ಪಾಕ್ ಉಗ್ರರ ಬೇಟೆಗೆ 500 ಪ್ಯಾರಾ ಕಮಾಂಡೋ ನಿಯೋಜನೆ- ಅಕ್ರಮವಾಗಿ ನುಸುಳಿರುವ ಉಗ್ರರ ಎದುರಿಸಲು ದಿಟ್ಟ ಹೆಜ್ಜೆ
ಸೇನೆ ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಿಸಲು ರೊಮಿಯೋ, ಡೆಲ್ಟಾ ಸೇರಿದಂತೆ ರಾಷ್ಟ್ರಿಯ ರೈಫಲ್ಸ್ ನ ಎರಡು ಪಡೆಗಳು ಹಾಗೂ ಇತರ ಭಯೋತ್ಪಾದಕ ಪಡೆಗಳನ್ನು ಹೊಂದಿದೆ.
ನವದೆಹಲಿ: ಜಮ್ಮು ವಲಯದಲ್ಲಿ ಕಳೆದ ಕೆಲ ತಿಂಗಳಿನಿಂದ ಉಗ್ರ ಚಟುವಟಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವ ನಡುವೆಯೇ, ಭಾರೀ ಪ್ರಮಾಣದಲ್ಲಿ ತರಬೇತಿ ಪಡೆದ 50-55 ಪಾಕಿಸ್ತಾನ ಮೂಲಕ ಉಗ್ರರು ಭಾರತ ಪ್ರವೇಶಿಸಿರಬಹುದು ಎಂಬ ಮಾಹಿತಿ ಭಾರತೀಯ ಸೇನೆಗೆ ಲಭ್ಯವಾಗಿದೆ. ಅಕ್ರಮವಾಗಿ ಗಡಿ ನುಸುಳಿ ಬಂದಿರುವ ಈ ಉಗ್ರರು ಜಮ್ಮವಿನ ಅರಣ್ಯ ಪ್ರದೇಶದಲ್ಲಿ ಅಡಗಿದ್ದು, ಸ್ಥಳೀಯರ ನೆರವಿನೊಂದಿಗೆ ಕಣಿವೆ ರಾಜ್ಯದಲ್ಲಿ ಮತ್ತೆ ಉಗ್ರ ಚಟುವಟಿಕೆಗೆ ಉತ್ತೇಜನ ನೀಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರರನ್ನು ಸದೆಬಡೆಯಲು ಭಾರತೀಯ ಸೇನೆ 500 ಪ್ಯಾರಾ ಕಮಾಂಡರ್‌ಗಳನ್ನು ನೇಮಿಸಿದೆ. ಇದರ ಜೊತೆಗೆ ಗುಪ್ತಚರ ಇಲಾಖೆಯು ಜಮ್ಮುವಿನಲ್ಲಿ ಕಣ್ಗಾವಲು ತೀವ್ರಗೊಳಿಸಿದ್ದು, ಭಯೋತ್ಪಾದಕರಿಗೆ ಸಹಾಯವನ್ನು ಮಾಡುವ ಭೂಗತ ಕಾರ್ಮಿಕರು, ಮೂಲಭೂತ ಸೌಕರ್ಯಗಳನ್ನು ಒದಗಿಸುವವರ ಪತ್ತೆ ಕಾರ್ಯದಲ್ಲಿ ನಿರತವಾಗಿದೆ.
ಪಾಕಿಸ್ತಾನದ ಆಕ್ರಮಣಕ್ಕೆ ಪ್ರತ್ಯುತ್ತರವನ್ನು ನೀಡಲು ಸೇನೆ ಈಗಾಗಲೇ 3,500- 4000 ಹೆಚ್ಚುವರಿ ಸೈನಿಕರನ್ನು ಈ ಪ್ರದೇಶಕ್ಕೆ ಕಳುಹಿಸಿದೆ. ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆಹಚ್ಚಲು,ಅದನ್ನು ನಾಶಗೊಳಿಸಲು ಕಾರ್ಯತಂತ್ರಗಳನ್ನು ರೂಪಿಸಿದೆ. ಸೇನೆ ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಿಸಲು ರೊಮಿಯೋ, ಡೆಲ್ಟಾ ಸೇರಿದಂತೆ ರಾಷ್ಟ್ರಿಯ ರೈಫಲ್ಸ್ ನ ಎರಡು ಪಡೆಗಳು ಹಾಗೂ ಇತರ ಭಯೋತ್ಪಾದಕ ಪಡೆಗಳನ್ನು ಹೊಂದಿದೆ.
ಜಮ್ಮುಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ: ಕ್ಯಾಪ್ಟನ್ ಸೇರಿ ಐವರು ಯೋಧರು ಹುತಾತ್ಮ
ಗಸ್ತು ತಿರುಗುವ ವೇಳೆ ಉಷ್ಣಅಲೆಗೆ ಸಿಕ್ಕಿ ಸಾವು
ಅಹಮದಾಬಾದ್: ಉತ್ತರ ಭಾರತದಲ್ಲಿ ಮುಂಗಾರು ಪ್ರವೇಶವಾದರೂ ಬಿಸಿಲಿನ ತಾಪ ಕಡಿಮೆಯಾಗುತ್ತಿಲ್ಲ. ಗುಜರಾತಿನ ಪಾಕಿಸ್ತಾನ ಗಡಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್ ಅಧಿಕಾರಿ ಹಾಗೂ ಹೆಡ್ ಕಾನ್‌ಸ್ಟೇಬಲ್ ತೀವ್ರ ಉಷ್ಣಹವೆ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಸಹಾಯಕ ಕಮಾಂಡೆಂಟ್ ವಿಶ್ವ ದೇವು ಮತ್ತು ಹೆಡ್ ಕಾನ್‌ಸ್ಟೇಬಲ್ ದಯಾಲ್ ರಾಮ್ ಮೃತಪಟ್ಟವರು.
ಇಲ್ಲಿಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಮುಂಭಾಗದ ಹರಾಮಿ ನಾಲೆ ಪ್ರದೇಶದಲ್ಲಿ ಗಸ್ತು ತಿರುತ್ತಿದ್ದ ವೇಳೆ ವಿಶ್ವ ದೇವು ಹಾಗೂ ದಯಾಲ್ ರಾಮ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅವರನ್ನು ಭುಜ್‌ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಆದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹರಾಮಿ ನಾಲೆ ಪ್ರದೇಶಗಳಲ್ಲಿ ಪ್ರಸ್ತುತ ತಾಪಮಾನವು 34-36 ಡಿಗ್ರಿಗಳಷ್ಟಿದ್ದು, ಆದ್ರತೆ ಮಟ್ಟವು ಶೇ.80-82 ರಷ್ಟಿದೆ.
ಜಮ್ಮು-ಕಾಶ್ಮೀರದ ದೋಡಾದಲ್ಲಿ ಉಗ್ರರ ಅಟ್ಟಹಾಸ! ಹುತಾತ್ಮ ಯೋಧರಿಗೆ ರಾಜನಾಥ್ ಸಿಂಗ್ ಶ್ರದ್ದಾಂಜಲಿ..!