Cheetahs Import ಭಾರತಕ್ಕೆ ಚಿರತೆ ಆಮದಿಗೆ ಆಫ್ರಿಕನ್ ದೇಶದ ಜೊತೆ ಸಭೆ, ನಶಿಸಿದ ಪ್ರಭೇದ ವೃದ್ಧಿಸಲು ಮಹತ್ವದ ಹೆಜ್ಜೆ!
- ಭಾರತದಲ್ಲಿ ನಶಿಸಿರುವ ಚಿರತೆ ಪ್ರಭೇದಕ್ಕೆ ಹೊಸ ಚೈತನ್ಯ
- ಆಫ್ರಿಕಾ ದೇಶಗಳಿಂದ 12 ರಿಂದ 14 ಚಿರತೆಗಳ ಆಮದು
- ಸುಪ್ರೀಂ ಅನುಮತಿಯಿಂದ ಆಫ್ರಿಕಾ ದೇಶಗಳ ಜೊತೆ ಮಹತ್ವದ ಸಭೆ
ನವದೆಹಲಿ(ಫೆ.07): ಭಾರತ ಸೇರಿದಂತೆ ಏಷ್ಯಾದ ಚಿರತೆಗಳು(Cheetah) ನಶಿಸಿ ಹೋಗಿದೆ. ಇದೀಗ ಚಿರತೆ ಪ್ರಭೇದ ವೃದ್ಧಿಸಲು ಕೇಂದ್ರ ಸರ್ಕಾರ(Indian Government) ಮಹತ್ವದ ಹೆಜ್ಜೆ ಇಟ್ಟಿದೆ. 2020ರಲ್ಲಿ ಸುಪ್ರೀಂ ಕೋರ್ಟ್(Supreme Court) ಅನುಮತಿ ನೀಡಿದ ಬೆನ್ನಲ್ಲೇ ಚಿರತೆ ಆಮದಿಗೆ ಕೇಂದ್ರ ಸರ್ಕಾರ ಹೊಸ ಕ್ರಿಯಾ ಯೋಜನೆ ರೂಪಿಸಿದೆ. ಇದೀಗ ಆಫ್ರಿಕನ್(African) ದೇಶಗಳ ಜೊತೆ ಕೇಂದ್ರ ಸರ್ಕಾರ ಮಹತ್ವದ ಸಮಾಲೋಚನೆ ಸಭೆ ನಡೆಸಿದೆ. ದಕ್ಷಿಣಾ ಆಫ್ರಿಕಾ, ನಮಿಬಿಯಾ ಸೇರಿದಂತೆ ಇತರ ಆಫ್ರಿಕಾ ದೇಶಗಳಿಂದ ಚಿರತೆ ಆಮದು ಮಾಡಿಕೊಳ್ಳುವ ಪ್ರಕ್ರಿಯೆ ಚುರುಕಿನಿಂದ ಸಾಗಿದೆ.
ಮುಂದಿನ 5 ವರ್ಷಗಳಲ್ಲಿ ಹಂತ ಹಂತವಾಗಿ 12 ರಿಂದ 14 ಆಫ್ರಿಕಾ ಚಿರತೆಗಳನ್ನು ಆಮದು ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಆಫ್ರಿಕಾ ಚಿರತೆ ಹಾಗೂ ಏಷ್ಯಾ ಚಿರತೆ(Asian Cheetah) ಎರಡರ ಮೂಲ ಒಂದೇ ಎನ್ನುವುದು ಸಾಬೀತಾದ ಬಳಿಕ ಸುಪ್ರೀಂ ಕೋರ್ಟ್ ಚಿರತೆ ಆಮದಿಗೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ಆಮದು(Import Cheetah) ಮಾಡಿಕೊಳ್ಳುತ್ತಿರುವ ಆಫ್ರಿಕಾ ಚಿರತೆಗಳನ್ನು ಸ್ಯಾಟಲೈಟ್, GPS-VHF ರೇಡಿಯೋ ಕಾಲರ್ ಅಳವಡಿಸಿ ಕಾಡಿಗೆ ಬಿಡಲಾಗುತ್ತದೆ. ಇದರಿಂದ ಚಿರತೆಗಳ ಸಂತತಿ ಸೇರಿದಂತೆ ಸಂಪೂರ್ಣ ಮೇಲ್ವಿಚಾರಣೆ ಮಾಡಲು ಸುಲಭವಾಗಲಿದೆ.
ಆಫ್ರಿಕಾದಿಂದ ಚೀತಾ ಆಮದು ಭಾರತಕ್ಕೆ ಏಕೆ ಮುಖ್ಯ?
ಭಾರತಕ್ಕೆ ಅಮದು ಮಾಡಿಕೊಳ್ಳುವ 12 ರಿಂದ 14 ಚಿರತೆಗಳಲ್ಲಿ 8 ರಿಂದ 10 ಗಂಡು ಚಿರತೆ ಹಾಗೂ 4ರಿಂದ 6 ಹೆಣ್ಣು ಚಿರತೆಗಳು ಇರಲಿವೆ. ಆಮದ ಮಾಡಿಕೊಳ್ಳುವ ಚಿರತೆಗಳನ್ನು ವನ್ಯಜೀವಿ ಅಭಯಾರಣ್ಯಗಳಲ್ಲಿ ಬಿಡಲಾಗುತ್ತದೆ. ಆಫ್ರಿಕನ್ ಚಿರತೆಗಳಿಗೆ ಯೋಗ್ಯ ವಾಸಸ್ಥಾನ ಹಾಗೂ ವಾತಾವರಣವಿರುವ ಭಾರತದ ಅಭಯಾರಣ್ಯದಲ್ಲಿ ಚಿರತೆಗಳನ್ನು ಬಿಡಲಾಗುತ್ತದೆ. ಈ ಮೂಲಕ ಭಾರತದಲ್ಲಿ ಆಫ್ರಿಕನ್ ಚಿರತೆ ಸಂತಾನೋತ್ಪತ್ತಿ ಹೆಚ್ಚಿಸಲು ವೃದ್ಧಿಸಲು ಕಾರ್ಯತಂತ್ರ ರೂಪಿಸಲಾಗಿದೆ.
ಚಿರತೆ ಕುರಿತು ಹಲವು ವಿಚಾರಗಳು ಭಾರತೀಯರನ್ನು ಅಚ್ಚರಿಗೊಳಿಸಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಏಷ್ಯನ್ ಚಿರತೆಗಳು ಅತೀ ಹೆಚ್ಚು ವಾಸವಾಗಿರುವ ದೇಶ ಭಾರತವಾಗಿದ್ದು. ಆದರೆ ಬ್ರಿಟೀಷರು ಭೇಟೆ, ಬಳಿಕ ಭಾರತೀಯರ ನಿರ್ಲಕ್ಷ್ಯದಿಂದ ಸ್ವಾತಂತ್ರ್ಯ ಭಾರತದಲ್ಲಿ ದಿಢೀರ್ ಏಷ್ಯನ್ ಪ್ರಭೇದದ ಚಿರತೆ ಅವಸಾನದತ್ತ ಸಾಗಿತ್ತು. 1947ರ ವೇಳೆಗೆ ಭಾರತದಲ್ಲಿ ಅಳಿವಿನಂಚಿನ ಪ್ರಾಣಿಯಾಗಿದ್ದ ಏಷ್ಯನ್ ಚಿರತೆ 1952ರ ವೇಳೆ ಸಂಪೂರ್ಣ ನಶಿಸಿ ಹೋಗಿತ್ತು. ಭಾರತ ಸರ್ಕಾರ 1952ರಲ್ಲಿ ಭಾರತದಲ್ಲಿ ವಾಸವಿರುವ ಏಷ್ಯನ್ ಚಿರತೆ ನಿರ್ನಾಮ ಪ್ರಭೇದ ಪ್ರಾಣಿ ಎಂದು ಘೋಷಿಸಲಾಗಿದೆ. ಸದ್ಯ ಭಾರತದ ಯಾವುದೇ ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಅಭಯಾರಣ್ಯದಲ್ಲಿ ಚಿರತೆ ಇಲ್ಲ. ಇನ್ನು ಸದ್ಯ ಭಾರತದಲ್ಲಿರುವ ಚಿರತೆ ಪ್ರಭೇದ ಬೇರೆ, ಅದು ಏಷ್ಯನ್ ಚಿರತೆ ಅಲ್ಲ.
ಭಾರತದಲ್ಲಿ ಚೀತಾ ಸಂತತಿ ಮರು ಅಭಿವೃದ್ಧಿ!
ಭಾರತ ಮಾತ್ರವಲ್ಲ, ಬಾಂಗ್ಲಾದೇಶ ಸೇರಿದಂತೆ ಏಷ್ಯಾ ರಾಷ್ಟ್ರಗಳಲ್ಲಿ ಕೂಡ ಏಷ್ಯನ್ ಚಿರತೆ ಉಳಿದಿಲ್ಲ. ಹೀಗಾಗಿ ಇತರ ಯಾವುದೇ ಏಷ್ಯನ್ ರಾಷ್ಟ್ರಗಳಿಂದ ಭಾರತದಲ್ಲಿದ್ದ ಚಿರತೆಯನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆಫ್ರಿಕನ್ ದೇಶಗಳ ಮೊರೆ ಹೋಗಲಾಗಿದೆ. ಸತತ ಅಧ್ಯಯನದ ಬಳಿಕ ಆಫ್ರಿಕನ್ ಚಿರತೆಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 38.07 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.
ಸ್ವತಂತ್ರ ಭಾರತದಲ್ಲಿ ಏಷ್ಯನ್ ಚಿರತೆ ಒಂದೂ ಉಳಿದಿಲ್ಲ. ಚಿರತೆ ಭಾರತದ ಪರಿಸರ ವ್ಯವಸ್ಥೆ ಹಾಗೂ ಸಮತೋಲನಕ್ಕೆ ಪ್ರಮುಖವಾಗಿದೆ. ಚಿರತೆಗಳ ಸಂಸತಿ ಅಭಿವೃದ್ಧಿಯಾದರೆ ಭಾರತದಲ್ಲಿ ತೆರೆದ ಹುಲ್ಲುಗಾವಲು, ಪೊದೆ ಸೇರಿದಂತೆ ಪರಿಸರ ಸಂರಕ್ಷಣೆ ವ್ಯವಸ್ಥೆಗೂ ಸಹಕಾರಿಯಾಗಿದೆ.
1960 ರಿಂದ ವಿದೇಶಗಳಿಂದ ಚಿರತೆಗಳನ್ನು ಆಮದು ಮಾಡಿಕೊಳ್ಳುವ ಪ್ರಯತ್ನಗಳು ನಡೆದಿದೆ. ಆದರೆ ಯಾವುದೂ ಗಂಭೀರವಾದ ಕಾರ್ಯರೂಪಗಳನ್ನು ಮಾಡಿರಲಿಲ್ಲ. ಇನ್ನು 2013ರಲ್ಲಿ ವಿದೇಶಗಳಿಂದ ಚಿರತೆ ಆಮದು ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಕೂಡ ನಿರಾಕರಿಸಿತ್ತು. ಕಾರಣ ಆಫ್ರಿಕನ್ ಚಿರತೆ ಭಾರತಕ್ಕೆ ಆಮದು ಮಾಡಿಕೊಂಡರೆ ಅವುಗಳ ಸಂತಾನ ಉತ್ಪತ್ತಿಗಿಂತ ಸಂರಕ್ಷಣೆ ಹಾಗೂ ಬದಲಾದ ವಾತಾವರಣದಲ್ಲಿ ಚಿರತೆ ಉಳಿಯುವುದೇ ಕಷ್ಟವಾಗಲಿದೆ ಎಂದು ಆಮದು ನಿರಾಕರಿಸಿತ್ತು. ಆದರೆ ಅಧ್ಯಯನ ವರದಿ ಆಧರಿಸಿ ಸುಪ್ರೀಂ ಕೋರ್ಟ್ 2020ರ ಫೆಬ್ರವರಿಯಲ್ಲಿ ಆಮದಿಗೆ ಅನುಮತಿ ನೀಡಿದೆ.