ಡೆಹ್ರಾಡೂನ್(ಜು.16): ನೇಪಾಳ ಮತ್ತು ಭಾರತದ ಆತ್ಮೀಯ ಸಂಬಂಧಕ್ಕೆ ಮತ್ತೊಂದು ಗುರುತು ಎಂಬಂತೆ ಭಾರತದ ಯುವಕನೊಬ್ಬ ನೇಪಾಳದ ವಧುವನ್ನು ವಿವಾಹವಾಗಿ ತಯ್ನಾಡಿಗೆ ಕರೆದುಕೊಂಡು ಬಂದಿದ್ದಾನೆ. ನೇಪಾಳದ ಚೆಲುವೆಯನ್ನು ಮದುವೆಯಾಗಿ ಬಂದು ತನ್ನ ಮನೆಗೆ ಕರೆದುಕೊಂಡು ಬಂದು ಅದ್ಧೂರಿ ರಿಸೆಪ್ಶನ್ ಮೂಲಕ ಸ್ವಾಗತಿಸಿದ್ದಾನೆ.

ಧರ್‌ಚುಲಾ ಗಡಿಯಲ್ಲಿ ಕಾಳಿ ನದಿ ಸೇತುವೆ ದಾಟಿ ಭಾರತವನ್ನು ಪ್ರವೇಶಿಸುತ್ತಿದ್ದಂತೆ ಭಾರತೀಯ ಭದ್ರತಾ ಸಿಬ್ಬಂದಿ  ನೂತನ ವಧೂವರರು ಸ್ವಾಗತಿಸಿದ್ದಾರೆ ಎಂದು ಧರ್‌ಚುಲಾ ಎಸ್‌ಡಿಎಂ ಎ. ಕೆ. ಶುಕ್ಲಾ ತಿಳಿಸಿದ್ದಾರೆ.

ಒಬ್ಬನೊಂದಿಗೆ ಇಬ್ಬರ ಮದುವೆ: ಒಬ್ಬಾಕೆ ಗರ್ಲ್‌ಫ್ರೆಂಡ್, ಮತ್ತೊಬ್ಬಾಕೆ ಹೆತ್ತವರ ಸೆಲೆಕ್ಷನ್!

ನೇಪಾಳ ಹಾಗೂ ಭಾರತ ಎರಡೂ ದೇಶದ ಗಡಿಯಲ್ಲಿರುವ ಸೈನಿಕರು ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯ ಗೇಟ್ ತೆರೆದು ಗಂಡನ ಮನೆಗೆ ಹೊರಟ ವಧುವಿಗೆ ದಾರಿ ಮಾಡಿಕೊಟ್ಟಿದ್ದಾರೆ.

ಪಿತೋರಾಘರ್‌ನ ಜಿಬಿ ಗ್ರಾಮದ ನಿವಾಸಿ ವರ ಕಮಲೇಶ್ ಚಂದ್ ನೇಪಾಳದಸ ಧರ್‌ಚುಲಾದ ಧುಲಾಕೋಟ್‌ ಗ್ರಾಮದ ಟಿಗ್ರಾಂ ಅವರ ಪುತ್ರಿ ರಾಧಿಕಾ ಅವರನ್ನು ವಿವಾಹವಾಗಿದ್ದಾರೆ.

ಮದುವೆ ಮೇಕಪ್‌ಗೆ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ವಧುವನ್ನು ಬರ್ಬರ ಕೊಲೆಗೈದ ಮಾಜಿ ಪ್ರಿಯಕರ

ಸ್ವಲ್ಪ ಸಮಯದ ಕಾಲಾವಧಿಗೆ ನೇಪಾಳಕ್ಕೆ ಹೋಗಲು ಅವಕಾಶ ಕೇಳಿದ್ದೆವು. ಅಲ್ಲಿಗೆ ಹೋಗಿ ವಧುವನ್ನು ಕರೆದುಕೊಂಡು ತಕ್ಷಣ ಮರಳಿದ್ದೇವೆ ಎಂದು ಕಮಲೇಶ್ ಹೇಳಿದ್ದಾರೆ. ವಧೂ ವರರ ಕುಟುಂಬ ಉತ್ತರಾಖಂಡ್‌ನಲ್ಲಿ ಭಾರತ ಹಾಗೂ ನೇಪಾಳ ಗಡಿಗೆ ಸಮೀಪ ವಾಸಿಸುತ್ತಿದ್ದು, ಎರಡೂ ಕುಟುಂಬಗಳ ನಡುವೆ ಒಳ್ಳೆಯ ಆತ್ಮೀಯತೆ ಇತ್ತು.