Asianet Suvarna News Asianet Suvarna News

Netaji Ashes ಬೋಸ್ ಚಿತಾಭಸ್ಮ ಸ್ವದೇಶಕ್ಕೆ ತರಲು ಅಡ್ಡಿ, ಸಂರಕ್ಷಿಸಿಡಲು ಜಪಾನ್‌ ಮಂದಿರಕ್ಕೆ ಈಗಲೂ ಭಾರತ ಹಣ ಪಾವತಿ!

  • ನೇತಾಜಿ ಅವರದ್ದು ಎನ್ನಲಾದ ಚಿತಾಭಸ್ಮ ಕುರಿತು ಗೊಂದಲ
  • ಜಪಾನ್‌ನ ರೆಂಕೋಜಿ ಬೌದ್ಧ ಮಂದಿರದಲ್ಲಿದೆ ಚಿತಾಭಸ್ಮ
  • ರೆಂಕೋಜಿ ದೇವಸ್ಥಾನಕ್ಕೆ ಭಾರತ ಸರ್ಕಾರ ಹಣ ಪಾವತಿ
Indian government still pay Japan Renkoji temple to protect netaji subhash chandra bose ashes ckm
Author
Bengaluru, First Published Jan 24, 2022, 5:05 AM IST

ನವದೆಹಲಿ(ಜ.24):  ನೇತಾಜಿ ಸುಭಾಷ್ ಚಂದ್ರ ಬೋಸ್(netaji subhash chandra bose) ಸಾವಿನ ಕುರಿತು ಚರ್ಚೆಗಳು ಇಂದಿಗೂ ಅಂತ್ಯವಾಗಿಲ್ಲ. ಹೀಗಾಗಿಯೇ ಜಪಾನ್‌ನಲ್ಲಿ(Japan Renkoji temple)ಸುರಕ್ಷಿತವಾಗಿ ಇಡಲಾಗಿರುವ ನೇತಾಜಿ ಅವರದ್ದು ಎನ್ನಲಾದ ಚಿತಾಭಸ್ಮವನ್ನು(Ashes) ಭಾರತಕ್ಕೆ ತರುವ ಕುರಿತ ಗೊಂದಲ, ವಿವಾದಗಳು ಇನ್ನೂ ಮುಂದುವರೆದಿದೆ.

ನೇತಾಜಿ 1945ರಲ್ಲೇ ಸಾವನ್ನಪ್ಪಿದ್ದಾರೆ ಎಂಬ ವಾದವನ್ನು 1995ರಲ್ಲಿ ಭಾರತ ಸರ್ಕಾರ(Indian Government) ಒಪ್ಪಿಕೊಂಡಿತು. ವಿಮಾನ ದುರಂತದಲ್ಲಿ ನೇತಾಜಿ ಸಾವನ್ನಪ್ಪಿದ ಕುರಿತು ಅನುಮಾನಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈ ವಾದವನ್ನು ಒಪ್ಪಿಕೊಳ್ಳದಿರುವುದು ಅರ್ಥಹೀನ. ಈ ವಾದವನ್ನು ಈಗಾಗಲೇ ಭಾರತ ಸರ್ಕಾರ ಅಳವಡಿಸಿಕೊಂಡಿದೆ ಎಂಬ ನಿರ್ಧಾರಕ್ಕೆ 1995ರ ಫೆ.6ರಂದು ಆಗಿನ ಗೃಹ ಕಾರ್ಯದರ್ಶಿ ಕೆ. ಪದ್ಮನಾಭಯ್ಯ ಸಹಿ ಹಾಕಿದ್ದರು.

Subhash Chandra Bose ನೇತಾಜಿ ಆಜಾದ್ ಹಿಂದ್ ಫೌಜ್‌ನಿಂದ ಭಾರತಕ್ಕೆ ಸ್ವಾತಂತ್ರ್ಯ, ಗಾಂಧಿಯಿಂದಲ್ಲ, ಬೋಸ್ ಸಂಬಂಧಿ!

ಆದರೆ ಇದೆಲ್ಲದರ ಹೊರತಾಗಿಯೂ ಜಪಾನ್‌ನ ರೆಂಕೋಜಿ ಬೌದ್ಧ ಮಂದಿರದಲ್ಲಿ ಸುರಕ್ಷಿತವಾಗಿ ಇಡಲಾದ ನೇತಾಜಿ ಚಿತಾಭಸ್ಮವನ್ನು ಭಾರತಕ್ಕೆ ತರುವುದು ಇದುವರೆಗೆ ಸಾಧ್ಯವಾಗಿಲ್ಲ. ಚಿತಾಭಸ್ಮದ ಸಂರಕ್ಷಣೆಗಾಗಿ ರೆಂಕೋಜಿ ದೇವಸ್ಥಾನಕ್ಕೆ ಭಾರತ ಸರ್ಕಾರ ಹಣ ಪಾವತಿಸುತ್ತಾ ಬಂದಿದೆ. ಬೋಸ್‌ ಅವರ ಕುಟುಂಬದ ಒಂದು ಭಾಗ ಮತ್ತು ಕೆಲವು ರಾಜಕೀಯ ಪಕ್ಷಗಳು ನೇತಾಜಿಯ ಚಿತಾಭಸ್ಮವನ್ನು ಭಾರತಕ್ಕೆ ತರುವುದನ್ನು ಸಹಜವಾಗಿಯೇ ವಿರೋಧಿಸುತ್ತಿವೆ. 1995ರಲ್ಲಿ ದೇಶದ ಪ್ರಧಾನಿಯಾಗಿದ್ದ ಪಿ.ವಿ ನರಸಿಂಹರಾವ್‌ ಮತ್ತು ವಿದೇಶಾಂಗ ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಅವರು ಚಿತಾಭಸ್ಮವನ್ನು ತಾಯ್ನಾಡಿಗೆ ತರುವ ಯತ್ನ ನಡೆಸಿದರು. ಆದರೆ ಈ ಮಹತ್ವದ ಕಾರ್ಯದಲ್ಲಿ ಅವರು ವಿಫಲರಾದರು.

Subhas Chandra Bose: 76 ವರ್ಷಗಳ ಬಳಿಕವೂ ನಿಗೂಢ: ಇನ್ನೂ ಬಗೆಹರಿದಿಲ್ಲ ನೇತಾಜಿ ಸಾವಿನ ರಹಸ್ಯ?

2007ರಲ್ಲಿ ಸಂಸದ ಸುಬ್ರತಾ ಬೋಸ್‌ ಅವರು ಜಪಾನ್‌ನಲ್ಲಿರುವ ಚಿತಾಭಸ್ಮದ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಆಗಿನ ಪ್ರಧಾನಿಗೆ ಪತ್ರ ಬರೆದಿದ್ದರು. ಇದರನ್ವಯ ಈ ವಿಷಯದ ಬಗ್ಗೆ ಪರಿಶೀಲಿಸುವಂತೆ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ವಿದೇಶಾಂಗ ಇಲಾಖೆಗೆ ಸೂಚಿಸಿದ್ದರು ಎಂದು ಪ್ರಧಾನಿ ಕಾರ್ಯಾಲಯದ ಆಂತರಿಕ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದ್ದು, ಆ ಚಿತಾಭಸ್ಮವು ಬೋಸ್‌ರದ್ದೇ ಎಂದು ಭಾರತ ಸರ್ಕಾರ ಒಪ್ಪಿದೆ.

ಮಹಾನ್‌ ನಾಯಕನ ನಿಗೂಢ ಅಂತ್ಯ
ನೇತಾಜಿ ಅವರ ಸಾವಿನ ಸಂದರ್ಭ, ಸಮಯ, ವರ್ಷ ಮತ್ತು ನಿಧನ ಹೊಂದಿದ ಸ್ಥಳದ ಕುರಿತಾದ ಅನುಮಾನಗಳು ಮತ್ತು ವಿವಾದಗಳು ಮಾತ್ರ ಇನ್ನೂ ತಣ್ಣಗಾಗಿಲ್ಲ. ನೇತಾಜಿ ಅವರು 1945ರ ಆ.18ರಂದು ಜಪಾನ್‌ನ ತೈವಾನ್‌ನಲ್ಲಿರುವ ತೈಹೋಕು(ತೈಪೈ) ನಗರದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಡಿದಿದ್ದಾರೆ ಎಂದು ಕೆಲವು ಜೀವನ ಚರಿತ್ರೆಕಾರರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಇತರ ಭಾಗಗಳಲ್ಲಿ ಪ್ರತೀ ವರ್ಷದ ಆ.18ರಂದು ನೇತಾಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರನ್ನು ಸ್ಮರಿಸಲಾಗುತ್ತಿದೆ. ಆದರೆ ಅವರು ವಿಮಾನ ಅಪಘಾತದಲ್ಲಿ ಅಸುನೀಗಿದ್ದಾರೆಯೇ ಅಥವಾ ಬಚಾವ್‌ ಆಗಿ, ಇತ್ತೀಚಿನವರೆಗೆ ಮಾರು ವೇಷದಲ್ಲಿ ಬದುಕಿದ್ದರೆ ಎಂಬ ಅನುಮಾನಗಳಿಗೆ ತೆರೆ ಎಳೆಯಲು ಮಾತ್ರ ಸಾಧ್ಯವಾಗಿಲ್ಲ.

ವಿಮಾನ ಅಪಘಾತದಲ್ಲಿ ಸಾವು
ನೇತಾಜಿ ಸಾವನ್ನಪ್ಪಿದಾಗ ಭಾರತದಲ್ಲಿ ಬ್ರಿಟಿಷ್‌ ಸರ್ಕಾರವಿತ್ತು. ಈ ವೇಳೆ ಬ್ರಿಟಿಷ್‌ ಸೈನ್ಯ, ಭಾರತದ ಬ್ರಿಟಿಷ್‌ ಸರ್ಕಾರ, ಜಪಾನ್‌ ಸರ್ಕಾರ ಮತ್ತು ಮಿತ್ರ ಪಡೆಗಳು ನೇತಾಜಿ ಅವರ ಸಾವಿನ ಕುರಿತು ನಡೆಸಿದ ಪ್ರಾಥಮಿಕ ತನಿಖೆ ಅನ್ವಯ, ನೇತಾಜಿ ಪ್ರಯಾಣಿಸಿದ್ದ ವಿಮಾನವು ಅಪಘಾತಕ್ಕೀಡಾಗಿದ್ದು, ಅದರಲ್ಲಿ ಅವರು ತೀವ್ರ ಸುಟ್ಟಗಾಯಗಳಿಗೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು ಎಂದು ಸ್ಪಷ್ಟಪಡಿಸಲಾಗಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಲಭಿಸುವವರಿಗೆ ಈ ವಾದ ಒಪ್ಪಿತಾರ್ಹವಾಗಿತ್ತು. ಆದರೆ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ಬಳಿಕ ನೇತಾಜಿ ಅವರ ಸಾವಿನ ಕುರಿತ ಅನುಮಾನ ಮತ್ತು ವಿವಾದದ ಬೀಜಗಳು ಮೊಳಕೆಯೊಡೆದು ಬೆಳೆದು ಹೆಮ್ಮರವಾದವು.

Follow Us:
Download App:
  • android
  • ios