ಭಾರತ ಮೂಲದ ಅಮೆರಿಕನ್ ಕೋಟ್ಯಾಧಿಪತಿ: ಇವರು ಗೂಗಲ್‌ನಲ್ಲಿ ಹೂಡಿಕೆ ಮಾಡಿದ್ದ ಮೊದಲ ಭಾರತೀಯ
ಇಂದು ಗೂಗಲ್ ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನರ ಜೀವನವನ್ನು ಗೂಗಲ್ ಆವರಿಸಿದೆ. ಹಾಗಿದ್ದರೆ ಇಂದು ಇಷ್ಟೊಂದು ಯಶಸ್ವಿಯಾಗಿರುವ ಗೂಗಲ್‌ಗೆ ಮೊದಲ ಬಾರಿಗೆ ಬಂಡವಾಳ ಹೂಡಿಕೆ ಮಾಡಿದ್ದು ಯಾರು ಎಂಬ ವಿಚಾರ ನಿಮಗೆ ಗೊತ್ತಾ?
ಸಾಮಾನ್ಯವಾಗಿ ಹೊಸ ಸಂಸ್ಥೆಯೊಂದು ಆರಂಭವಾದಾಗ ಅದಕ್ಕೆ ಬಂಡವಾಳ ಹೂಡಿಕೆ ಮಾಡಲು ಯಾರು ಮುಂದೆ ಬರುವುದಿಲ್ಲ, ಏಕೆಂದರೆ ಸಂಸ್ಥೆ ಮುಂದೆ ಏನಾಗಬಹುದೋ ಎಂಬ ಭಯ ಹೂಡಿಕೆದಾರರಿಗಿರುತ್ತದೆ. ಆದರೆ ಒಮ್ಮೆ ಯಶಸ್ವಿಯಾದರೆ ಮತ್ತೆ ಹೂಡಿಕೆದಾರರಿಗೆ ಯಾವುದೇ ಭಯ ಇರುವುದಿಲ್ಲ. ಅದೇ ರೀತಿ ಗೂಗಲ್ ಕೂಡ ಹಿಂದೊಮ್ಮೆ ಸಣ್ಣದಾಗಿ ಶುರುವಾದ ಸರ್ಚ್ ಇಂಜಿನ್. ಆದರೆ ಇಂದು ಗೂಗಲ್ ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನರ ಜೀವನವನ್ನು ಗೂಗಲ್ ಆವರಿಸಿದೆ. ಹಾಗಿದ್ದರೆ ಇಂದು ಇಷ್ಟೊಂದು ಯಶಸ್ವಿಯಾಗಿರುವ ಗೂಗಲ್‌ಗೆ ಮೊದಲ ಬಾರಿಗೆ ಬಂಡವಾಳ ಹೂಡಿಕೆ ಮಾಡಿದ್ದು ಯಾರು ಎಂಬ ವಿಚಾರ ನಿಮಗೆ ಗೊತ್ತಾ?
ಅಮೆರಿಕಾದ ಮೂಲಕ ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಾಗಿರುವ ಗೂಗಲ್‌ಗೆ ಮೊದಲು ಇನ್‌ವೆಸ್ಟ್ ಮಾಡಿದ್ದು ಓರ್ವ ಭಾರತೀಯ. ಭಾರತೀಯ ಮೂಲದ ರಾಮ್ ಶ್ರೀರಾಮ್ ಎಂಬುವವರೇ ಗೂಗಲ್‌ನಲ್ಲಿ ಮೊದಲ ಬಾರಿ ಹಣ ಹೂಡಿಕೆ ಮಾಡಿದ್ದರಂತೆ. ಟ್ವಿಟ್ಟರ್ ಬಳಕೆದಾರ ಉತ್ಕರ್ಷ್ ಸಿಂಗ್ ಎಂಬುವವರು ತಮ್ಮ ಪೋಸ್ಟ್‌ನಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಇದನ್ನು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಶೇರ್ ಮಾಡಿಕೊಂಡಿದ್ದಾರೆ.
ಗೂಗಲ್ ಸಿಇಒ ಸುಂದರ ಪಿಚ್ಚೈ ಬದುಕಿನಿಂದ ಈ 10 ಪಾಠಗಳನ್ನು ಪ್ರತಿ ಮಗುವೂ ಕಲಿಯಬೇಕು..
ರಾಮ್ ಶ್ರೀರಾಮ್ ಅವರು ಗೂಗಲ್‌ನ ಸಂಸ್ಥಾಪಕ ಮಂಡಳಿಯ ಸದಸ್ಯರಲ್ಲಿ ಒಬ್ಬರು ಪೋರ್ಬ್ಸ್ ವರದಿ ಪ್ರಕಾರ ಇವರು ತಮ್ಮ ಬಹುತೇಕ ಗೂಗಲ್ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಅದರ ಮಾತೃ ಸಂಸ್ಥೆಯಲ್ಲಿ ಮಂಡಳಿಯಲ್ಲಿ ಅವರಿನ್ನೂ ಸದಸ್ಯರಾಗಿ ಉಳಿದಿದ್ದಾರೆ. ಅಲ್ಲದೇ ಇವರು ಸಾಹಸೋದ್ಯಮ ಹೂಡಿಕೆ ಕಂಪನಿ ಶೆರ್ಪಾಲೋ ವೆಂಚರ್‌ನ ಸ್ಥಾಪಕರಾಗಿದ್ದಾರೆ. ಇದರ ಜೊತೆ ಪೇಪರ್‌ಲೆಸ್ ಪೋಸ್ಟ್ ಹಾಗೂ ಯುಬಿಕೋ ಸಂಸ್ಥೆಯಲ್ಲೂ ಸ್ಥಾನ ಹೊಂದಿದ್ದಾರೆ. ಸ್ಟ್ಯಾನ್‌ಫೋರ್ಡ್ ಸೀಡ್ ಸಂಸ್ಥೆಯಲ್ಲೂ ಬೋರ್ಡ್ ಮೆಂಬರ್ ಆಗಿರುವ ಇವರು ಸ್ಕೂಲ್ ಆಫ್ ಇಂಜಿನಿಯರಿಂಗ್‌ಗೆ ಬಹಳ ದೀರ್ಘಾಕಾಲದಿಂದಲೂ ಸಲಹೆಗಾರರಾಗಿದ್ದಾರೆ.
ಭಾರತದಲ್ಲಿ ಜನಿಸಿದ ಇವರು ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಅಧ್ಯಯನ ಮಾಡಿದ್ದರು. 1994ರಲ್ಲಿ ಅಮೆರಿಕಾಗೆ ತೆರಳಿದ ಅವರು ನಂತರ ಅಲ್ಲಿ ನೆಟ್‌ಸ್ಕೇಪ್ ಸಂಸ್ಥಗೆ ಸೇರಿದರು. ನಂತರ ಆನ್‌ಲೈನ್ ಮಾರುಕಟ್ಟೆ ಜಂಗ್ಲಿಯ ಅಧ್ಯಕ್ಷರಾದರು. ಇದನ್ನು ನಂತರ ಮಾರುಕಟ್ಟೆ ದೈತ್ಯ ಅಮೇಜಾನ್ ಖರೀದಿಸಿತ್ತು. ಇದಾದ ನಂತರ ಜೆಫ್ ಬೆಜೋಸ್ ಅವರ ಅಮೆಜಾನ್ ಸಂಸ್ಥೆಗೆ ಉಪಾಧ್ಯಕ್ಷರಾದರು, 2000ದಲ್ಲಿ ಈ ಇ ಕಾಮರ್ಸ್ ಸಂಸ್ಥೆಯನ್ನು ತೊರೆದ ರಾಮ್ ಶ್ರೀರಾಮ್ ಅವರು ತಮ್ಮದೇ ಸ್ವಂತ ಇ ಕಾಮರ್ಸ್ ಸಂಸ್ಥೆ ಶೆರ್ಪಾಲೋ ವೆಂಚರ್ ಅನ್ನು ತೆರೆದರು.
ಗೂಗಲ್ ಸೇರಿ ಭಾರತದ ಟಾಪ್ ಕಂಪನಿ ಎಂಜಿನೀಯರ್ಸ್‌ಗೆ ಕೊಡುತ್ತಿರುವ ಸ್ಯಾಲರಿ ಎಷ್ಟು?
ರಾಮ್ ಶ್ರೀರಾಮ್ ಅವರು ಹಾಗೂ ಅವರ ಪತ್ನಿ ಇಬ್ಬರು ಸೇರಿ 61 ಮಿಲಿಯನ್ ಡಾಲರ್ ಹಣವನ್ನು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯಕ್ಕೆ ದಾನ ಮಾಡಿದ್ದರು. ಇಂಜಿನಿಯರಿಂಗ್ ಕೆಲಸಗಳನ್ನು ಬೆಂಬಲಕ್ಕಾಗಿ ಈ ಹಣವನ್ನು ಬಳಸಲಾಗುತ್ತಿದೆ. 1956ರಲ್ಲಿ ಚೆನ್ನೈನಲ್ಲಿ ಜನಿಸಿರುವ ರಾಮ್ ಶ್ರೀರಾಮ್ ಅವರು ಇಂದು ಅಮೆರಿಕಾದ ದೊಡ್ಡ ಉದ್ಯಮಿಯಾಗಿದ್ದು, ಜಾನ್ವಿ ಹಾಗೂ ಕೇತಕಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಫೋರ್ಬ್ಸ್ ವರದಿಯ ಪ್ರಕಾರ 2020ರಲ್ಲಿ ಇವರ ನೆಟ್ ವರ್ತ್ 2.3 ಬಿಲಿಯನ್ ಡಾಲರ್ ಆಗಿತ್ತು.
ಇವರ ಬಗ್ಗೆ ಮಾಧುರಿ ದೀಕ್ಷಿತ್ ಪತಿ ಡಾ ಶ್ರೀರಾಮ್ ನೇನೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು, ನಾವು ಭೇಟಿ ಮಾಡಿದ ಅದ್ಭುತ ವ್ಯಕ್ತಿಗಳು, ಅದರಲ್ಲೊಬ್ಬರ ಜೊತೆ ನನ್ನ ಹೆಸರು ಕೂಡ ಹಂಚಿಕೆಯಾಗಿದೆ ಎಂದು ಬರೆದಿದ್ದಾರೆ. ಉತ್ಕರ್ಷ್ ಸಿಂಗ್ ಅವರ ಮೂಲ ಪೋಸ್ಟ್‌ನ್ನು ಮಾಧುರಿ ಪತಿ ಶೇರ್ ಮಾಡಿದ್ದಾರೆ. ಇಂದು ಗೂಗಲ್ ಇರುವುದಕ್ಕೆ ಈ ಭಾರತೀಯ ಮೂಲದ ಅಮೆರಿಕನ್ ಕೋಟ್ಯಾಧಿಪತಿ ಕಾರಣ ಎಂದು ಉತ್ಕರ್ಷ್ ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಇದೊಂದು ಅದ್ಭುತವಾದ ಜರ್ನಿ ಎಂದು ಕಾಮೆಂಟ್ ಮಾಡಿದ್ದಾರೆ.