ಆಫ್ರಿಕಾದಿಂದ ಚಂದ್ರಯಾನ 3 ಲ್ಯಾಂಡಿಂಗ್ ವರ್ಚುವಲ್ ಆಗಿ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ!
ಆಗಸ್ಟ್ 23ರ ಸಂಜೆ ಚಂದ್ರಯಾನ 3 ಯೋಜನೆ ವಿಕ್ರಮ್ ಲ್ಯಾಂಡರ್‌ನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಲಾಗುತ್ತದೆ. ಈ ಕ್ಷಣಕ್ಕಾಗಿ ಇಡೀ ದೇಶವೇ ಕಾಯುತ್ತಿದೆ. ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವರ್ಚುವಲ್ ಆಗಿ ವಿಕ್ರಮ್ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ.
ಜೋಹಾನ್ಸ್‌ಬರ್ಗ್(ಆ.22) ಭಾರತದ ಚಂದ್ರಯಾನ 3 ಬಹುತೇಕ ಯಶಸ್ವಿಯಾಗಿದೆ. ಇದೀಗ ಯಶಸ್ವಿಯಾಗಿ ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಉಪಗ್ರಹ ಲ್ಯಾಂಡ್ ಮಾಡಲು ಇಸ್ರೋ ಎಲ್ಲಾ ಸಿದ್ಧತೆ ಮಾಡಿದೆ. ಈ ವಿಶೇಷ ಕ್ಷಣಕ್ಕಾಗಿ ಭಾರತ ಮಾತ್ರವಲ್ಲ ವಿಶ್ವವೇ ಕಾಯುತ್ತಿದೆ. ಆಗಸ್ಟ್ 23ರ ಸಂಜೆ 6.04 ಗಂಟೆಗೆ ವಿಕ್ರಮ ಲ್ಯಾಂಡರ್ ಇಳಿಸಲು ಇಸ್ರೋ ತಯಾರಿ ನಡೆಸಿದೆ. ಇಸ್ರೋ ಕಾರ್ಯಾಚರಣ ನೇರ ಪ್ರಸಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದಿಂದ ಪಾಲ್ಗೊಳ್ಳಲಿದ್ದಾರೆ. 15ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್ ತಲುಪಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾದಿಂದಲೇ ಮೋದಿ ವರ್ಚುವಲ್ ಆಗಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ ಇಳಿಯಲಿರುವ ಚಂದ್ರಯಾನ-3 ನೌಕೆಯನ್ನು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ಟ್ರಾಕ್ ಕೇಂದ್ರದ ವಿಜ್ಞಾನಿಗಳು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಆ ನೌಕೆ ನಿಗದಿಯಂತೆ ಸುಗಮವಾಗಿ ಚಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಚಂದ್ರಯಾನ-3 ನೌಕೆಯನ್ನು ಪೀಣ್ಯದ ಇಸ್ಟ್ರಾಕ್ ಕೇಂದ್ರದ ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಿಂದ ನಿಗಾ ವಹಿಸಲಾಗುತ್ತಿದೆ. ಬುಧವಾರ ನೌಕೆ ಲ್ಯಾಂಡ್ ಆಗಲಿರುವ ಹಿನ್ನೆಲೆಯಲ್ಲಿ ಇಸ್ಟ್ರಾಕ್ ಕೇಂದ್ರದಲ್ಲಿ ಅತ್ಯುತ್ಸಾಹ ಹಾಗೂ ಬಿರುಸಿನ ಚಟುವಟಿಕೆಗಳು ಕಂಡುಬರುತ್ತಿವೆ. ಈ ಕೇಂದ್ರದಲ್ಲಿನ ಚಟುವಟಿಕೆಗಳನ್ನು ಬುಧವಾರ ಸಂಜೆ 5.20ರಿಂದ ಟೀವಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸಂಜೆ 6.04ಕ್ಕೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯಲಿದೆ.
ಚಂದ್ರಯಾನ 3: ಇಂದಿನ ಪ್ರಕ್ರಿಯೆ ಏನು? ಮುಂದೆ ಯಾರ ಕೆಲಸ ಏನೇನು?
ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್‌ಗಾಗಿ ದೇಶಾದ್ಯಂತ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲಾಗಿದೆ. ಚಂದ್ರಯಾನ- 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲಿ ಎಂದು ಹಾರೈಸಿ ಬಿಜೆಪಿ ಘಟಕದ ಪದಾಧಿಕಾರಿಗಳು ಮಂತ್ರಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮೈಸೂರಿನಿಂದ ಮಧ್ಯಾಹ್ನ 1.25ಕ್ಕೆ ಹೊರಟ ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ವಕ್ತಾರ ಎಂ. ಮೋಹನ್, ಹಿಂದುಳಿದ ಮೋರ್ಚಾ ಅಧ್ಯಕ್ಷ ಜೋಗಿ ಮಂಜು ನೇತೃತ್ವದಲ್ಲಿ ನಗರದ ಎಲ್ಲಾ 83 ಮಂದಿ ಪದಾಧಿಕಾರಿಗಳು ಮಂತ್ರಾಲಯಕ್ಕೆ ತೆರಳಿದರು. ಇನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಳದ ಆಡಳಿತ ಮಂಡಳಿ ವಿಶೇಷ ಪೂಜೆ ಸಲ್ಲಿಸಿತು. ಜತೆಗೆ ದೇವರಿಗೆ ಇಸ್ರೋ ಹೆಸರಿನಲ್ಲಿ ಸೇವೆ ನೆರವೇರಿಸಲಾಯಿತು.
Chandrayaan 3: ಚಂದ್ರನ ನೆಲದತ್ತ ಭಾರತ, ಶಶಿಯ ಆಗಸದಲ್ಲಿ ವಿಕ್ರಮ್ ಅನಾವರಣ!
ಭಾರತದ ಮಹತ್ವಾಕಾಂಕ್ಷಿಯ ಯೋಜನೆ ಚಂದ್ರಯಾನ 3 ನಿರಂತರವಾಗಿ ತನ್ನ ಗುರಿಯತ್ತ ಸಾಗುತ್ತಿದೆ. ಈಗ ಇಸ್ರೋ ಚಂದ್ರಯಾನ-3 ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದೆ. ಚಂದ್ರಯಾನ-3 ಮತ್ತು ಚಂದ್ರಯಾನ-2 ಆರ್ಬಿಟರ್ ನಡುವೆ ಸಂವಹನವನ್ನು ಯಶಸ್ವಿಯಾಗಿ ಸ್ಥಾಪಿಸಲಾಗಿದೆ...