ಇಂದೋರ್(ಜು.07): ಇನ್ನೇನು  ಮದುವೆಗೆ ಕೆಲವೇ ಗಂಟೆ ಇರುವಾಗ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದ ವಧು ಕ್ರೂರವಾಗಿ ಕೊಲ್ಲಲ್ಪಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಸೋನು ಯಾದವ್ ಕೊಲೆಯಾದ ಯುವತಿ.

ಮಧ್ಯಪ್ರದೇಶದ ರಟ್ಲಾಂ ಜಿಲ್ಲೆಯ  ಜೊರಾ ಎಂದ ಊರಲ್ಲಿ ಘಟನೆ ನಡೆದಿದ್ದು, ವಧು ಬ್ಯೂಟಿ ಪಾರ್ಲರ್‌ನಲ್ಲಿದ್ದಾಗ ಘಟನೆ ನಡೆದಿದೆ. ಆಕೆಯ ಮಾಜಿ ಪ್ರಿಯಕರ ರಾಮ್ ಯಾದವ್ ಕೊಲೆ ಮಾಡಿರಬಹುದು ಎಂದು  ಪೊಲೀಸರು ಶಂಕಿಸಿದ್ದಾರೆ. ಯುವತಿಯ ಗಂಟಲು ಕೊಯ್ದು ಯುವಕ ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲಿದಾನ ಮಾಡಿದ ಪೊಲೀಸ್ ಕೈಮೇಲಿದ್ದ ಆ ಸಂಖ್ಯೆ ಹೇಳಿದ ಘೋರ ಕತೆ!

ಕೊಲೆ ನಡೆಸಲು ಹಾಗೂ ಆರೋಪಿ ತಪ್ಪಿಸಿಕೊಳ್ಳು ನೆರವಾದ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋನು ಯಾದವ್ ಎರಡನೇ ವಿವಾಹಕ್ಕೆ ಸಿದ್ಧತೆ ನಡೆಯಲಿತ್ತು. ಮಧ್ಯಪ್ರದೇಶದ ಶಹಜಾಪುರ ಜಿಲ್ಲೆಯ ಯುವತಿ ಕುಟುಂಬಸ್ಥರ ಜೊತೆ ವಿವಾಹಕ್ಕಾಗಿ ಮದುವೆ ದಿನ ಜೊರಾಗೆ ಬಂದಿದ್ದರು.

ವಿವಾಹದ ಮುನ್ನ ಕಸಿನ್ ಜೊತೆ ಯುವತಿ ಬ್ಯೂಟಿ ಪಾರ್ಲರ್‌ಗೆ ಬಂದಿದ್ದರು. ಯುವತಿ ಬ್ಯೂಟಿ ಪಾರ್ಲರ್ ತಲುಪುತ್ತಿದ್ದಂತೆ ಆಕೆಗೆ ಹಲವಾರು ಫೋನ್ ಕಾಲ್ ಬರುತ್ತಿತ್ತು ಎನ್ನಲಾಗಿದೆ. ಆಕೆಯ ಮಾಜಿ ಪ್ರಿಕರ ಕರೆ ಮಾಡಿದ್ದ ಎಂದು ತಿಳಿದುಬಂದಿದೆ.

ಅತ್ಯಾಚಾರ ಆರೋಪಿಯಿಂದಲೇ ಲಂಚ ಪಡೆದ ಮಹಿಳಾ PSI ಅರೆಸ್ಟ್

ನಂತರದಲ್ಲಿ ಯುವತಿಯ ಮಾಜಿ ಪ್ರಿಕರ ತನ್ನ ಸ್ನೇಹಿತನ ಮೊಬೈಲ್‌ನಿಂದ ಕರರೆ ಮಾಡಿದ್ದು, ಈ ಸಂದರ್ಭ ನಂಬರ್ ತಿಳಿಯದೆ ಯುವತಿ ಕರೆ ಸ್ವೀಕರಿಸಿ, ಮಾತನಾಡುತ್ತಾ ತಾನಿರುವ ಸ್ಥಳವನ್ನು ತಿಳಿಸಿದ್ದರು. ಲೊಕೇಷನ್ ತಿಳಿದು ಸ್ಥಳಕ್ಕೆ ಬಂದ ಯಾದವ್ ಆಕೆಯ ಕೊತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೊಲೆ ಮಾಡಿ ರಾಮ್ ಯಾದವ್ ತನ್ನ ಸ್ನೇಹಿತನ ಬೈಕ್‌ನಲ್ಲಿಯೇ ಪರಾರಿಯಾಗಿದ್ದ. ಸ್ನೇಹಿತನೇ ಆರೋಪಿಯನ್ನು ಬಸ್‌ ನಿಲ್ದಾಣದಲ್ಲಿ ಡ್ರಾಪ್ ಮಾಡಿದ್ದ. ಸೋನು ಹಾಗೂ ರಾಮ್ ಮೂರು ವರ್ಷದ ಹಿಂದೆ ವಿವಾಹ ಕಾರ್ಯಕ್ರಮದಲ್ಲಿ ಪರಿಚಿತರಾಗಿ ರಿಲೇಷನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ.