ಚುನಾವಣೆ ಗಿಫ್ಟ್ ಜಪ್ತಿ : ಕರ್ನಾಟಕ ದೇಶದಲ್ಲೇ ನಂ.1 !
ಈ ಲೋಕಸಭೆ ಚುನಾವಣೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 1,100 ಕೋಟಿ ರು, ಮೌಲ್ಯದ ನಗದು ಹಣ ಮತ್ತು ಚಿನ್ನ ವಶಪಡಿಸಿಕೊಂಡಿದ್ದಾರೆ.
ನವದೆಹಲಿ (ಜೂ.1): ಈ ಲೋಕಸಭೆ ಚುನಾವಣೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 1,100 ಕೋಟಿ ರು, ಮೌಲ್ಯದ ನಗದು ಹಣ ಮತ್ತು ಚಿನ್ನ ವಶಪಡಿಸಿಕೊಂಡಿದ್ದಾರೆ.
ಇದು 2019ರ ಚುನಾವಣೆಗಿಂತ 3 ಪಟ್ಟು (ಶೇ.182ರಷ್ಟು) ಅಧಿಕವಾಗಿದೆ. ಅಕ್ರಮ ನಗದು, ಆಭರಣ ಪತ್ತೆಯಾಗಿರುವ ಪಟ್ಟಿಯಲ್ಲಿ ಕರ್ನಾಟಕ ಮತ್ತು ದೆಹಲಿ ಅಗ್ರ ಸ್ಥಾನದಲ್ಲಿದೆ.
ಎಲ್ಲೆಲ್ಲಿ ಎಷ್ಟು?: ಮೂಲಗಳ ಪ್ರಕಾರ, ಈ ಲೋಕಸಭೆ ಚುನಾವ ಣೆಯಲ್ಲಿ ಸುಮಾರು 1,150 ಕೋಟಿ ರು. ನಗದು ಹಾಗೂ ಚಿನ್ನವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಸುಮಾರು ಶೇ.182ರಷ್ಟು ಅಧಿಕವಾಗಿದ್ದು, ಕಳೆದ ಬಾರಿಗಿಂತ 390 ಕೋಟಿ.ರು ಹೆಚ್ಚು ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಗುದನಾಳದಲ್ಲಿ 1 ಕೆಜಿ ಚಿನ್ನ ಕಳ್ಳಸಾಗಾಣೆ; ಏರ್ ಇಂಡಿಯಾ ಗಗನಸಖಿ ಸೆರೆ!
ಈ ಪೈಕಿ ಕರ್ನಾಟಕ ಮತ್ತು ದೆಹಲಿಯಲ್ಲಿಯೇ ಅತ್ಯಧಿಕವಾಗಿದ್ದು, ಈ ಎರಡೂ ರಾಜ್ಯಗಳಲ್ಲಿ 200 ಕೋಟಿ ರು. ಮೌಲ್ಯದ ನಗದು, ಆಭರಣವನ್ನು ವಶ ಪಡಿಸಿಕೊಳ್ಳಲಾಗಿದೆ. ಉಳಿದಂತೆ ತಮಿಳುನಾಡಿನಲ್ಲಿ 150 ಕೋಟಿ ರು, ಆಂಧ್ರ ಪ್ರದೇಶ , ತೆಲಂಗಾಣ, ಒಡಿಶಾದಲ್ಲಿ ಸುಮಾರು 100 ಕೋಟಿ.ರು ಹೆಚ್ಚು ಮೌಲ್ಯದ ನಗದು ಮತ್ತು ಆಭರಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ.