ಮತ್ತೆ ಪಾಕ್ ಮೇಲೆ ಭಾರತದಿಂದ ಸರ್ಜಿಕಲ್ ಸ್ಟ್ರೈಕ್ ಸಂಚಲನ, ರಕ್ಷಣಾ ಇಲಾಖೆ ಸ್ಪಷ್ಟನೆ ಏನು?
ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಮತ್ತೊಮ್ಮೆ ಸರ್ಜಿಕಲ್ ದಾಳಿ ನಡೆಸಿದೆ ಎಂದು ಹಿಂದಿ ದೈನಿಕವೊಂದು ವರದಿ ಮಾಡಿದ್ದು, ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಆದರೆ ಇದನ್ನು ರಕ್ಷಣಾ ಇಲಾಖೆ ಅಲ್ಲಗಳೆದಿದೆ. ಉಗ್ರರ ಮೇಲೆ ದಾಳಿ ನಡೆಸಿದ್ದೇವೆ ಎಂದಿದೆ.
ನವದೆಹಲಿ (ಆ.23): ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಮತ್ತೊಮ್ಮೆ ಸರ್ಜಿಕಲ್ ದಾಳಿ ನಡೆಸಿದೆ ಎಂದು ಹಿಂದಿ ದೈನಿಕವೊಂದು ವರದಿ ಮಾಡಿದ್ದು, ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಆದರೆ ಇದನ್ನು ಅಲ್ಲಗಳೆದಿರುವ ರಕ್ಷಣಾ ಇಲಾಖೆ, ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಉಗ್ರರ ಮೇಲೆ ದಾಳಿ ನಡೆಸಿದ್ದು ನಿಜ. ಆದರೆ ಇದು ಸರ್ಜಿಕಲ್ ದಾಳಿಯಲ್ಲ ಎಂದು ಸ್ಪಷ್ಟನೆ ನೀಡಿದೆ.
ಮೂಲಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದ್ದ ಹಿಂದಿ ದೈನಿಕ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಶನಿವಾರ ರಾತ್ರಿ ಸರ್ಜಿಕಲ್ ದಾಳಿಯನ್ನು ನಡೆಸಿದೆ. ಗಡಿ ನಿಯಂತ್ರಣ ರೇಖೆಯಿಂದ 2.5 ಕಿ.ಮೀ. ಒಳಕ್ಕೆ ಹೋಗಿ ಉಗ್ರರ ಲಾಂಚ್ ಪ್ಯಾಡ್‌ಗಳನ್ನು ನಾಶಗೊಳಿಸಿದೆ. ಈ ವೇಳೆ 8 ಮಂದಿ ಉಗ್ರರನ್ನು ಕೊಲ್ಲಲಾಗಿದೆ. ಭಾರತೀಯ ಸೇನೆಯ ಎಲ್ಲ ಯೋಧರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿಸಿತ್ತು.
ರತನ್ ಟಾಟಾಗೆ ಮಾಯಾ ಟಾಟಾ ಉತ್ತರಾಧಿಕಾರಿ?, ಟಾಟಾ ಸಮೂಹಕ್ಕೆ ಮಹಿಳಾ ಅಧಿಪತ್ಯ
ಸರ್ಜಿಕಲ್ ದಾಳಿ ಅಲ್ಲ: ಈ ವರದಿಯ ಕುರಿತು ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದೆ. ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದೊಳಕ್ಕೆ ನುಗ್ಗಲು ಇಬ್ಬರು ಉಗ್ರರು ಯತ್ನಿಸಿದ್ದರು. ಪ್ರತಿಕೂಲ ಹವಾಮಾನ, ದಟ್ಟಮಂಜಿನ ಲಾಭ ಪಡೆದು ಬಾಲಾಕೋಟ್ ವಲಯದ ಹಮೀರ್‌ಪುರ ಪ್ರದೇಶದ ಮೂಲಕ ನುಗ್ಗಲು ಯತ್ನಿಸಿದ್ದರು. ಹಲವು ಗುಪ್ತಚರ ಸಂಸ್ಥೆಗಳಿಂದ ಈ ಬಗ್ಗೆ ಮಾಹಿತಿ ಬಂದಿತ್ತು. ಉಗ್ರರ ಆಗಮನವಾಗುತ್ತಿದ್ದಂತೆ ದಾಳಿ ನಡೆಸಲಾಯಿತು. ಅವರು ಓಡಿ ಹೋದರು. ಆ ವೇಳೆ ಒಬ್ಬನಿಗೆ ಗುಂಡೇಟು ತಗುಲಿ ಬಿದ್ದ. ಪ್ರತಿಕೂಲ ಹವಾಮಾನ ಪರಿಸ್ಥಿತಿ ಸುಧಾರಣೆಯಾದ ಬಳಿಕ ಹೋಗಿ ನೋಡಿದಾಗ ಶಸ್ತ್ರಾಸ್ತ್ರ, ಪಾಕ್ ಮೂಲದ ಔಷಧಗಳು ಸಿಕ್ಕವು. ಉಗ್ರರಿಗೆ ಅವರ ಕಡೆಯಿಂದಲೇ ಗುಂಡೇಟು ಬಿದ್ದಿತ್ತು. ಆದರೂ ಅವರು ತಮ್ಮ ಸ್ವಸ್ಥಾನಕ್ಕೆ ತೆರಳಿದರು. ಬಳಿಕ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೆನರಿಕ್ ಮೆಡಿಸಿನ್ ಕಡ್ಡಾಯಕ್ಕೆ ವೈದ್ಯರ ವಿರೋಧ, ಗುಣಮಟ್ಟವಿಲ್ಲದ ಔಷಧ
ಮುಂಬೈ ದಾಳಿ ಉಗ್ರ ರಾಣಾನ ಹಸ್ತಾಂತರಿಸಲು ಅಮೆರಿಕ ಕೋರ್ಟ್ ತಡೆ
ವಾಷಿಂಗ್ಟನ್: 2008ರಲ್ಲಿ ಮುಂಬೈಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಮೂಲದ ಕೆನಡಾದ ಉದ್ಯಮಿ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಸ್ತಾಂತರಕ್ಕೆ ತಡೆ ಕೋರಿ ಅಮೆರಿಕದ ಉನ್ನತ ನ್ಯಾಯಾಲಯಕ್ಕೆ ರಾಣಾ ಮೇಲ್ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮೇಲ್ಮನವಿ ಅರ್ಜಿ ಇತ್ಯರ್ಥವಾಗುವ ತನಕ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ತಡೆ ನೀಡಲಾಗಿದೆ ಎಂದು ಕ್ಯಾಲಿಫೋರ್ನಿಯಾದ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಈ ಮೂಲಕ ಭಾರತಕ್ಕೆ ರಾಣಾನನ್ನು ಹಸ್ತಾಣತರಿಸುವ ಪ್ರಕ್ರಿಯೆಗೆ ಯಾವುದೇ ತಡೆ ನೀಡಬಾರದು ಎಂದು ಅಮೆರಿಕ ಸರ್ಕಾರದ ಶಿಫಾರಸನ್ನು ರದ್ದುಗೊಳಿಸಿದೆ.