ಪಂಜಾಬ್(ಜೂ.06): ಭಾರತ ಹಾಗೂ ಚೀನಾ ನಡುವಿನ ಗಡಿ ಬಿಕ್ಕಟ್ಟಿಗೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಂದು(ಜೂ.06): ಭಾರತೀಯ ಸೇನೆ ಹಾಗೂ ಚೀನಾ ಪೀಪಲ್ಸ್  ಲಿಬರೇಶನ್ ಆರ್ಮಿ ಜೊತೆ ಉನ್ನತ ಮಟ್ಟದ  ಮಾತುಕತೆ ನಡೆಸುತ್ತಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆ ಬಗೆಹರಿಸಲು ಭಾರತ ಮುಂದಾಗಿದೆ. ಆದರೆ ಚೀನಾ ಆಕ್ರಮಣಕಾರಿ ಮನೋಭಾವದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇದರ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಹಾಗೂ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗಡಿ ತಿಕ್ಕಾಟ: ಭಾರತ, ಚೀನಾ ಮಾತುಕತೆ!

ಯುದ್ಧ ಭಾರತದ ಆಯ್ಕೆಯಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಭಾರತ ಸದಾ ಸಿದ್ದವಿದೆ. ಆದರೆ ಮಾತುಕತೆಗೆ ಬಗ್ಗದಿದ್ದರೆ, ಚೀನಾ ಹೆದರಿ ಕೂರುವ ಜಾಯಮಾನ ಭಾರತಕ್ಕಿಲ್ಲ. ಕಾರಣ ಇದು 1962ರ ಜಮಾನ ಅಲ್ಲ. ಈಗ ಭಾರತೀಯ ಸೇನೆ ಸಂಪೂರ್ಣ ಬದಲಾಗಿದೆ. ಅತ್ಯಾಧುನಿಕ ಶಸಸ್ತ್ರಗಳನ್ನು ಹೊಂದಿದೆ. ಹೀಗಾಗಿ ಚೀನಾ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ವಾರ್ನಿಂಗ್ ನೀಡಿದ್ದಾರೆ.

ಭಾರತ-ಚೀನಾ ಗಡಿ ಬಿಕ್ಕಟ್ಟು;ಇಲ್ಲಿದೆ ಡ್ರ್ಯಾಗನ್ ದೇಶದ ಕೋಪಕ್ಕೆ ಅಸಲಿ ಕಾರಣ !

ವಿಡಿಯೋ ಕಾನ್ಫೆರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಚೀನಾ ಸುಖಾಸುಮ್ಮನೆ ತಕರಾರು ತೆಗೆಯುವದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಭಾರತ ಸದಾ ಶಾಂತಿಯನ್ನೇ ಬಯಸುತ್ತದೆ. ಭಾರತ ಎಂದೂ ಅತಿ ಕ್ರಮಣ ಮಾಡಿಲ್ಲ. ಆದರೆ ಪರಿಸ್ಥಿತಿ ಕೈಮೀರಲು ಭಾರತ ಬಿಡುವುದಿಲ್ಲ. ಕಾರಣ ಭಾರತದ ಬದಲಾಗಿದೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಇಂಡೋ-ಚೀನಾ 1962ರ ಯುದ್ಧ
1962ರಲ್ಲಿ ಭಾರತ ಹಾಗೂ ಚೀನಾ ಯುದ್ದ ನಡೆದಿತ್ತು. ಅಸ್ಸಾಂ ಗಡಿ ಪ್ರದೇಶದಲ್ಲಿ ಚೀನಾ ಯೋಧರು ಅತಿ ಕ್ರಮಣ ಮಾಡಿದ್ದರು. ಪ್ರಧಾನಿ ಜವಾಹರ್ ಲಾಲ್ ನೆಹರು ತಕ್ಕ ತಿರುಗೇಟು ನೀಡಲು ಸೇನೆಗೆ ಸೂಚಿಸಿದ್ದರು. ಆದರೆ ಆಧುನಿಕ ಶಸ್ತಾಸ್ತ್ರವಿಲ್ಲದ ಭಾರತೀಯ ಸೇನೆ ಹೋರಾಡಿತ್ತು. ತೀವ್ರ ಹಿನ್ನಡೆ ಅನುಭವಿಸಿದ ಭಾರತ ಸೋಲೋಪ್ಪಿಕೊಂಡಿತ್ತು.