ಕಾಶ್ಮೀರಿ ಪಂಡಿತರ ಕೈಯಲ್ಲಿನ್ನು ಗನ್..? ಜಮ್ಮು ಮಾಜಿ ಡಿಜಿಪಿ ಹೇಳಿದ್ದಿಷ್ಟು..!

ದಕ್ಷಿಣ ಕಾಶ್ಮೀರದ ಪಂಡಿತರ ಹತ್ಯೆ ಬಗ್ಗೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದೀಗ ಕಾಶ್ಮೀರದ ಅಲ್ಪಸಂಖ್ಯಾತ ಪಂಡಿತರು ಹಾಗೂ ದುರ್ಬಲ ಮುಸ್ಲಿಮರಿಗೆ ಶಸ್ತ್ರಾಸ್ತ್ರ ನೀಡಿ ಎಂಬ ಸಲಹೆ ಕೇಳಿಬಂದಿದೆ.

Give weapons to minority hindus in kashmir says former dgp of jammu and kashmir

ಶ್ರೀನಗರ(ಜೂ.13): ದಕ್ಷಿಣ ಕಾಶ್ಮೀರದ ಪಂಡಿತರ ಹತ್ಯೆ ಬಗ್ಗೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇದೀಗ ಕಾಶ್ಮೀರದ ಅಲ್ಪಸಂಖ್ಯಾತ ಪಂಡಿತರು ಹಾಗೂ ದುರ್ಬಲ ಮುಸ್ಲಿಮರಿಗೆ ಶಸ್ತ್ರಾಸ್ತ್ರ ನೀಡಿ ಎಂಬ ಸಲಹೆ ಕೇಳಿಬಂದಿದೆ.

ಕಾಶ್ಮೀರ ಪಂಡಿತರ ಹತ್ಯೆ ನಂತರ ಜಮ್ಮು ಕಾಶ್ಮೀರದ ಮಾಜಿ ಡಿಜಿಪಿ ಶೇಷ ಪೌಲ್ ವೇದ್ ಅವರು ಪ್ರತಿಕ್ರಿಯಿಸಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ವಾಸಿಸುವ ಅಲ್ಪಸಂಖ್ಯಾತ ಹಿಂದೂ ಹಾಗೂ ದುರ್ಬಲರಾದ ಮುಸ್ಲಿಮರಿಗೆ ಶಸ್ತ್ರಾಸ್ತ್ರ ನೀಡಿ. ಆಗ ಅವರು ಉಗ್ರರಿಂದ ತಮ್ಮ ಸ್ವರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಕರ್ನಾಟಕದ 6 ಸೇರಿ 7 ರಾಜ್ಯದಿಂದ 63 ಶ್ರಮಿಕ್‌ ರೈಲಿಗೆ ಬೇಡಿಕೆ!

ಕಾಶ್ಮೀರಿ ಹಿಂದೂಗಳಲ್ಲಿ ತಾವು ಸುರಕ್ಷ ಎಂಬ ಭಾವನೆ ಮೂಡಿಸಲು ಸಾಧ್ಯವಿರುವ ಎಲ್ಲ ಮಾರ್ಗಗಗಳನ್ನೂ ಪ್ರಯತ್ನಿಸಿ ನೋಡಬೇಕು. ಹೀಗಾಗಿ ಕಾಶ್ಮೀರಿ ಹಿಂದೂ ಪಂಡಿತರಿಗೆ ಶಸ್ತ್ರಾಸ್ತ್ರ ಹಾಗೂ ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಬೇಕು. ಕಾಶ್ಮೀರದ ದುರ್ಬಲ ಮುಸ್ಲಿಂ ಕುಟುಂಬ ಹಾಗೂ ಕಾಶ್ಮೀರಿ ಪಂಡಿತರಿಗೆ ಶಸ್ತ್ರಾಸ್ತ್ರ ನೀಡುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದ್ದಾರೆ.

Fact Check: ಜೂ.15 ರಿಂದ ಮತ್ತೆ ಕಂಪ್ಲೀಟ್‌ ಲಾಕ್ಡೌನ್‌?

ಹಾಗೆಯೇ ಗ್ರಾಮ ರಕ್ಷಣಾ ಮಂಡಳಿಗಳನ್ನು ರಚಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ವಿಸ್ತಾರವಾದ ಪ್ಲಾನಿಂಗ್ ಅಗತ್ಯವಿರುತ್ತದೆ. ಕಾಶ್ಮೀರದಲ್ಲಿ ಇಂತಹ ಮಂಡಳಿ ರಚಿಸುವುದು ಸುಲಭವಲ್ಲ, ಆದರೆ ಅಸಾಧ್ಯವಂತೂ ಅಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios