Asianet Suvarna News Asianet Suvarna News

ಗಡಿ ತಿಕ್ಕಾಟ: ಭಾರತ, ಚೀನಾ ಮಾತುಕತೆ!

ಗಡಿ ತಿಕ್ಕಾಟ: ಭಾರತ, ಚೀನಾ ಇಂದು ಮಾತುಕತೆ| ಲೆಫ್ಟಿನೆಂಟ್‌ ಜನರಲ್‌ ಮಟ್ಟದಲ್ಲಿ ಚರ್ಚೆ|  ಎರಡೂ ದೇಶಗಳ ತಿಕ್ಕಾಟಕ್ಕೆ ತೆರೆ ಬೀಳುತ್ತಾ?

India and China Top Military Level Talks Amid Stand-Off In Ladakh
Author
Bangalore, First Published Jun 6, 2020, 12:51 PM IST

ಬೀಜಿಂಗ್‌/ನವದೆಹಲಿ(ಜೂ.06): ಲಡಾಖ್‌ ಹಾಗೂ ಸಿಕ್ಕಿಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಲೆಫ್ಟಿನೆಂಟ್‌ ಜನರಲ್‌ ಮಟ್ಟದ ಮಹತ್ವದ ಮಾತುಕತೆ ಶನಿವಾರ ನಡೆಯಲಿದೆ.

ಲೇಹ್‌ನಲ್ಲಿನ 14 ಕೋರ್‌ ಪಡೆಯ ಮುಖ್ಯಸ್ಥ ಲೆ| ಜ| ಹರಿಂದರ್‌ ಸಿಂಗ್‌ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಾತುಕತೆಯು ಪೂರ್ವ ಲಡಾಖ್‌ನ ಚುಶೂಲ್‌ ವಲಯದ ಮಾಲ್ಡೋದಲ್ಲಿ ಬೆಳಗ್ಗೆ 8 ಗಂಟೆಗೆ ಮಾತುಕತೆ ನಿಗದಿಯಾಗಿದೆ.

ಪಾಂಗಾಂಗ್‌ ತ್ಸೋ, ಗಲ್ವಾನ್‌ ಕಣಿವೆ ಹಾಗೂ ಡೆಮ್ಚೋಕ್‌ ಎಂಬ ಲಡಾಖ್‌ನ 3 ಭಾಗಗಳಲ್ಲಿ ಕಳೆದ ತಿಂಗಳು ಭಾರತ ಹಾಗೂ ಚೀನಾ ಪಡೆಗಳು ಚಕಮಕಿ ನಡೆಸಿದ್ದವು. ಈ ವಿಷಯದ ಬಗ್ಗೆ ಮಾತುಕತೆಯಲ್ಲಿ ಪ್ರಮುಖ ಚರ್ಚೆ ನಡೆಯಲಿದ್ದು, ಕಾದಾಟಕ್ಕೆ ಅಂತ್ಯ ಹಾಡುವ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಭಾರತವು ಯಥಾಸ್ಥಿತಿ ಮುಂದುವರಿಸಬೇಕು ಎಂದು ಚೀನಾ ಮುಂದೆ ಪ್ರಸ್ತಾಪ ಇರಿಸುವ ಉದ್ದೇಶ ಹೊಂದಿದೆ. ಈ ಮುಂಚೆ 10 ಸುತ್ತಿನ ಮಾತುಕತೆಗಳು ನಡೆದಿದ್ದರೂ ಫಲ ನೀಡಿಲ್ಲ.

ಈ ನಡುವೆ, ಶುಕ್ರವಾರ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ವಕ್ತಾರ ಗೆಂಗ್‌ ಶುವಾಂಗ್‌, ಸೂಕ್ತ ರೀತಿಯಲ್ಲಿ ಗಡಿ ವಿಚಾರ ಬಗೆಹರಿಸಿಕೊಳ್ಳಲು ಚೀನಾ ಇಚ್ಛಿಸುತ್ತದೆ ಎಂದಿದ್ದಾರೆ.

ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಲು ಉಭಯ ದೇಶಗಳ ಪಡೆಗಳು ಗಡಿಯಿಂದ ಶುಕ್ರವಾರವೇ ದೂರ ಸರಿದಿವೆ.

Follow Us:
Download App:
  • android
  • ios