Asianet Suvarna News Asianet Suvarna News

NEET-PG Counselling Crisis: ಪ್ರಧಾನಿ ಮಧ್ಯಪ್ರವೇಶಿಸಲು ಭಾರತೀಯ ವೈದ್ಯಕೀಯ ಸಂಘ ಪತ್ರ

  • ಎನ್‌ಇಇಟಿ  ಪಿಜಿ ಕೌನ್ಸಲಿಂಗ್‌ ಬಿಕ್ಕಟ್ಟು
  • ಕೌನ್ಸಲಿಂಗ್‌ ತಡೆ ಹಿಡಿದಿರುವ ಸುಪ್ರೀಂಕೋರ್ಟ್‌
  • ಪ್ರಧಾನಿ ಮಧ್ಯಪ್ರವೇಶಿಸಲು ಭಾರತೀಯ ವೈದ್ಯಕೀಯ ಸಂಘ ಪತ್ರ
Indian Medical Association wrote a letter to Prime Minister Modi to resolve the NEET-PG counselling crisis akb
Author
Bangalore, First Published Dec 24, 2021, 11:13 AM IST

ನವದೆಹಲಿ(ಡಿ.24): ಭಾರತೀಯ ವೈದ್ಯಕೀಯ ಸಂಘ (IMA) ಗುರುವಾರ ಪ್ರಧಾನಿ (Prime Minister) ನರೇಂದ್ರ ಮೋದಿ (Narendra Modi)ಅವರಿಗೆ ಪತ್ರ ಬರೆದಿದ್ದು,  NEET-PG ಕೌನ್ಸೆಲಿಂಗ್ ಬಿಕ್ಕಟ್ಟನ್ನು ಪರಿಹರಿಸುವಂತೆ ಹಾಗೂ ಕೋವಿಡ್‌-19 ಸೋಂಕಿನ ಮೂರನೇ ಅಲೆಯನ್ನು ಎದುರಿಸಲು ಮಾನವಶಕ್ತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದೆ. COVID-19 ರ ಮೊದಲ ಮತ್ತು ಎರಡನೇ ಅಲೆಯಿಂದಾಗಿ ಮೂಲ  ಎನ್‌ಇಇಟಿ ಪಿಜಿ (NEET PG) ಪರೀಕ್ಷೆಯನ್ನು  ಮೊದಲಿಗೆ 2021 ರ  ಸೆಪ್ಟೆಂಬರ್ 12 ರಂದು ಪರೀಕ್ಷೆ ನಡೆಸಲಾಯಿತು. ಆದರೆ  ಸುಪ್ರೀಂ ಕೋರ್ಟ್‌ನ ಕಾನೂನು ಅಡೆತಡೆಗಳಿಂದಾಗಿ ಈಗ ಈ ಪರೀಕ್ಷೆಯ ನಂತರದ ಕೌನ್ಸೆಲಿಂಗ್ ಅನ್ನು ತಡೆಹಿಡಿಯಲಾಗಿದೆ. ಇದರ ಪರಿಣಾಮ ದೇಶದಲ್ಲಿ 45000 ವೈದ್ಯರ ಕೊರತೆ ಆಗಿದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ನಮ್ಮ ದೇಶದಲ್ಲಿ ಕೋವಿಡ್‌ ಸೋಂಕಿನ ನಿಯಂತ್ರಣಕ್ಕೆ ನಿಜವಾದ  ಕಾಳಜಿಯಿಂದ ನಮ್ಮ ಯುವ ತರುಣರು ಬಲವಂತವಾಗಿ ಬೀದಿಗಿಳಿಯುವುದನ್ನು ನೋಡಲು ನಮಗೆ ತುಂಬಾ ಬೇಸರವಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘ  ಪತ್ರದಲ್ಲಿ ಉಲ್ಲೇಖಿಸಿದೆ. ಆದ್ದರಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಈ ದೇಶದ 3.5 ಲಕ್ಷ ವೈದ್ಯರಿಗೆ ನಾವು ನಮ್ಮ ನೈತಿಕ ಬೆಂಬಲವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತೇವೆ ಮತ್ತು ಗೌರವಾನ್ವಿತ ಆರೋಗ್ಯ ಸಚಿವಾಲಯ (Ministry of Health)ವು ಸಹಾನುಭೂತಿಯ ಸಲಹೆ ಮತ್ತು ಮಧ್ಯಸ್ಥಿಕೆಯೊಂದಿಗೆ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ನಾವು ಈ ಈ ಮೂಲಕ ವಿನಂತಿಸುತ್ತೇವೆ. ದೇಶದ ಆರೋಗ್ಯ ವಲಯವು ಸಹಜ ಸ್ಥಿತಿಗೆ ಮರಳಲು ಭಾರತೀಯ ವೈದ್ಯಕೀಯ ಸಂಘವು ನಿವಾಸಿ ವೈದ್ಯರೊಂದಿಗೆ ಗೌರವಾನ್ವಿತ ಪ್ರಧಾನ ಮಂತ್ರಿಗಳು ನೇರವಾಗಿ ಮಾತುಕತೆ ನಡೆಸಬೇಕೆಂದು ಭಾರತೀಯ ವೈದ್ಯಕೀಯ ಸಂಘ ಪತ್ರದಲ್ಲಿ ತಿಳಿಸಿದೆ. 

EET Counselling 2021: ನೀಟ್ ಕೌನ್ಸೆಲಿಂಗ್ ನಲ್ಲಿ ಮಹತ್ವದ ಬದಲಾವಣೆ ಮಾಡಿದ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ

ಪಿಜಿ ಕೌನ್ಸೆಲಿಂಗ್ ಬಿಕ್ಕಟ್ಟ (PG Counselling crisis)ನ್ನು ಪರಿಹರಿಸಲು ಮತ್ತು ಸನ್ನಿಹಿತವಾದ ಮೂರನೇ ತರಂಗವನ್ನು ಎದುರಿಸಲು ಆರೋಗ್ಯ ಕ್ಷೇತ್ರದಲ್ಲಿ ಮಾನವಶಕ್ತಿಯನ್ನು ಹೆಚ್ಚಿಸಲು ನಮ್ಮ ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿಗಳಿಗೆ (IMA) ವಿನಂತಿಸುತ್ತದೆ. ಭಾರತೀಯ ವೈದ್ಯಕೀಯ ಸಂಘವು  ಪಿಜಿ ಕೌನ್ಸೆಲಿಂಗ್ ಅನ್ನು ತ್ವರಿತಗೊಳಿಸುವುದಕ್ಕೆ ಆಗ್ರಹಿಸಿ ದೇಶದ ವೈದ್ಯರ ನಿರಂತರ ಮುಷ್ಕರವನ್ನು ಗಮನಿಸಿದ್ದು ಅವರ ನಿಜವಾದ ಬೇಡಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆದರೆ, ಸುಪ್ರೀಂಕೋರ್ಟ್‌ನ ಕಾನೂನು ಅಡೆತಡೆಗಳಿಂದಾಗಿ ಇದೀಗ ಕೌನ್ಸೆಲಿಂಗ್ ಅನ್ನು ತಡೆಹಿಡಿಯಲಾಗಿದ್ದು, ಆರೋಗ್ಯ ಕ್ಷೇತ್ರವೂ 45000 ವೈದ್ಯರ ಕೊರತೆ ಅನುಭವಿಸುತ್ತಿದೆ. ಭಾರತೀಯ ವೈದ್ಯಕೀಯ ಸಂಘವು ನಿರ್ದಿಷ್ಟವಾಗಿ COVID-19 ಸಮಯದಲ್ಲಿ ಮತ್ತು ಒಟ್ಟಾರೆಯಾಗಿ ಆರೋಗ್ಯ ವಿತರಣಾ ವ್ಯವಸ್ಥೆಯಲ್ಲಿ ಮಾನವಶಕ್ತಿ ಕೊರತೆಯನ್ನು ನಿರಂತರವಾಗಿ ಪ್ರಸ್ತಾಪಿಸಿದೆ ಎಂದು ತಿಳಿದು ಬಂದಿದೆ. 

NEET Exam: ವಿದ್ಯಾರ್ಥಿನಿ ಆತ್ಮಹತ್ಯೆ, ನೀಟ್ ವಿರುದ್ಧ ನಿರ್ಣಯ ಕೈಗೊಳ್ಳುವಂತೆ ಕುಮಾರಸ್ವಾಮಿ ಆಗ್ರಹ

ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಮೂಲಸೌಕರ್ಯ ಅಭಿವೃದ್ಧಿ (Infrastructure Development)ಗಾಗಿ ನಾವು ಪ್ರಧಾನ ಮಂತ್ರಿಗಳಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ ಮತ್ತು ಪ್ರಧಾನ ಮಂತ್ರಿಗಳು ಈ ವಿಚಾರದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ದೇಶದಲ್ಲಿ ವೈದ್ಯರ ಕೊರತೆ ನೀಗಿಸಬೇಕು. ದೇಶದ ವೈದ್ಯರು ತಮ್ಮ ನಿಜವಾದ ಬೇಡಿಕೆಗಳನ್ನು ಎತ್ತುತ್ತಿದ್ದಾರೆ ಮತ್ತು ಇಲ್ಲಿಯವರೆಗೆ ಅದನ್ನು ಸರಿಯಾಗಿ ಪರಿಹರಿಸಲಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. 

ಪ್ರತಿವರ್ಷ ನೀಟ್ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯುತ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency)  NEET ಕೌನ್ಸೆಲಿಂಗ್ ನಲ್ಲಿ ಈ ಬಾರಿ ಹೊಸ 5 ಬದಲಾವಣೆಯನ್ನು ಮಾಡಿದೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (  Medical Counselling Committee -MCC) ಶೇ.15 ನೀಟ್ ಯುಜಿ  ಕೋರ್ಸ್ ಗಳ ಸೀಟುಗಳಿಗೆ  ಮತ್ತು ಶೇ. 50 ನೀಟ್ ಪಿಜಿ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು ಎಂದಿದೆ. ಒಟ್ಟು ನಾಲ್ಕು ಸುತ್ತುಗಳಲ್ಲಿ ಕೌನ್ಸೆಲಿಂಗ್ ನಡೆಸುವುದಾಗಿ ಆಯೋಗ ಶನಿವಾರ ಹೇಳಿದೆ. 

Follow Us:
Download App:
  • android
  • ios