ಏಷ್ಯಾದ ಅತಿದೊಡ್ಡ ಸ್ಲಂ ಧಾರಾವಿ ಅಭಿವೃದ್ಧಿ, ಫೆಬ್ರವರಿಯಿಂದ ಡೇಟಾ ಕಲೆಕ್ಷನ್ ಆರಂಭಿಸಲಿರುವ ಅದಾನಿ!
2000ನೇ ಇಸವಿಯ ಮೊದಲು ಧಾರಾವಿಯಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಮಾತ್ರ ಉಚಿತ ವಸತಿಗೆ ಅರ್ಹರಾಗಿರುತ್ತಾರೆ. ಇಲ್ಲಿನ ಕೊನೆಯ ಸಮೀಕ್ಷೆಯನ್ನು 15 ವರ್ಷಗಳ ಹಿಂದೆ ನಡೆಸಲಾಗಿತ್ತು. ಕೆಲವು ಅಂದಾಜಿನ ಪ್ರಕಾರ 7 ಲಕ್ಷ ಅನರ್ಹ ನಿವಾಸಿಗಳನ್ನು ಧಾರಾವಿಯಿಂದ ಸ್ಥಳಾಂತರಿಸಬಹುದು ಎಂದಿದೆ.
ಮುಂಬೈ (ಜ.26): ಭಾರತೀಯ ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಸಂಸ್ಥೆಯು ಫೆಬ್ರವರಿಯಲ್ಲಿ 10 ಲಕ್ಷ ಬಡ ನಿವಾಸಿಗಳಿಂದ ಡೇಟಾ ಮತ್ತು ಬಯೋಮೆಟ್ರಿಕ್‌ಗಳನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ, ಇದು ಏಷ್ಯಾದ ಅತಿದೊಡ್ಡ ಕೊಳೆಗೇರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಮುಂಬೈನ ಧಾರಾವಿ ಸ್ಲಮ್‌ನ ಮರುಅಭಿವೃದ್ಧಿಯ ಭಾಗವಾಗಿದೆ. ಧಾರಾವಿ ಕೊಳೆಗೇರಿಯಲ್ಲಿನ ನಿವಾಸಿಗಳು ಪುನರಾಭಿವೃದ್ಧಿ ಪ್ರದೇಶದಲ್ಲಿ ಉಚಿತ ಮನೆ ಪಡೆಯಲು ಹಾಗೂ ಅವರ ಅರ್ಹತೆಯನ್ನು ನಿರ್ಧಾರ ಮಾಡಲು ಸಮೀಕ್ಷೆಯು ನಿರ್ಣಾಯಕವಾಗಿದೆ. 640 ಎಕರೆ ಅಂದರೆ 260 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಧಾರಾವಿ ಪ್ರದೇಶವನ್ನು ಪುನಃಶ್ಚೇತನಗೊಳಿಸಬೇಕು ಎಂದು ಅಧಿಕಾರಿಗಳು ದಶಕಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ, ಇತ್ತೀಚೆಗೆ ಅದಾನಿ ಗ್ರೂಪ್ ಮಹಾರಾಷ್ಟ್ರ ರಾಜ್ಯದ ಸಹಯೋಗದೊಂದಿಗೆ ಧಾರಾವಿ ಸ್ಲಮ್‌ನ ಪುನರಾಭಿವೃದ್ಧಿಯ ಬಿಡ್‌ಅನ್ನು ಜಯಿಸಿದೆ. ಈ ಗುತ್ತಿಗೆ ನೀಡಿಕೆಗೆ ಸಂಬಂಧಿಸಿದ ಕಾನೂನು ವಿವಾದಗಳು ಇನ್ನೂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ.
2000ನೇ ಇಸವಿಯ ಮೊದಲು ಧಾರಾವಿಯಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಮಾತ್ರ ಉಚಿತ ವಸತಿಗೆ ಅರ್ಹರಾಗಿರುತ್ತಾರೆ. ಪ್ರದೇಶದ ಕೊನೆಯ ಸಮೀಕ್ಷೆಯನ್ನು 15 ವರ್ಷಗಳ ಹಿಂದೆ ನಡೆಸಲಾಗಿತ್ತು. ಕೆಲವು ಅಂದಾಜುಗಳ ಪ್ರಕಾರ ಅಂದಾಜು 7 ಲಕ್ಷ ಅನರ್ಹ ನಿವಾಸಿಗಳು ಧಾರಾವಿಯಿಂದ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಸೂಚಿಸಿದೆ. ಇದು ಇಲ್ಲಿನ ಹೆಚ್ಚಿನ ನಿವಾಸಿಗಳಿಗೆ ತಮ್ಮ ಜೀವನೋಪಾಯದ ಮಾರ್ಗಗಳೇನು ಎನ್ನುವ ಚಿಂತೆ ಕಾಡಿದೆ. ಮುಂಬೈನ ಮಿತಿಮೀರಿದ ಬಾಡಿಗೆಯಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮನೆ-ಮನೆ ಸಮೀಕ್ಷೆಯಲ್ಲಿ, ಅದಾನಿ ನೇತೃತ್ವದ ಸಂಸ್ಥೆಯು ಧಾರಾವಿ ನಿವಾಸಿಗಳ ವಿವರಗಳನ್ನು ಸಂಗ್ರಹಿಸಲು ಪ್ರಶ್ನೆಗಳನ್ನು ಕೇಳಲಿದೆ. ಅವರು ವಸತಿ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ಆವರಣವನ್ನು ಬಳಸುತ್ತಾರೆಯೇ, ಮಾಲೀಕತ್ವದ ಪುರಾವೆಗಳು ಮತ್ತು ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸುತ್ತಾರೆ ಎಂದು ಧಾರಾವಿ ಪುನರಾಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ಎಸ್.ವಿ.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.
ನಮ್ಮ ತಂಡ ಪ್ರತಿ ಮನೆಗೂ ಭೇಟಿ ನೀಡಲಿದ್ದು, ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹ ಮಾಡಲಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ಎಲ್ಲಾ ಅರ್ಹ ವ್ಯಕ್ತಿಗಳಿಗೆ ಮನೆ ಸಿಗಬೇಕು, ಅನರ್ಹ ವ್ಯಕ್ತಿಗಳು ಇದರ ಫಲ ಪಡೆಯಬಾರದು ಎನ್ನುವ ಕಾರಣ ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಕಂಪನಿಯು $614 ಮಿಲಿಯನ್ ಡಾಲರ್‌ನ ಮರುಅಭಿವೃದ್ಧಿ ಬಿಡ್ ಅನ್ನು ಅದಾನಿ ಗ್ರೂಪ್ ಗೆದ್ದಾಗ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಇತರ ಪಕ್ಷಗಳು ಅದಾನಿಗೆ ಅನ್ಯಾಯವಾಗಿ ಈ ಬಿಡ್ ನೀಡಿದೆ ಎಂದು ವಿರೋಧ ಪಕ್ಷಗಳು ಪುನರಾಭಿವೃದ್ಧಿಗೆ ಪ್ರತಿಭಟಿಸಿವೆ. ಆದರೆ, ಮಹಾರಾಷ್ಟ್ರ ಸರ್ಕಾರ ಹಾಗೂ ಅದಾನಿ ಗ್ರೂಪ್ ಮಾತ್ರ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಅದಾನಿ ಈ ಯೋಜನೆಗಾಗಿ ತಮ್ಮ ಜಾಗತಿಕ ತಂಡಗಳನ್ನು ಒಟ್ಟುಗೂಡಿಸಿದ್ದಾರೆ ಮತ್ತು ಶ್ರೀನಿವಾಸ್ ಪುನರಾಭಿವೃದ್ಧಿ ಒಂದು ವರ್ಷದೊಳಗೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಸಮೀಕ್ಷೆಯು ಎರಡು ಭಾಗಗಳಲ್ಲಿ ನಡೆಯುತ್ತದೆ, ಕೆಲವು ನೂರು ನಿವಾಸಿಗಳನ್ನು ಒಳಗೊಂಡಂತೆ ಮೂರರಿಂದ ನಾಲ್ಕು ವಾರಗಳಲ್ಲಿ ಪ್ರಾಯೋಗಿಕ ಹಂತವನ್ನು ಕಾರ್ಯಗತಗೊಳಿಸಲಾಗುತ್ತದೆ.
ಸ್ಲಂ ರಾಜಕುಮಾರಿಗೆ ಹಾಲಿವುಡ್ ಆಫರ್: 'ಮಲೀಶಾ' ಸಾಧನೆ ಎಂಥಾದ್ದು ಗೊತ್ತಾ ?
ಇನ್ನು ಡೇಟಾ ಸಂಗ್ರಹಣೆಗೆ 9 ತಿಂಗಳು ಸಮಯ ತಗುಲಬಹುದು ಎಂದು ಅದಾನಿ ಗ್ರೂಪ್ ತಿಳಿಸಿದೆ. ಉಚಿತ ಮನೆ ಪಡೆಯುವವರು ಹಾಗೂ ಸ್ಥಳಾಂತರವಾಗಬೇಕಾದವರ ಬಗ್ಗೆ ಧಾರಾವಿ ಪುನರಾಭಿವೃದ್ಧಿ ಪ್ರಾಧಿಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಯೋಜನೆಯ ಮೇಲ್ವಿಚಾರಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ಶೀಘ್ರದಲ್ಲೇ ನೇಮಿಸಿಕೊಳ್ಳಲಾಗುವುದು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಧಾರಾವಿ ಸ್ಲಂ ಬೀದಿಯಿಂದ WPLವರೆಗೆ, ಸಿಮ್ರನ್ ಜರ್ನಿಯೇ ಒಂದು ಸ್ಪೂರ್ತಿಯ ಕಥೆ..!