ವೇಲ್ಸ್‌ನ ಬ್ರೇಕಾನ್‌ನಲ್ಲಿ ನಡೆದ ಸೇನಾ ಅಭ್ಯಾಸ ಶಿಬಿರ ಭಾರತೀಯ ಸೇನಾ ತಂಡಕ್ಕೆ ಚಿನ್ನದ ಪದಕ ಗೂರ್ಖಾ ರೈಫಲ್ಸ್(ಫ್ರಂಟಿಯರ್ ಫೋರ್ಸ್) ತಂಡಕ್ಕೆ ಬಹುಮಾನ

ನವದೆಹಲಿ(ಅ.16): ಭಾರತೀಯ ಸೇನೆಗೆ ಮತ್ತೊಂದು ಗರಿ ಸೇರಿಕೊಂಡಿದೆ. ವೇಲ್ಸ್‌ನ ಬ್ರೆಕಾನ್‌ನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ(Cambrian Patrol Exercise) ಭಾರತೀಯ ಸೇನಾ(Indian Army) ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಭಾರತೀಯ ಸೇನೆ ಪ್ರತಿನಿಧಿಸಿದ 4/5 ಗೂರ್ಖಾ ರೈಫಲ್ಸ್(ಫ್ರಂಟಿಯರ್ ಫೋರ್ಸ್)ತಂಡ ಚಿನ್ನದ ಪದಕ ಗೆದ್ದುಕೊಂಡಿದೆ.

ಇಂಡೋ ಯುಎಸ್ ಜಂಟಿ ಯುದ್ಧ ಅಭ್ಯಾಸ; ಅಮೆರಿಕ ನೆಲದಲ್ಲಿ 350 ಭಾರತೀಯ ಯೋಧರಿಗೆ ತರಬೇತಿ!

ಯುಕೆ ಸೈನ್ಯ ಅಕ್ಟೋಬರ್ 13 ರಿಂದ 15ರ ವರೆಗೆ ಅಭ್ಯಾಸ ಶಿಬಿರ ಆಯೋಜಿಸಿತ್ತು. ತಂಡದ ಮನೋಭಾವ, ಸಹಿಷ್ಣುತೆ, ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಒಟ್ಟು 96 ತಂಡಗಳು ಈ ಅಭ್ಯಾಸ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಇದರಲ್ಲಿ ವಿಶ್ವದಾದ್ಯಂತದ ವಿಶೇಷ ಪಡೆಗಳು ಮತ್ತು ಪ್ರತಿಷ್ಠಿತ ರೆಜಿಮೆಂಟ್‌ಗಳನ್ನು ಪ್ರತಿನಿಧಿಸುವ 17 ಅಂತರಾಷ್ಟ್ರೀಯ ತಂಡಗಳು ಸೇರಿದ್ದವು.

200 ವರ್ಷ ಪುರಾ​ತನ OFB ವಿಸ​ರ್ಜ​ನೆ: ಸ್ವಾವಲಂಬಿ ಶಸ್ತ್ರಾಸ್ತ್ರ ಕ್ರಾಂತಿಗೆ ಮುನ್ನುಡಿ!

ಹಲವು ಸ್ತರಗಳಲ್ಲಿ ಈ ಅಭ್ಯಾಸ ಶಿಬಿರ ಆಯೋಜಿಸಲಾಗಿತ್ತು. ಅತ್ಯಂತ ಕಠಿಣ ಸಂದರ್ಭದಲ್ಲಿ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಈ ಸ್ಪರ್ಧೆಯಲ್ಲಿ ಭಾರತೀಯ ಸೇನಾ ತಂಡ(Gorkha Rifles) ಚಿನ್ನದ ಪದಕ ಗೆದ್ದುಕೊಂಡಿದೆ. ಕಠಿಣ ಭೂಪ್ರದೇಶ, ಶೀತ ವಾತಾವರಣದಲ್ಲಿ ಯೋಧರ ಮೌಲ್ಯಮಾಪನ ಮಾಡಲಾಗಿತ್ತು. ಯುದ್ಧದ ಸಂದರ್ಭದಲ್ಲಿ ಯೋಧರ ಪ್ರತಿಕ್ರಿಯೆ ಪರೀಕ್ಷಿಸಲು, ಹಾಗೂ ಸಂಕೀರ್ಣವಾದ ಹಾಗೂ ನೈಜ ಸನ್ನಿವೇಶಗಳ ಜೊತೆ ಹಲವು ಸವಾಲುಗಳನ್ನು ನೀಡಲಾಗಿತ್ತು

ಸೇನೆಯಲ್ಲಿ NCCಗೆ ಅವಕಾಶ: ಆಯ್ಕೆಯಾದವರಿಗೆ 1.77 ಲಕ್ಷ ರೂ.ವರೆಗೆ ಸಂಬಳ

ಈ ಸವಾಲು ಹಾಗೂ ಪರೀಕ್ಷೆಯನ್ನು ಭಾರತೀಯ ಸೇನಾ ತಂಡ ಯಶಸ್ವಿಯಾಗಿ ಎದುರಿಸಿದೆ. ಈ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದೆ. ಇಷ್ಟೇ ಅಲ್ಲ ಮೌಲ್ಯಮಾಪಕರಿಂದ ಮೆಚ್ಚುಗೆ ಸುರಿಮಳೆ ಪಡೆದುಕೊಂಡಿದೆ. ಬ್ರಿಟಿಷ್ ಸೇನೆಯ ಜನರಲ್ ಸ್ಟಾಫ್ ಸರ್ ಮಾರ್ಕ್ ಕಾರ್ಲೆಟನ್ ಸ್ಮಿತ್ ಭಾರತೀಯ ಸೇನಾ ತಂಡಕ್ಕೆ ಚಿನ್ನದ ಪದಕ ವಿತರಿಸಿದರು. ಅಕ್ಟೋಬರ್ 15 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಸಶಸ್ತ್ರ ಪಡೆಗಳಲ್ಲಿ ಸ್ತ್ರೀಯರಿಗೆ ಕಾಯಂ ಹುದ್ದೆ: ಕೇಂದ್ರ ಐತಿಹಾಸಿಕ ನಿರ್ಧಾರ!