ಆಗಸ್ಟ್ 31 ರಂದು ರಾಖಿ ಹಬ್ಬ. ಆದರೆ ಪ್ರಧಾನಿ ಮೋದಿ ಒಂದು ವಾರ ಮೊದಲೇ ರಾಖಿ ಹಬ್ಬ ಆಚರಿಸಿದ್ದಾರೆ. ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.  

ಜೋಹಾನ್ಸ್‌ಬರ್ಗ್(ಆ.22) ಪ್ರಧಾನಿ ನರೇಂದ್ರ ಮೋದಿ ಬಿಕ್ಸ್ ಶೃಂಗಸಭೆಗಾಗಿ ಸೌತ್ ಆಫ್ರಿಕಾ ತೆರಳಿದ್ದಾರೆ. ಜೋಹಾನ್ಸ್‌ಬರ್ಗ್ ಆಗಮಿಸಿದ ಮೋದಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಭಾರತೀಯ ಸಮುದಾಯ ಪ್ರೀತಿಪೂರ್ವಕವಾಗಿ ಮೋದಿ ಸ್ವಾಗತಿಸಿದ್ದಾರೆ. ಇದೇ ವೇಳೆ ಮೋದಿ ಒಂದು ವಾರ ಮೊದಲೇ ರಕ್ಷಾ ಬಂಧನ ಹಬ್ಬ ಆಚರಿಸಿದ್ದಾರೆ. ಜೋಹಾನ್ಸ್‌ಬರ್ಗ್ ಆಗಮಿಸಿದ ಮೋದಿಗೆ ಭಾರತೀಯ ಸಮುದಾಯದ ಪ್ರಮುಖ ಇಬ್ಬರು ಮಹಿಳೆಯರು ಮೋದಿಗೆ ರಾಖಿ ಕಟ್ಟಿ ಸ್ವಾಗತ ಕೋರಿದ್ದಾರೆ.

ಆಗಸ್ಟ್ 31ರಂದು ರಾಖಿ ಹಬ್ಬದ ಸಂಭ್ರಮ. ಆದರೆ ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಮೋದಿಗೆ ಅಲ್ಲಿನ ಭಾರತೀಯ ಸಮುದಾಯ ರಾಖಿ ಕಟ್ಟಿ ಶುಭಕೋರಿದ್ದಾರೆ. ಸೌತ್ ಆಫ್ರಿಕಾ ಆರ್ಯ ಸಮಾಜ ಅಧ್ಯಕ್ಷೆ ಆರತಿ ನಾನಕಚಾಂದ್ ಶನಂದ್ ಹಾಗೂ ಲೇಖಕಿ ಹಾಗೂ ಭಾರತೀಯ ಸಮುದಾಯದ ಸಾಂಸ್ಕೃತಿಯ ಸದಸ್ಯೆ ಡಾ. ಸರಿ ಪದಯಚಿ ಸೇರಿ ಪ್ರಧಾನಿ ಮೋದಿಗೆ ರಾಖಿ ಕಟ್ಟಿದ್ದಾರೆ. ಬಳಿಕ ಪ್ರಧಾನಿ ಮೋದಿಗೆ ರಾಖಿ ಹಬ್ಬಕ್ಕೆ ಶುಭಕೋರಿದ್ದಾರೆ.ಭಾರತೀಯ ಸಮುದಾಯದ ಜನತೆ, ವಂದೇ ಮಾತರಂ ಘೋಷಣೆ ಕೂಗಿ ಮೋದಿಗ ಸ್ವಾಗತ ನೀಡಿದ್ದಾರೆ.

ಆಫ್ರಿಕಾದಿಂದ ಚಂದ್ರಯಾನ 3 ಲ್ಯಾಂಡಿಂಗ್ ವರ್ಚುವಲ್ ಆಗಿ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ!

3 ದಿನಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದ.ಆಫ್ರಿಕಾ ರಾಜಧಾನಿ ಜೋಹಾನ್ಸ್‌ಬಗ್‌ರ್‍ಗೆ ಮಂಗಳವಾರ ಬಂದಿಳಿದರು. 3 ದಿನಗಳ 15ನೇ ಬ್ರಿಕ್ಸ್‌ ಶೃಂಗದಲ್ಲಿ ಅವರು ಭಾಗಿಯಾಗಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸೇರಿ ಅನೇಕ ಗಣ್ಯರ ಜತೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

ಆಫ್ರಿಕಾಗೆ ಆಗಮಿಸುತ್ತಿದ್ದಂತೆಯೇ ಮೋದಿ ಅವರಿಗೆ ಭವ್ಯ ಸ್ವಾಗತ ದೊರಕಿತು. ಭಾರತೀಯ ಸಮುದಾಯದ ಜನರು ತ್ರಿವರ್ಣ ಧ್ವಜ ಹಿಡಿದು ‘ಭಾರತ ಮಾತಾ ಕೀ ಜೈ’ ಹಾಗೂ ‘ಮೋದಿ ಮೋದಿ’ ಎಂದು ಕೂಗುತ್ತ ಭಾರತದ ಪ್ರಧಾನಿಯನ್ನು ಸ್ವಾಗತಿಸಿದರು. ಇದೇ ವೇಳೆ, ಬ್ರಿಕ್ಸ್‌ ಶೃಂಗ ನಡೆಯಲಿರುವ ಸ್ಯಾಂಡ್‌ಟನ್‌ ಹೋಟೆಲ್‌ನಲ್ಲಿ ಹಲವು ಭಾರತೀಯರನ್ನು ಭೇಟಿ ಮಾಡಿದರು.

ಈ ನಡುವೆ, ಜೂ.31ರಂದು ರಕ್ಷಾ ಬಂಧನ ಹಬ್ಬ ಇರುವ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಇಬ್ಬರು ಭಾರತೀಯ ಸಮುದಾಯದ ಮಹಿಳೆಯರು ಮೋದಿಗೆ ರಾಖಿ ಕಟ್ಟಿಸಂಭ್ರಮಿಸಿದರು. ಈ ವೇಳೆ ನಿರ್ಮಾಣ ಹಂತದಲ್ಲಿರುವ ಆಫ್ರಿಕಾದ ಸ್ವಾಮಿನಾರಾಯಣ ಮಂದಿರದ ಮಾದರಿಯನ್ನು ವೀಕ್ಷಿಸಿದರು.

ಸೌತ್ ಆಫ್ರಿಕಾದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ, ಪ್ರಧಾನಿ ಕಾಲಿಗೆರಗಿ ಆಶೀರ್ವಾದ ಪಡೆದ ಭಾರತೀಯ ಸಮುದಾಯ!

 ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ 15ನೇ ಬ್ರಿಕ್ಸ್‌ ಶೃಂಗ ಸಭೆಯು ಆ.22-24ರವರೆಗೆ ಇಲ್ಲಿನ ಜೋಹಾನ್ಸ್‌ಬಗ್‌ರ್‍ನಲ್ಲಿ ನಡೆಯಲಿದೆ. 2019ರ ಕೋವಿಡ್‌ ನಂತರ ಮೊದಲ ಬಾರಿಗೆ ಬ್ರಿಕ್ಸ್‌ ನಾಯಕರು ಖುದ್ದಾಗಿ ಭಾಗವಹಿಸುತ್ತಿರುವ ಮೊದಲ ಸಭೆ ಇದಾಗಿದೆ. ಈ ಸಭೆ ಬಳಿಕ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ. ಈ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಗ್ರೀಕ್‌ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿ 40 ವರ್ಷಗಳ ಬಳಿಕ ಭಾರತದ ಪ್ರಧಾನಿಯ ಗ್ರೀಕ್‌ ಪ್ರವಾಸವಾಗಿರಲಿದೆ.