ಗುದನಾಳದಲ್ಲಿ 1 ಕೆಜಿ ಚಿನ್ನ ಕಳ್ಳಸಾಗಾಣೆ; ಏರ್‌ ಇಂಡಿಯಾ ಗಗನಸಖಿ ಸೆರೆ!

ಗುದನಾಳದಲ್ಲಿ 1 ಕೆಜಿ ಚಿನ್ನವನ್ನಿಟ್ಟುಕೊಂಡು ಮಸ್ಕತ್‌ನಿಂದ ಕೇರಳದ ಕಣ್ಣೂರಿಗೆ ಅಕ್ರಮವಾಗಿ ಸಾಗಾಣಿಕೆ ಮಾಡಿದ ಏರ್‌ ಇಂಡಿಯಾ ಗಗನಸಖಿಯನ್ನು ಕಂದಾಯ ಗುಪ್ತಚರ ನಿರ್ದೇಶಾನಲಯದ ಅಧಿಕಾರಿಗಳು (ಡಿಆರ್‌ಐ) ಇಲ್ಲಿ ಬಂಧಿಸಿದ್ದಾರೆ. ವಿಮಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ಕಳ್ಳಸಾಗಣೆ ಮಾಡಿ ಬಂಧನವಾಗಿದ್ದು ದೇಶದಲ್ಲಿ ಇದೇ ಮೊದಲು.

Air hostess Surabhi Khatun smuggle one kilo of gold by concealing it in her rectum rav

ಕಣ್ಣೂರು (ಕೇರಳ): ಗುದನಾಳದಲ್ಲಿ 1 ಕೆಜಿ ಚಿನ್ನವನ್ನಿಟ್ಟುಕೊಂಡು ಮಸ್ಕತ್‌ನಿಂದ ಕೇರಳದ ಕಣ್ಣೂರಿಗೆ ಅಕ್ರಮವಾಗಿ ಸಾಗಾಣಿಕೆ ಮಾಡಿದ ಏರ್‌ ಇಂಡಿಯಾ ಗಗನಸಖಿಯನ್ನು ಕಂದಾಯ ಗುಪ್ತಚರ ನಿರ್ದೇಶಾನಲಯದ ಅಧಿಕಾರಿಗಳು (ಡಿಆರ್‌ಐ) ಇಲ್ಲಿ ಬಂಧಿಸಿದ್ದಾರೆ. ವಿಮಾನ ಸಂಸ್ಥೆಯ ಸಿಬ್ಬಂದಿಯೊಬ್ಬರು ಕಳ್ಳಸಾಗಣೆ ಮಾಡಿ ಬಂಧನವಾಗಿದ್ದು ದೇಶದಲ್ಲಿ ಇದೇ ಮೊದಲು.

ವಿಚಾರಣೆ ಬಳಿಕ ಆಕೆಯನ್ನು 14 ದಿನಗಳ ಕಾಲ ಮಹಿಳಾ ಕಾರಾಗೃಹಕ್ಕೆ ಒಪ್ಪಿಸಲಾಗಿದೆ. .

ಬಂಧಿತ ಗಗನಸಖಿ ಸುರಭಿ ಖಾತುನ್ ಕೋಲ್ಕತಾ ಮೂಲದವರು. ಏರಿಂಡಿಯಾದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮೇ.28ರಂದು ಮಸ್ಕತ್‌ನಿಂದ ಕಣ್ಣೂರಿಗೆ ಬಂದಿದ್ದ ಏರಿಂಡಿಯಾ ವಿಮಾನದಲ್ಲಿ ಆಕೆ ತನ್ನ ಗುದನಾಳದಲ್ಲಿ ಸುಮಾರು 960 ಗ್ರಾಂ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಗುದದ್ವಾರದಲ್ಲಿ ಕೋಟಿ ಕೋಟಿ ಮೌಲ್ಯದ ಚಿನ್ನ ಬಚ್ಚಿಟ್ಟುಕೊಂಡಿದ್ದ ದಂಪತಿ: ವಿಮಾನ ನಿಲ್ದಾಣದಲ್ಲಿ ಸೆರೆ

ಆಕೆ ಈ ಹಿಂದೆಯೂ ಚಿನ್ನವನ್ನು ಇದೇ ರೀತಿ ಕಳ್ಳ ಸಾಗಾಣಿಕೆ ಮಾಡಿದ್ದಳು ಎನ್ನುವ ವಿಚಾರವೂ ಬೆಳಕಿಗೆ ಬಂದಿದ್ದು, ಈ ಸ್ಮಗ್ಲಿಂಗ್ ಗ್ಯಾಂಗ್‌ನಲ್ಲಿ ಇತರ ವ್ಯಕ್ತಿಗಳು ಭಾಗಿಯಾಗಿದ್ದಾರಾ ಅನ್ನೋ ಆಯಾಮದಲ್ಲಿಯೂ ತನಿಖೆಯನ್ನು ನಡೆಸಲಾಗುತ್ತಿದೆ.

Latest Videos
Follow Us:
Download App:
  • android
  • ios