ಇವರೇ ನೋಡಿ ಗುಟ್ಕಾ ಪ್ರಿಯರ ಬ್ರ್ಯಾಂಡ್ ಅಂಬಾಸಿಡರ್!
ಶಾರುಖ್ ಖಾನ್ ಕೇವಲ ವಿದೇಶದಲ್ಲಿ, ಕಾರಿನಲ್ಲಿ ಕುಳಿತು ವಿಮಲ್ ಮಾನ್ ಮಸಾಲ ತಿಂದಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ವಿಮಾನದಲ್ಲಿ ನಿಂತು ತಂಬಾಕು ಸೇವನೆ ಮಾಡಿದ್ದು, ಇವರೇ ಬ್ರ್ಯಾಂಡ್ ಅಂಬಾಸಿಡರ್ ಎಂದು ಗುಟ್ಕಾ ಪ್ರಿಯರು ಹೇಳುತ್ತಿದ್ದಾರೆ.
ನವದೆಹಲಿ (ಆ.23): ಶಾರುಖ್ ಖಾನ್ ಕೇವಲ ವಿದೇಶದಲ್ಲಿ, ಕಾರಿನಲ್ಲಿ ಕುಳಿತು ವಿಮಲ್ ಮಾನ್ ಮಸಾಲ ತಿಂದಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ವಿಮಾನದಲ್ಲಿ ನಿಂತು ತಂಬಾಕು ಸೇವನೆ ಮಾಡಿದ್ದು, ಇವರೇ ಬ್ರ್ಯಾಂಡ್ ಅಂಬಾಸಿಡರ್ ಎಂದು ಗುಟ್ಕಾ ಪ್ರಿಯರು ಹೇಳುತ್ತಿದ್ದಾರೆ.
ಭಾರತದಲ್ಲಿ ಗುಟ್ಕಾ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಗುಟ್ಕಾ ಪ್ರಿಯರ ಸಂಖ್ಯೆ ಅತ್ಯಧಿಕವಾಗಿದೆ. ಎಲ್ಲ ಗುಟ್ಕಾ ಹಾಗೂ ತಂಬಾಕು ಸೇವನೆ ಮಾಡುವವರಿಗೆ ತಂಬಾಕು ತಿಕ್ಕಲು ಒಂದು ಸ್ಟೈಲ್ ಇದೆ. ಎಂತಹ ಪರಿಸ್ಥಿತಿ, ಎಂತಹ ವಾತಾವರಣ ಇದ್ದರೂ ಗುಟ್ಕಾ ಮಾತ್ರ ಬಿಡುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ವಿಮಾನದಲ್ಲಿ ಹೋಗುವ ಮುಂಚೆ ಬಾಗಿಲಲ್ಲಿ ನಿಂತು ತಂಬಾಕು ಬಾಯಿಗೆ ಹಾಕಿಕೊಂಡಿದ್ದಾನೆ.
ಸಮಾಜದಲ್ಲಿ ಯಾರು ಬೇಗನೇ ಸ್ನೇಹಿತರಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಗುಟ್ಕಾ ಹಾಕುವವರು, ತಂಬಾಕು ಜಗಿಯುವವರು, ಧೂಮಪಾನಿಗಳು, ಮದ್ಯಪಾನ ಮಾಡುವವರು ಮಾತ್ರ ನೋಡ ನೋಡುತ್ತಿದ್ದಂತೆಯೇ ಸ್ನೇಹಿತರಾಗಿ ಜೊತೆಗೆ ಓಡಾಡುತ್ತಾರೆ. ಯಾವುದೇ ಗುರುತು ಪರಿಚಯ ಇಲ್ಲದಿದ್ದರೂ ಒಂದಿನಿತೂ ಹಿಂಜರಿಯದೇ ತಮ್ಮಲ್ಲಿನ ಗುಟ್ಕಾ, ತಂಬಾಕು ಹಾಗೂ ಸಿಗರೇಟ್ ಹಚ್ಚಲು ಕಡ್ಡಿಯನ್ನು ಹಂಚಿಕೊಳ್ಳುತ್ತಾರೆ. ಒಂದು ತಂಬಾಕು ಪ್ಯಾಕೆಟ್, ಗುಟ್ಕಾ ಪ್ಯಾಕೆಟ್ ಇದ್ದರೆ ಅದರಲ್ಲಿ ಸ್ವಲ್ಪ ಸ್ವಲ್ಪ ಹಂಚಿಕೊಳ್ಳುತ್ತಾರೆ. ಒಟ್ಟಾರೆ, ತಮ್ಮ ಬಳಗವನ್ನು ಮಾತ್ರ ಬಿಟ್ಟುಕೊಡುವುದಿಲ್ಲ.
ಪ್ರಜ್ವಲ್ ರೇವಣ್ಣ ಕೇಸಿನ ಚಾರ್ಜ್‌ಶೀಟ್ ಸಲ್ಲಿಕೆ: ಹೊತ್ತಲ್ಲದ ಹೊತ್ತಲ್ಲಿ ಅತ್ಯಾಚಾರ, 123 ಸಾಕ್ಷಿ ಸಂಗ್ರಹ
ಗುಟ್ಕಾ, ತಂಬಾಕು ಹಾಗೂ ಸಿಗರೇಟ್ ಸೇದುವ ಚಟವನ್ನು ಹೊಂದಿದವರು ತಾವು ಎಂತಹ ಸ್ಥಳದಲ್ಲಿದ್ದೇವೆ, ಯಾವ ಪರಿಸ್ಥಿತಿಯಲ್ಲಿದ್ದೇವೆ, ಎಲ್ಲಿ ಏನು ಮಾಡುತ್ತಿದ್ದೇವೆ ಎಂಬುದನ್ನೂ ನೋಡದೇ ತಮಗೆ ಬೇಕೆಂದಾಗ ತಮ್ಮ ಅಭ್ಯಾಸವನ್ನು ಮಾಡುತ್ತಾರೆ. ಇದು ಬೇರೆಯವರಿಗೆ ಮುಜುಗರ ಎನಿಸಿದರೂ ಅದನ್ನು ಕೇರ್ ಮಾಡುವುದೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ವ್ಯಕ್ತಿ ತಾನು ವಿಮಾನದಲ್ಲಿ ಹೋಗಲು ಮೆಟ್ಟಿಲುಗಳನ್ನು ಹತ್ತಿಕೊಂಡು ನಿಂತಿದ್ದಾನೆ. ಇನ್ನೇನು ಬಾಗಿಲು ಮುಚ್ಚಬೇಕು ಎನ್ನುವ ಕೆಲವು ನಿಮಿಷಗಳಿಗೆ ಮುಂಚೆ ವಿಮಾನದ ಬಾಗಿಲ ಬಳಿ ನಿಂತುಕೊಂಡು ಕೈಯಲ್ಲೊಂದಿಷ್ಟು ತಂಬಾಕು ಹಿಡಿದು ಅದನ್ನು ಕೈಯಲ್ಲಿ ತಿಕ್ಕಿದ್ದಾನೆ. ನಂತರ ಅದರಲ್ಲಿನ ಚಪ್ಪಾಳೆ ತಟ್ಟುವ ರೀತಿಯಲ್ಲಿ ಧೂಳನ್ನು ಹಾರಿಸಿ ಒಂದು ಕೈ ಬೆರಳಲ್ಲಿ ಹಿಡಿದುಕೊಂಡು ಯಾರಾದರೂ ತನ್ನನ್ನು ಗಮನಿಸುತ್ತಿದ್ದಾರೆಯೇ ಎಂದು ಆಚೆ, ಈಚೆ ಗಮನಿಸಿ ಲಪಕ್ಕನೇ ಬಾಯಿಗೆ ಹಾಕಿಕೊಂಡು ಒಂದು ಕಡೆ ತುಟಿಯಲ್ಲಿ ಒತ್ತರಿಸಿಕೊಳ್ಳುತ್ತಾರೆ.
ತಂಬಾಕು ಸೇವನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ಗುಟ್ಕಾ ಪ್ರಿಯರು ಇವರೇ ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಎಂದು ಹೇಳುತ್ತಿದ್ದಾರೆ. ಜಾಗ ಯಾವುದು, ಜನ ಎಂಥವರು ಎಂದು ನೋಡದೇ ತಮ್ಮ ಚಪಲ ತೀರಿಸಿಕೊಳ್ಳಲು ವಿಮಾನದಲ್ಲಿಯೂ ತಂಬಾಕು ತಿಕ್ಕಿಕೊಂಡು ಬಾಯಿಗೆ ಹಾಕಿಕೊಂಡು ಹೋಗಿದ್ದಾರೆ. ಮತ್ತೊಂದಿಷ್ಟು ಜನರು ಇವರನ್ನು ವಿಮಲ್ ಪಾನ್ ಮಸಾಲಾದವರನ್ನು ನೋಡಿದರೆ ಕಣಕಣದಲ್ಲಿಯೂ ಕೇಸರಿ ಜಾಹೀರಾತಿಗೆ ರಾಯಭಾರಿ ಮಾಡಿಕೊಳ್ಳಬಹುದು ಎಂದು ಕುಹುಕ ಮಾಡುತ್ತಿದ್ದಾರೆ.
ರೀಲ್ಸ್ ನೋಡಿ ಮದುವೆಯಾದ ಗಂಡ 8 ತಿಂಗಳಿಗೆ ಹೆಂಡತಿಯ ಹೆಣ ಹಾಕಿದ!
ವಿಮಾನದಲ್ಲಿ ಹೋಗುವ ಎಲ್ಲ ಜನರೂ ಸ್ವಲ್ಪ ಸೊಫೆಸ್ಟಿಕೇಟೆಡ್ ಆಗಿದ್ದು, ಯಾವುದೇ ಸಣ್ಣ ಪುಟ್ಟ ದುರ್ವರ್ತನೆಯನ್ನೂ ಸಹಿಸಿಕೊಳ್ಳುವುದಿಲ್ಲ. ಆದರೆ, ಇತ್ತೀಚೆಗೆ ಭಾರತದಲ್ಲಿ ಉಡಾನ್ ಯೋಜನೆ ಜಾರಿಗೆ ಬಂದ ನಂತರ ಮಧ್ಯಮ ವರ್ಗದವರಿಂದ ಕೆಳ ವರ್ಗದವರಿಗೂ ವಿಮಾನದಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿದೆ. ವಿಮಾನ ಪ್ರಯಾಣ ಎಲ್ಲ ವರ್ಗದವರ ಕೈಗೆಟುಕುತ್ತಿದ್ದಂತೆಯೇ ವಿಮಾನದಲ್ಲಿ ಡೀಸೆಂಟ್ ಆಗಿ ನಡೆದುಕೊಳ್ಳುವವರ ನಡುವೆ, ಕೀಟಲೆ ಮಾಡುವವರೂ ಹೆಚ್ಚಾಗುತ್ತಿದ್ದಾರೆ. ಆದರೆ, ಇದಕ್ಕೆ ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಕಠಿಣ ನಿಯಮಗಳೂ ಜಾರಿಯಾಗುತ್ತಿವೆ.