ಭಯೋತ್ಪಾದಕರು ಕಣಿವೆಯ ಯುವಕರನ್ನು ಹೇಗೆ ದಾರಿ ತಪ್ಪಿಸಿದ್ದಾರೆ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಹೇಗೆ ಪ್ರಚೋದಿಸಿದ್ದಾರೆ ಎಂಬುದನ್ನು ಭಾರತೀಯ ಸೇನೆಯು ವೀಡಿಯೊ ಮುಖಾಂತರ ತಿಳಿಸಿದೆ.
ನವದೆಹಲಿ (ಏ.16): ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕ ಘಟನೆಗಳು (terror incidents ) ಹೆಚ್ಚುತ್ತಿರುವ ಮಧ್ಯೆ, ಸೇನೆಯು ಸಮಾಜದ ಪ್ರತಿಯೊಂದು ವರ್ಗವು ಹೇಗೆ ಭಯೋತ್ಪಾದನೆಯಿಂದಾಗಿ ಹಾನಿಯನ್ನು ಅನುಭವಿಸಿದೆ ಎಂಬುದನ್ನು ಒತ್ತಿಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿದೆ ಮತ್ತು ಕಣಿವೆ ರಾಜ್ಯದಲ್ಲಿ ಸ್ಥಿರತೆಗಾಗಿ ತಮ್ಮ ಹೋರಾಟದಲ್ಲಿ ನಾಗರಿಕರಿಗೆ ಬಲವಾಗಿ ನಿಂತಿರಲಿದ್ದೇವೆ ಎಂದು ಭರವಸೆ ನೀಡಿದೆ.
ಭಾರತೀಯ ಸೇನೆಯ (Indian Army) ಚಿನಾರ್ ಕಾರ್ಪ್ಸ್ (Chinar Corps) ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, "ಕಾಶ್ಮೀರ್ ಫೈಟ್ಸ್ ಬ್ಯಾಕ್" (Kashmir Fights Back)ಎಂಬ ಶೀರ್ಷಿಕೆಯಡಿಯಲ್ಲಿ, ಕಣಿವೆ ರಾಜ್ಯದಲ್ಲಿ ನಾಗರಿಕರ ನೋವುಗಳು, ಅವರ ನಂಬಿಕೆಯನ್ನು ಲೆಕ್ಕಿಸದೆ, ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸಲು ಮತ್ತು ಸಮಾನತೆಯನ್ನು ಬಲಪಡಿಸಲು ಭದ್ರತಾ ಪಡೆಗಳು ಕೈಗೊಂಡ ಪ್ರಯತ್ನಗಳನ್ನು ತೋರಿಸಲು ಪ್ರಯತ್ನಿಸುತ್ತದೆ. "ದಶಕಗಳ ಭಯೋತ್ಪಾದನೆಯು ನಮ್ಮನ್ನು ಅನಾಥರು, ವಿಧವೆಯರು, ಅಳುವ ತಾಯಂದಿರು ಮತ್ತು ಅಸಹಾಯಕ ತಂದೆಯನ್ನು ಮಾತ್ರವೇ ಉಳಿಸಿದೆ' ಎಂದು ಭಾವುಕ ಭಾಗವನ್ನೂ ಬರೆಯಲಾಗಿದೆ.
ಕಾಶ್ಮೀರಿ ಪಂಡಿತರು (Kashmiri Pandits) ಕಣಿವೆ ರಾಜ್ಯವನ್ನು ತೊರೆದಿದ್ದು, ರಕ್ಷಣಾ ಕಾರ್ಯಾಚರಣೆಗಳು (rescue operations) ಮತ್ತು ಕಲ್ಲು ತೂರಾಟದ ಘಟನೆಗಳ (stone-throwing incidents)ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ ಮತ್ತು ದಶಕಗಳಿಂದ ಭಯೋತ್ಪಾದಕರು ಕಣಿವೆಯ ಯುವಕರನ್ನು ಹೇಗೆ ದಾರಿ ತಪ್ಪಿಸಿದ್ದಾರೆ ಮತ್ತು ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಹುಟ್ಟುಹಾಕಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ಇದು ಕೋಮು ಸೌಹಾರ್ದತೆಯ ಮಹತ್ವವನ್ನು ಒತ್ತಿಹೇಳುತ್ತದೆ.
"ಅವರು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸಿದರು. ಅವರು ನಮ್ಮ ಯುವಕರನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಅವರು ನಮ್ಮ ಸಂತರ ನಾಡನ್ನು ಯುದ್ಧಭೂಮಿಯನ್ನಾಗಿ ಮಾಡಲು ಪ್ರಯತ್ನಿಸಿದರು" ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಪತ್ರಕರ್ತ ಶುಜಾತ್ ಬುಖಾರಿ, ಸಾಮಾಜಿಕ ಕಾರ್ಯಕರ್ತ ಅರ್ಜುಮಂಡ್ ಮಜೀದ್, ಮಖನ್ ಲಾಲ್ ಬಿಂದ್ರೂ, ಸರಪಂಚ್ ಅಜಯ್ ಪಂಡಿತ್, ಸುಪಿಂದರ್ ಕೌರ್, ವಾಸಿಂ ಬಾರಿ, ಲೆಫ್ಟಿನೆಂಟ್ ಉಮರ್ ಫಯಾಜ್, ಅಯೂಬ್ ಪಂಡಿತ ಮತ್ತು ಪರ್ವೇಜ್ ಅಹ್ಮದ್ ದಾರ್ ಸೇರಿದಂತೆ ಭಯೋತ್ಪಾದಕರಿಂದ ಹತ್ಯೆಗೀಡಾದ ಇತರ ಕಾಶ್ಮೀರಿಗಳಿಗೆ ವೀಡಿಯೊ ಶ್ರದ್ಧಾಂಜಲಿ ಸಲ್ಲಿಸುತ್ತದೆ.
ಇದು ಭದ್ರತಾ ಸಿಬ್ಬಂದಿ ನಾಗರಿಕರು ಮತ್ತು ಮಕ್ಕಳನ್ನು ಸಾಂತ್ವನಗೊಳಿಸುವುದನ್ನು ತೋರಿಸುತ್ತದೆ ಮತ್ತು ಭಯೋತ್ಪಾದನೆ ಮತ್ತು ಮೂಲಭೂತೀಕರಣವನ್ನು ಒಟ್ಟಾಗಿ ಹೋರಾಡುವ ಸಂದೇಶದೊಂದಿಗೆ ವಿಡಿಯೋ ಮುಕ್ತಾಯಗೊಳ್ಳುತ್ತದೆ.
ಯುದ್ಧದ ನಡುವೆಯೇ ಭಾರತಕ್ಕೆ ರಷ್ಯಾದಿಂದ ‘ಎಸ್-400’ ಆಗಮನ!
"ಈ ಹೋರಾಟದಲ್ಲಿ ಕಾಶ್ಮೀರ ಏಕಾಂಗಿಯಾಗಿಲ್ಲ. ಹಿಂದೂ ನಿಮ್ಮೊಂದಿಗೆ ಇದ್ದೆವು. ಮುಂದೆಯೂ ನಿಮ್ಮೊಂದಿಗೆ ಇರುತ್ತೇವೆ. ಒಟ್ಟಾಗಿ ನಮ್ಮ ಮೇಲಿನ ಯುದ್ಧವನ್ನು ಎದುರಿಸೋಣ. ಪ್ರತಿ ನಾಗರಿಕ ಹಾಗೂ ಪ್ರತಿ ಸೈನಿಕ ಇದರೊಂದಿಗೆ ಕೈಜೋಡಿಸೋಣ ಎಂದು ವಿಡಿಯೋದಲ್ಲಿನ ಪಠ್ಯದಲ್ಲಿ ಬರೆಯಲಾಗಿದೆ.
ಕಾಶ್ಮೀರದಲ್ಲಿ ಭಯೋತ್ಪಾದನೆ ಇನ್ನು ಶೋಕಿ ಅಲ್ಲ: ಲೆ.ಜ. ಪಾಂಡೆ
ಒಂದೇ ವರ್ಷದಲ್ಲಿ 216 ಭಯೋತ್ಪಾದಕರ ಹತ್ಯೆ: ಭಯೋತ್ಪಾದನೆಯು ಶೋಕಿ ಎಂದು ಜಮ್ಮುಕಾಶ್ಮೀರದ ಯುವಜನತೆ ತಿಳಿದಿದ್ದರೆ ಅದು ಖಂಡಿತ ಸಾಧ್ಯವಿಲ್ಲ. ಕಳೆದ ವರ್ಷ ಜನವರಿಯಿಂದ ಪ್ರಸಕ್ತ ಜನವರಿಯವರೆಗೆ ಒಟ್ಟು 216 ಉಗ್ರರನ್ನು ಸೇನೆ ಹೊಡೆದುರುಳಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಸೇನಾ ಕಮಾಂಡರ್ ಲೆ.ಜನರಲ್ ಡಿ.ಪಿ. ಪಾಂಡೆ (Lt. Gen. D.P. Pandey) ಖಡಕ್ ಎಚ್ಚರಿಕೆ ನೀಡಿದ್ದಾರೆ. ಉಗ್ರರ ಉಪಟಳ ಕಂಡುಬಂದತೆಲ್ಲಾ ಸೇನೆ ಅದನ್ನು ನಿಗ್ರಹಿಸುತ್ತಾ ಬಂದಿದೆ ಹಾಗೂ ಉಗ್ರರು ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳಲಾರಂಭಿಸಿದ್ದಾರೆ. ದೇಶಕ್ಕೆ ಸತ್ಪ್ರಜೆ ಆಗದೆ ಭಯೋತ್ಪಾದನೆಗೆ ಸೇರುತ್ತಾ ಹೋದರೆ ಅಂತಹ ಉಗ್ರರನ್ನು ನಿರ್ನಾಮ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ. ‘20ರಿಂದ 25 ವಯೋಮಾನದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದನೆಗೆ ಸೇರುವವರಾಗಿದ್ದಾರೆ. ಆದರೆ ಈಗ ಅವರಿಗೂ ಭಯೋತ್ಪಾದನಾ ಶೋಕಿಯಿಂದ ಜೀವ ಕಳೆದುಕೊಳ್ಳಬೇಕಾಗಿದೆ ಎಂದು ಅರಿವಾಗಿದೆ. ಪರಿಣಾಮವಾಗಿ ಭಯೋತ್ಪಾದನೆಗೆ ಸೇರುವ ಯುವಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ’ ಎಂದು ಪಾಂಡೆ ತಿಳಿಸಿದ್ಧಾರೆ.
