Asianet Suvarna News Asianet Suvarna News

ಸೌತ್ ಆಫ್ರಿಕಾದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ, ಪ್ರಧಾನಿ ಕಾಲಿಗೆರಗಿ ಆಶೀರ್ವಾದ ಪಡೆದ ಭಾರತೀಯ ಸಮುದಾಯ!

15 ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದ ಜೋಹಾನ್ಸ್‌ಗೆ ಬಂದಿಳಿದಿದ್ದಾರೆ. ಮೋದಿಗೆ ಭಾರತೀಯ ಸಮುದಾಯ ಅದ್ಧೂರಿ ಸ್ವಾಗತ ಕೋರಿದೆ. ನೆರೆದಿದ್ದ ಭಾರತೀಯರತ್ತ ತೆರಳಿದ ಮೋದಿ ಕೈಕುಲುಗಿ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಹಲವರು ಮೋದಿ ಪಾದಕ್ಕೆರಗಿ ಆಶೀರ್ವಾದ ಪಡೆದಿದ್ದಾರೆ. 
 

BRICS Summit PM Modi receive grand welcome in Johannesburg South Africa ckm
Author
First Published Aug 22, 2023, 7:07 PM IST

ನವದೆಹಲಿ(ಆ.22) ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್ ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಮೋದಿ ಆಗಮನಕ್ಕಾಗಿ ಕಾಯುತ್ತಿದ್ದ ಭಾರತೀಯ ಸಮುದಾಯ ಮೋದಿ ನೋಡುತ್ತಿದ್ದಂತ ಜಯಘೋಷ ಮೊಳಗಿಸಿದ್ದಾರೆ. ಪುಟಾಣಿಯೊಬ್ಬ ಆರತಿ ಬೆಳಗಿ ಮೋದಿಗೆ ಸ್ವಾಗತ ನೀಡಿದ್ದಾನೆ. ಭಾರತೀಯ ಸಮುದಾಯದ ಉತ್ಸಾಹ, ಹಾಗೂ ಪ್ರೀತಿಗೆ ಮೋದಿ ಧನ್ಯವಾದ ಹೇಳಿದ್ದಾರೆ. ಎಲ್ಲರ ಕೈಕುಲುಕಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಲವರು ಪ್ರಧಾನಿ ಮೋದಿ ಪಾದಕ್ಕೆರಗಿ ನಮಸ್ಕರಿಸಿದ್ದಾರೆ.

ಅಭಿವೃದ್ಧಿಯ ಅಗತ್ಯತೆಗಳು ಮತ್ತು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ ಸೇರಿದಂತೆ ಇಡೀ ಜಾಗತಿಕ ದಕ್ಷಿಣ ಭಾಗದ ಭೂಗೋಳಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಮತ್ತು ಸಂಧಾನ ಮಾಡಲು ಬ್ರಿಕ್ಸ್  ವೇದಿಕೆಯಾಗಿದೆ ಎಂದು ನಾವು ಹೆಮ್ಮೆ ಪೂರ್ವಕ ಗೌರವಿಸುತ್ತೇವೆ.  ಈ ಶೃಂಗಸಭೆಯು ಬ್ರಿಕ್ಸ್‌ ಗೆ ಭವಿಷ್ಯದ ಸಹಕಾರ ಕ್ಷೇತ್ರಗಳನ್ನು ಗುರುತಿಸಲು ಮತ್ತು ಸಾಂಸ್ಥಿಕ ಅಭಿವೃದ್ಧಿಯನ್ನು ಪರಿಶೀಲಿಸಲು ಉಪಯುಕ್ತ ಅವಕಾಶವನ್ನು ಒದಗಿಸುತ್ತದೆ ಎಂದು ಮೋದಿ ಹೇಳಿದ್ದರು.

'ನಮಸ್ಕಾರ ಮೋದಿಜಿ': ಹರಿಣಗಳ ನಾಡಿಗೆ ಆತ್ಮೀಯವಾಗಿ ಸ್ವಾಗತಿಸಿದ, ಗ್ಯಾರಿ ಕರ್ಸ್ಟನ್‌, ಜಾಂಟಿ ರೋಡ್ಸ್‌..!

ಸೌತ್ ಆಫ್ರಿಕಾ ಪ್ರವಾಸಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಗ್ರೀಸ್ ಪ್ರಧಾನಮಂತ್ರಿ ಘನತೆವೆತ್ತ ಕಿರಿಯಾಕೋಸ್ ಮಿತ್ಸೋಟಾಕಿಸ್  ಆಹ್ವಾನದ ಮೇರೆಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.  ಬ್ರಿಕ್ಸ್ ಶೃಂಗಸಭೆ ಚಟುವಟಿಕೆ ಭಾಗವಾಗಿ ನಡೆಯಲಿರುವ ಬ್ರಿಕ್ಸ್-ಆಫ್ರಿಕಾ ಔಟ್‌ ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಡೈಲಾಗ್ ಕಾರ್ಯಕ್ರಮಗಳಲ್ಲಿ ಸಹ ಭಾಗವಹಿಸುತ್ತೇನೆ.  ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಿಸಲಾದ ಹಲವಾರು ಅತಿಥಿ ದೇಶಗಳೊಂದಿಗೆ ಸಂವಹನ ನಡೆಸಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ. 

ಜೋಹಾನ್ಸ್‌ ಬರ್ಗ್‌ ನಲ್ಲಿರುವ ಕೆಲವು ರಾಷ್ಟ್ರ  ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲು ನಾನು ಸಮಯಾವಕಾಶಗಳನ್ನು ಎದುರು ನೋಡುತ್ತಿದ್ದೇನೆ.  ನಾನು 25 ಆಗಸ್ಟ್ 2023 ರಂದು ಗ್ರೀಸ್‌ ನ ಅಥೆನ್ಸ್‌ಗೆ ಪ್ರಯಾಣಿಸುತ್ತೇನೆ. ಈ ಪ್ರಾಚೀನ ಭೂಮಿಗೆ, ಇದು ನನ್ನ ಮೊದಲ ಭೇಟಿಯಾಗಿದೆ. 40 ವರ್ಷಗಳ ನಂತರ ಗ್ರೀಸ್‌ ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ನಾನು ಪಾತ್ರನಾಗಿದ್ದೇನೆ ಎಂಬ ಖುಷಿ ಕೂಡಾ ಜೊತೆಗಿದೆ ಎಂದು ಮೋದಿ ಹೇಳಿದ್ದರು.

ನಮ್ಮ ಎರಡು ರಾಷ್ರಗಳ ನಾಗರೀಕತೆಗಳ ನಡುವಿನ ಸಂಪರ್ಕವು ಎರಡು ಸಹಸ್ರಮಾನಗಳ ಹಿಂದಿನದು.  ಆಧುನಿಕ ಕಾಲದಲ್ಲಿ, ಪ್ರಜಾಪ್ರಭುತ್ವ, ಕಾನೂನಿನ ನಿಯಮ, ಸಮಾನತೆ, ಮತ್ತು ಬಹುತ್ವದ ಹಂಚಿಕೆಯ ಮೌಲ್ಯಗಳಿಂದ ನಮ್ಮ ಸಂಬಂಧಗಳನ್ನು ಬಲಪಡಿಸಲಾಗಿದೆ.  ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ಮತ್ತು ಸಾಂಸ್ಕೃತಿಕ ಮತ್ತು ಜನರ ಸಂಪರ್ಕಗಳಂತಹ ವೈವಿಧ್ಯಮಯ ವಲಯಗಳಲ್ಲಿನ ಸಹಕಾರವು ನಮ್ಮ ಎರಡು ದೇಶಗಳನ್ನು ಇನ್ನೂ ಹತ್ತಿರ ತರುತ್ತಿವೆ.

 

ಪ್ರಧಾನಿ ಮೋದಿ ಬಗ್ಗೆ ಅವ​ಹೇ​ಳ​ನ​ಕಾರಿ ವಿಡಿ​ಯೋ: ದೂರು ದಾಖಲು

ಗ್ರೀಸ್‌ ಗೆ ನನ್ನ ಈ ಭೇಟಿಯನ್ನು , ನಮ್ಮ ಬಹುಮುಖಿ ಸಂಬಂಧಗಳ ಗಾಢವಾದ ಇತಿಹಾಸದಲ್ಲಿ, ಹೊಸ ಅಧ್ಯಾಯವನ್ನು ತೆರೆಯುವ ನಿಟ್ಟಿನಲ್ಲಿ ಪ್ರಯತ್ನಿಸಿ ಅಪ್ಯಾಯಮಾನವಾಗಿ ದಾಖಲಿಸಲು ನಾನು ಹತ್ತುಹಲವು ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದರು.

Follow Us:
Download App:
  • android
  • ios