ ಮಧ್ಯೆ ಜಿಂಕೆಯನ್ನು ಕಂಡಿದ್ದು, ಕೂಡಲೇ ಅದನ್ನು ರಕ್ಷಿಸಲು ನದಿಗೆ ಹಾರಿದ್ದಾರೆ. 

Barking Deer, ಅಪರೂಪದ ಪ್ರಜಾತಿಯ ಈ ಜಿಂಕೆಗಳು ಅಳಿವಿನಂಚಿನಲ್ಲಿವೆ. ಆಸುಪಾಸಿನಲ್ಲಿ ಬೇಟೆಗಾರರಿದ್ದರೆ ಇವುಗಳು ನಾಯಿಗಳು ಬೊಗಳುವಂತೆ ಧ್ವನಿ ತೆಗೆಯುವ ವಿಶೇಷತೆ ಇವಕ್ಕಿದೆ. ಇದೇ ಕಾರಣದಿಂದ ಇವುಗಳನ್ನು Barking Deer(ಬೊಗಳುವ ಜಿಂಕೆ) ಎನ್ನಲಾಗುತ್ತದೆ.

ಇನ್ನು ಈ ಜಿಂಕೆಯನ್ನು ಕಾಪಾಡಿದ ಸೇನಾ ಯೋಧರಿಗೆ ಸೋಶಿಯಲ್ ಮಿಡಿಯಾದಲ್ಲಿ ಎಲ್ಲರೂ ಸಲಾಂ ಎಂದಿದದ್ದಾರೆ. ದೇಶದ ರಕ್ಷಣೆ ಮಾತ್ರವಲ್ಲದೇ ಮೂಕ ಪ್ರಾಣಿಯ ಜೀವಕ್ಕೆ ಬೆಲೆ ಕೊಟ್ಟು ಅದನ್ನು ರಕ್ಷಿಸಿದ ಯೋಧರು ನೀವೂ ಸಲಾಂ ಎನ್ನಲು ಮರೆಯಬೇಡಿ. 

Follow Us:
Download App:
  • android
  • ios