ಇತ್ತೀಚಿನ ಫಲಿತಾಂಶಗಳನ್ನು ಗಮನಿಸಿದರೆ ಭಾರತೀಯ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕಿಂತ ಶ್ರೇಷ್ಠ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ನವದೆಹಲಿ (ಮಾ.17): ಇತ್ತೀಚಿನ ಫಲಿತಾಂಶಗಳನ್ನು ಗಮನಿಸಿದರೆ ಭಾರತೀಯ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕಿಂತ ಶ್ರೇಷ್ಠ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕದ ಖ್ಯಾತ ಪಾಡ್‌ಕಾಸ್ಟರ್‌ ಲೆಕ್ಸ್‌ ಪ್ರೀಡ್‌ಮನ್‌ ಜೊತೆಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಅವರು, ಭಾರತ ಹಾಗೂ ವಿಶ್ವದ ಕ್ರೀಡಾ ಬೆಳವಣಿಗೆ ಬಗ್ಗೆ ಮಾತನಾಡಿದರು. ಕ್ರಿಕೆಟ್‌ ಬಗ್ಗೆ ಮಾತನಾಡಲು ತಾವು ಸೂಕ್ತ ವ್ಯಕ್ತಿಯಲ್ಲ ಎಂದ ಹೊರತಾಗಿಯೂ, ಇತ್ತೀಚಿನ ದಿನಗಳಲ್ಲಿ ಗಮನಿಸಿದ ಫಲಿತಾಂಶಗಳನ್ನು ಆಧರಿಸಿ ಭಾರತೀಯ ಕ್ರಿಕೆಟ್‌ ಶ್ರೇಷ್ಠ ಎಂದಿದ್ದಾರೆ. ‘ಕ್ರೀಡೆ ಬಗ್ಗೆ ಮಾತನಾಡುವಷ್ಟು ಪರಿಣತ ವ್ಯಕ್ತಿ ನಾನಲ್ಲ. 

ಕ್ರಿಕೆಟ್‌ನ ತಂತ್ರಗಳ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ತಜ್ಞರೇ ಮಾತನಾಡುತ್ತಾರೆ. ಆದರೆ ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನು ನೋಡಿ ಹೇಳುವುದಾದರೆ, ಯಾವ ತಂಡ ಶ್ರೇಷ್ಠ ಎಂಬುದು ನಮಗೆ ಗೊತ್ತಾಗುತ್ತದೆ’ ಎಂದಿದ್ದಾರೆ. ಕ್ರೀಡೆ ಇಡೀ ಜಗತ್ತಿಗೇ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಬೇರೆ ಬೇರೆ ದೇಶಗಳ ಜನರನ್ನು ಒಗ್ಗೂಡಿಸುವ ಕಲೆ ಕ್ರೀಡೆಗಿದೆ. ಹೀಗಾಗಿಯೇ ಕ್ರೀಡೆಗಳ ಬಗ್ಗೆ ಅನಗತ್ಯ ಹೇಳಿಕೆಗಳನ್ನು ಇಷ್ಟಪಡುವುದಿಲ್ಲ. ಮಾನವನ ವಿಕಾಸದಲ್ಲಿ ಕ್ರೀಡೆ ಮಹತ್ವದ ಪಾತ್ರ ಬಹಿಸುತ್ತದೆ. ಇದು ಬರೀ ಕ್ರೀಡೆಯಲ್ಲ, ಅದು ಮನುಷ್ಯರನ್ನು ಒಗ್ಗೂಡಿಸುತ್ತದೆ’ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಜೀವನದ ಕುರಿತು ಇಂದು 3 ಗಂಟೆ ಕುತೂಹಲಕಾರಿ ಪಾಡ್‌ ಕಾಸ್ಟ್‌

ಅಂದು ಮರಡೋನಾ, ಇಂದು ಮೆಸ್ಸಿ ಹೀರೋ: ಪಾಡ್‌ಕಾಸ್ಟ್‌ನಲ್ಲಿ ತಮ್ಮ ನೆಚ್ಚಿನ ಫುಟ್ಬಾಲ್‌ ಆಟಗಾರ ಯಾರು ಎಂಬ ಪ್ರಶ್ನೆ ಪ್ರಧಾನಿ ಮೋದಿ ಅವರಿಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ‘1980ರ ದಶಕದಲ್ಲಿ ಯಾವಾಗಲೂ ಒಂದು ಹೆಸರು ಪ್ರತಿಧ್ವನಿಸುತ್ತಿತ್ತು. ಅದು ಮರಡೋನಾ. ಆ ಪೀಳಿಗೆಗೆ ಮರಡೋನಾ ನಿಜವಾದ ಹೀರೋ. ನೀವು ಇಂದಿನ ಪೀಳಿಗೆಯನ್ನು ಕೇಳಿದರೆ, ಅವರು ಲಿಯೋನೆಲ್ ಮೆಸ್ಸಿ ಹೆಸರು ಹೇಳುತ್ತಾರೆ’ ಎಂದು ಉತ್ತರಿಸಿದರು.

ಏಪ್ರಿಲ್‌ನಲ್ಲಿ ಶ್ರೀಲಂಕಾಗೆ ಮೋದಿ: ಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತ ಹೆರಾತ್‌ ಹೇಳಿದ್ದಾರೆ. ಲಂಕಾದಲ್ಲಿ 3 ವರ್ಷ ಹಿಂದೆ ನಡೆದಿದ್ದ ಆಂತರಿಕ ಸಂಘರ್ಷದ ಬಳಿಕ ಮೋದಿ ಅಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಕಳೆದ ವರ್ಷ ಲಂಕಾ ಅಧ್ಯಕ್ಷ ಅನುರಾ ಕುಮಾರಾ ದಿಸನಾಯಕ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಪ್ರಧಾನಿ ಹಲವು ಒಪ್ಪಂದಗಳ ಬಗ್ಗೆ ಮಾತನಾಡಿದ್ದು, ಅಂತಿಮಗೊಳಿಸಲು ಲಂಕಾಗೆ ತೆರಳಿದ್ದಾರೆ ಎನ್ನಲಾಗಿದೆ.

ಚಿನ್ನ ದಂಧೆಯಿಂದ ಗಳಿಸಿದ ಕಪ್ಪು ಹಣ ಬಿಳಿ ಮಾಡಿಕೊಳ್ಳಲೆಂದೇ ನಟಿ ರನ್ಯಾ ರಾವ್‌ ಕಂಪನಿ ಸ್ಥಾಪನೆ?

ಈ ಬಗ್ಗೆ ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತ ಹೆರಾತ್ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ್ದು, ‘ನಮ್ಮ ಮೊದಲ ರಾಜತಾಂತ್ರಿಕ ಭೇಟಿ ಭಾರತದ್ದಾಗಿತ್ತು. ಅಲ್ಲಿ ದ್ವಿಪಕ್ಷೀಯ ಸಹಕಾರದ ಕುರಿತು ಹಲವು ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಭಾರತದ ಪ್ರಧಾನಿ ಏಪ್ರಿಲ್ ಆರಂಭದಲ್ಲಿ ಇಲ್ಲಿಗೆ ಬರಲಿದ್ದಾರೆ. ಈ ವೇಳೆ ಸಂಪೂರ್‌ ಸೋಲಾರ್‌ ವಿದ್ಯುತ್ ಕೇಂದ್ರ ಉದ್ಘಾಟನೆ ಜೊತೆಗೆ ಜೊತೆಗೆ ಹಲವಾರು ಒಪ್ಪಂದಗಳಿಗಳಿಗೆ ಸಹಿ ಹಾಕಲಾಗುತ್ತದೆ’ ಎಂದಿದ್ದಾರೆ.