ನವದೆಹಲಿ(ಅ.24):  ಲಡಾಖ್ ಗಡಿ ವಲಯದಲ್ಲಿ ಭಾರತದ ಜೊತೆ ಕಿರಿಕಿ ಮಾಡಿದ ಚೀನಾಗೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ. ಹೀಗಾಗಿ ಲಡಾಖ್ ಗಡಿಯಲ್ಲಿ ಕಳೆದ ಐದಾರು ತಿಂಗಳಿನಿಂದ ಚೀನಾ ಕಿರಿಕ್ ಮಾಡುತ್ತಿದೆ. ಮಾತುಕತೆಗೂ ಬಗ್ಗದ ಚೀನಾ, ಬಾಲ ಬಿಚ್ಚಲು ಹಾತೊರೆಯುತ್ತಿದೆ. ಭಾರತೀಯ ಸೇನೆಯ ಏಟಿಗೆ ಬೆದರಿದ ಚೀನಾ, ಸಾಮ್ರಾಜ್ಯ ವಿಸ್ತರಣೆಯನ್ನು ನೇಪಾಳ ಗಡಿಗೆ ಶಿಫ್ಟ್ ಮಾಡಿದೆ. ಈ ಕುರಿತು ಭಾರತೀಯ ಗುಪ್ತಚರ ಇಲಾಖೆ ಮಹತ್ವದ ಮಾಹಿತಿ ನೀಡಿದೆ.

 

ನೇಪಾಳ ಜಾಗ ಅತಿಕ್ರಮಿಸಿ ಚೀನಾದಿಂದ ಕಟ್ಟಡ ನಿರ್ಮಾಣ!

ಚೀನಾ ಅಕ್ರಮವಾಗಿ ನೇಪಾಳದ ಗಡಿ ಭಾಗಗಳನ್ನು ಕಬಳಿಕೆ ಮಾಡುತ್ತಿದೆ. ನೇಪಾಳ ಗಡಿಯಲ್ಲಿರುವ 7 ಜಿಲ್ಲೆಗಳನ್ನು ಚೀನಾ ಆಕ್ರಮಿಸಿಕೊಂಡಿದೆ. ಆದರೆ ಚೀನಾ ಕಮ್ಯೂನಿಸ್ಟ್ ಪಕ್ಷ ನೇಪಾಳದ ಅಕ್ರಮಕ್ಕೆ ಸಾಥ್ ನೀಡುತ್ತಿರುವುದು ಆತಂಕ ತರುತ್ತಿದೆ. ನೇಪಾಳ ಭೂ ಕಬಳಿಕೆ ಪ್ರಮಾಣ ಹೆಚ್ಚಾಗುತ್ತಿರುವುದು ಭಾರತಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

 

ಚೀನಾಕ್ಕೆ ಠಕ್ಕರ್ ನೀಡಲು ಸರ್ವ ಸಿದ್ಧತೆ, ನೇಪಾಳ-ಭೂತಾನ್ ಗಡಿ ಮೇಲೂ ಹದ್ದಿನ ಕಣ್ಣು

ಗುಪ್ತಚರ ಇಲಾಖೆ ಬಹಿರಂಗ ಪಡಿಸಿದ ಮಾಹಿತಿಯನ್ನು ಇದೀಗ ನೇಪಾಳ ಸರ್ವೆ ಡಿಪಾರ್ಟ್ಮೆಂಟ್ ಕೂಡ ಉಲ್ಲೇಖಿಸಿದೆ. ಆದರೆ ನೇಪಾಳ ಪ್ರಧಾನಿ ಒಲಿ ಶರ್ಮಾ ಚೀನಾ ಅತಿಕ್ರಮಣವನ್ನು ನಿರ್ಲಕ್ಷ್ಯಿಸಿದ್ದಾರೆ. ನೇಪಾಳದ ದೋಲಾಖಾ, ಗೂರ್ಖಾ, ದಾರ್ಚುಲಾ, ಹುಮ್ಲಾ, ಸಿಂಧೂಪಾಲ್‌ಚೌಕ್, ಸಂಖುವಾಸಭಾ, ರಸುವಾ ಗಡಿ ಜೆಲ್ಲೆಗಳನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ವರದಿ ಹೇಳಿದೆ.