ಪ್ರಜ್ವಲ್ ರೇವಣ್ಣ ಕೇಸಿನ ಚಾರ್ಜ್‌ಶೀಟ್ ಸಲ್ಲಿಕೆ: ಹೊತ್ತಲ್ಲದ ಹೊತ್ತಲ್ಲಿ ಅತ್ಯಾಚಾರ, 123 ಸಾಕ್ಷಿ ಸಂಗ್ರಹ

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 123 ಸಾಕ್ಷ್ಯಗಳೊಂದಿಗೆ ಎಸ್‌ಐಟಿ ಪೊಲೀಸರು 2,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.

Hassan Prajwal revanna sex scandal case SIT Police submitted Charge sheet to Court sat

ಬೆಂಗಳೂರು (ಆ.23): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆ ನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಕೇಸಿಗೆ ಸಂಬಂಧಿಸಿದ ಪ್ರಕರಣದ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇದರಲ್ಲಿ 123 ಸಾಕ್ಷ್ಯಗಳನ್ನು ಸಂಗ್ರಹ ಮಾಡಲಾಗಿದ್ದು, ಮನೆಗೆಲಸಕ್ಕೆಂದು ಕರೆದುಕೊಂಡು ಬಂದು ಹೊತ್ತಲ್ಲದ ಹೊತ್ತಿನಲ್ಲಿ ಲೈಂಗಿಕವಾಗಿ ಸಂಪರ್ಕ ಹೊಂದುತ್ತಿದ್ದರು ಎಂಬುದನ್ನೂ ದಾಖಲಿಸಲಾಗಿದೆ.

ರಾಜ್ಯರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಪ್ರಜ್ವಲ್ ವಿರುದ್ಧ ದಾಖಲಾಗಿದ್ದ ಮೊದಲ ಕೇಸಿನ ಚಾರ್ಜ್ ಶೀಟ್ ಇದಾಗಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಹೆಚ್.ಡಿ. ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಜಾಡು ಹಿಡಿದು ಹೊರಟ ಎಸ್‌ಐಟಿ ತಂಡವು ಹೆಚ್.ಡಿ. ರೇವಣ್ಣನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

ರೀಲ್ಸ್ ನೋಡಿ ಮದುವೆಯಾದ ಗಂಡ 8 ತಿಂಗಳಿಗೆ ಹೆಂಡತಿಯ ಹೆಣ ಹಾಕಿದ!

ಕೆಲವು ದಿನ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇನ್ನು ಅತ್ಯಾಚಾರ ಕೇಸ್ ದಾಖಲಾಗುತ್ತಿದ್ದಂತೆ ವಿದೇಶಕ್ಕೆ ಹೋಗಿದ್ದ ಪ್ರಜ್ವಲ್ ವಾಪಸ್ ಬರದೇ ತಲೆಮರೆಸಿಕೊಂಡಿದ್ದನು. ಆದರೆ, ಪೊಲೀಸರು ಎಲ್ಲಿದ್ದರೂ ತಮ್ಮನ್ನು ಬಂಧಿಸುವುದಾಗಿ ನೊಟೀಸ್ ನೀಡಿದ ಬೆನ್ನಲ್ಲಿಯೇ ವಿದೇಶದಿಂದ ಬಂದು ಪೊಲೀಸರಿಗೆ ಶರಣಾಗಿದ್ದನು. ಇದಾದ ನಂತರ ನಿರಂತರ ವಿಚಾರಣೆ ಮಾಡಿದ ಎಸ್‌ಐಟಿ ತಂಡವು ಈಗ ಅಪ್ಪ ರೇವಣ್ಣ ಹಾಗೂ ಮಗ ಪ್ರಜ್ವಲ್ ವಿರುದ್ಧ ಚಾರ್ಜ್ ಶೀಟ್  ಸಿದ್ಧಪಡಿಸಿ ಸಲ್ಲಿಕೆ ಮಾಡಿದ್ದಾರೆ. 

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಅಪ್ಪ ಮಗ ಇಬ್ಬರೂ ಮೈ-ಕೈ ಮುಟ್ಟಿ ದೌರ್ಜನ್ಯ ಮಾಡುತ್ತಿದ್ದರು. ರೇವಣ್ಣ ಮನೆ ಕೆಲಸ ಮಾಡುವಾಗ ದಾಸ್ತಾನು ಕೋಣೆಗೆ ಹಣ್ಣುಕೊಡುವ ನೆಪದಲ್ಲಿ ಬಂದು ಸೊಂಟ ಚಿವುಟಿ, ಸೀರೆ ಎಳೆದು ದೌರ್ಜನ್ಯ ಎಸಗುತ್ತಿದ್ದರು. ಇನ್ನು ಇವರ ಮಗ ಪ್ರಜ್ವಲ್ ಅತ್ಯಚಾರ ಮಾಡಿದ್ದಾನೆ ಎಂದು ಆರೋಪ ಬಂದಿತ್ತು. ಹೊಳೆನರಸೀಪುರ ಮನೆಯಲ್ಲಿ ನಿರಂತರವಾಗಿ ಅತ್ಯಚಾರ ಮಾಡಿದ್ದಾನೆ. ನಂತರ, ಹೊಳೆನರಸೀಪುರ ಮನೆಯಿಂದ ಬೆಂಗಳೂರು ಮನೆಗೆ ಕರೆದುಕೊಂಡು ಬಂದು ಇಲ್ಲಿಯೀ ಕೂಡ ಅತ್ಯಚಾರ ಮಾಡಿದ್ದಾರೆ.

ಡಿಲೀಟೆಡ್ ಫೋಟೋ ರಿಟ್ರೈವ್: ರಕ್ತಸಿಕ್ತ ದೇಹದಲ್ಲಿ ಕೈಮುಗಿದು ಪ್ರಾಣಭಿಕ್ಷೆ ಕೇಳಿದರೂ ಕರುಣೆ ತೋರದ ದರ್ಶನ್ ಗ್ಯಾಂಗ್!

ಇನ್ನು ಮನೆ ಕೆಲಸ ಮಾಡಿ ಸುಸ್ತಾಗಿ ಮಲಗಿದ್ದರೂ ಹೊತ್ತಿಲ್ಲದ ಹೊತ್ತಿನಲ್ಲಿ ಬಂದು ಸಂತ್ರಸ್ತೆಯನ್ನು ಬೆದರಿಸಿ ನಿರಂತರವಾಗಿ ಲೈಂಗಿಕ ಸಂಪರ್ಕ ಹೊಂದುತ್ತಿದ್ದರು ಎಂಬ ವಿಚಾರವನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಎಸ್‌ಐಟಿ ತಂಡದ ಪೊಲೀಸರು ಈ ಪ್ರಕರಣದ ಬಗ್ಗೆ ಹಾಸನದ ಮನೆ, ಬೆಂಗಳೂರಿನ ಮನೆ ಸೇರಿದಂತೆ ಎಲ್ಲೆಡೆ ಸ್ಥಳ ಮಹಜರು ಮಾಡಿ, ಆರೋಪಿಗಳು ಮತ್ತು ದೂರುದಾರರನ್ನು ಸೂಕ್ತ ವಿಚಾರಣೆ ಮಾಡಿ ತನಿಖೆ ಮುಗಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಇದು ಸುಮಾರು 2 ಸಾವಿರ ಪುಟಗಳನ್ನು ಹೊಂದಿದ್ದು, ಆರೋಪಿಗಳ ವಿರುದ್ಧ ಬರೋಬ್ಬರಿ 123 ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಎಸ್‌ಐಟಿ ತಂಡದಿಂದ 42ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

Latest Videos
Follow Us:
Download App:
  • android
  • ios