Asianet Suvarna News Asianet Suvarna News

ಪೊಲೀಸರ ಕಿರುಕುಳ ಬೆನ್ನಲ್ಲೇ ಹುತಾತ್ಮ ಯೋಧನ ಕುಟುಂಬದ ನೆರವಿಗೆ ಧಾವಿಸಿದ ಭಾರತೀಯ ಸೇನೆ!

ಹುತಾತ್ಮ ಯೋಧನ ಸ್ಮಾರಕ ನಿರ್ಮಾಣಕ್ಕೆ ಮುಂದಾದ ತಂದೆಯನ್ನು ಧರಧರನೆ ಬಿಹಾರ ಪೊಲೀಸ್ ಠಾಣೆಗೆ ಎಳೆದೊಯ್ದು ಕಿರುಕುಳ ನೀಡಿದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಯೋಧನ ಕುಟುಂಬಕ್ಕೆ ನೆರವು ನೀಡಲು ಭಾರತೀಯ ಸೇನೆ ಧಾವಿಸಿದೆ.

Indian Army come forward to assist Bihar family fighting for Galwan Valley Braveheart memorial ckm
Author
First Published Feb 28, 2023, 4:37 PM IST

ಬಿಹಾರ(ಫೆ.28) ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮನಾದ ಯೋಧನ ಸ್ಮಾರಕ ನಿರ್ಮಾಣ ಬಿಹಾರದ ವೈಶಾಲಿ ಜಿಲ್ಲೆಯ ಜಂಧಾಹ ಬ್ಲಾಕ್‌ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಹುತಾತ್ಮ ಯೋಧನ ತಂದೆ ವಿರುದ್ಧ ದೂರು ದಾಖಲಾಗಿತ್ತು. ಇಷ್ಟೇ ಅಲ್ಲ ಪೊಲೀಸರು ಹುತಾತ್ಮ ಯೋಧನ ತಂದೆಯನ್ನು ಮನೆಯೊಳಗಿನಿಂದ ಧರಧರನೆ ಪೊಲೀಸ್ ಠಾಣೆಗೆ ಎಳೆದೊಯ್ದು ಕಿರುಕುಳ ನೀಡಿದ್ದರು. ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಘಟನೆ ಮಾಹಿತಿ ಹೊರಬೀಳುತ್ತಿದ್ದ ಏಷ್ಯಾನೆಟನ್ ನ್ಯೂಸ್ ವರದಿ ಪ್ರಕಟಿಸಿತ್ತು. ಇದೀಗ ಭಾರತೀಯ ಸೇನೆ ಹುತಾತ್ಮ ಯೋಧನ ಕುಟುಂಬದ ನೆರವಿಗೆ ಧಾವಿಸಿದೆ. ಗಲ್ವಾನ್ ಘರ್ಷಣೆಯಲ್ಲಿ ಮಡಿದ ಯೋಧನ ಸ್ಮಾರಕವನ್ನು ಭಾರತೀಯ ಸೇನೆ ನಿರ್ಮಿಸಿಕೊಡುವುದಾಗಿ ಹೇಳಿದೆ. ಈ ವಿಚಾರವಾಗಿ ಪೊಲೀಸರು ಹಾಗೂ ಇತರರು ಯೋಧನ ಕುಟುಂಬಕ್ಕೆ ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿದೆ.

ರಾಜ್‌ಕಪೂರ್ ಸಿಂಗ್ ಪುತ್ರ ಜೈಕಿಶೋರ್ ಸಿಂಗ್ 2020ರಲ್ಲಿ ಚೀನಾ ವಿರುದ್ಧ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾಗಿದ್ದರು. ಹುತಾತ್ಮ ಯೋಧನ ಸ್ಮಾರಕ ನಿರ್ಮಾಣಕ್ಕೆ ಸ್ಥಳೀಯ ಜಿಲ್ಲಾಡಳಿತ, ರಾಜಕೀಯ ನಾಯಕರು ಆಸಕ್ತಿ ತೋರಲಿಲ್ಲ. ಹೀಗಾಗಿ ಗ್ರಾಮಸ್ಥರು ಹಾಗೂ ರಾಜ್ ಕಪೂರ್ ಸಿಂಗ್ ತಾವೇ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಕುರಿತು ಪಂಚಾಯತ್ ಅಧಿಕಾರಿಗಳು, ನೋಡಲ್ ಅಧಿಕಾರಗಳ ಜೊತೆ ಸಭೆ ನಡೆಸಿ ರಾಜ್‌ಕಪೂರ್ ಸಿಂಗ್ ಮನೆಗೆ ತಾಗಿಕೊಂಡೆ ಇರುವ ಸರ್ಕಾರಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಲಾಯಿತು.ಆದರೆ ಈ ಸರ್ಕಾರಿ ಜಾಗದ ಹಿಂಭಾಗದಲ್ಲಿ ಹರಿನಾಥ್ ರಾಮ್ ಅನ್ನೋವವರ ಮನೆ ಹಾಗೂ ಜಾಗವಿದೆ. 

ಮನೆಗೆ ನುಗ್ಗಿ ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮನಾದ ಯೋಧನ ತಂದೆಯನ್ನು ಧರಧರನೆ ಎಳೆದೊಯ್ದ ಪೊಲೀಸ್!

ಸ್ಮಾರಕ ನಿರ್ಮಾಣ ಕಾರ್ಯಗಳು ಆರಂಭಗೊಂಡಿತ್ತು. ಪುತ್ಥಳಿ ಇಡಲಾಯಿತು. ಈ ವೇಳೆ ರಾಜ್‌ಕಪೂರ್ ಸಿಂಗ್ ವಿರುದ್ಧ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಅಡಿಯಲ್ಲಿ ಹರಿನಾಥ್ ರಾಮ್ ದೂರು ನೀಡಿದ್ದರು. ತಮ್ಮ ಸ್ಥಳದ ಮುಂಭಾಗದಲ್ಲಿ ಸ್ಮಾರಕ ಬೇಡ ಅನ್ನೋ ವಾದ ಮುಂದಿಟ್ಟಿದ್ದರು. ಪಂಚಾಯತ್ ಅಧಿಕಾರಿಗಳ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದ ಹರಿನಾಥ್ ರಾಮ್ ಇದೀಗ ಉಲ್ಟಾ ಹೊಡೆದಿದ್ದರು. ಹರಿನಾಥ್ ರಾಮ್ ತಮ್ಮ ಪ್ರಭಾವ ಬಳಲಿ ಹುತಾತ್ಮ ಯೋಧನ ಕುಟುಂಬಕ್ಕೆ ಕಿರುಕುಳ ನೀಡಿದ್ದರು. ಈ ಘಟನೆ ವರದಿಯಾಗುತ್ತಿದ್ದಂತೆ ಭಾರತೀಯ ಸೇನೆಯ ಅಧಿಕಾರಿಗಳು ರಾಜ್ ಕಪೂರ್ ಸಿಂಗ್ ಮನೆಗೆ ಭೇಟಿ ನೀಡಿದ್ದಾರೆ.

ಹುತಾತ್ಮ ಯೋಧ ಜೈಕಿಶೋರ್ ಸಿಂಗ್ ಸ್ಮಾರಕ ನಿರ್ಮಾಣವನ್ನು ಭಾರತೀಯ ಸೇನೆ ಮಾಡಲಿದೆ. ಗಡಿಯಲ್ಲಿ ರಕ್ಷಣೆ ಕಾಯುವ ಯೋಧನ ಕುಟುಂಬಕ್ಕೆ ರಾಜಕೀಯ ಕಾರಣಕ್ಕೆ ಕಿರುಕುಳ ನೀಡುವುಜು ಸರಿಯಲ್ಲ. ಯೋಧ ಹಾಗೂ ಆತನ ಕುಟುಂಬದ ತ್ಯಾಗವನ್ನು ಪರಿಗಣಿಸಬೇಕು ಎಂದು ಭಾರತೀಯ ಸೇನೆ ಹೇಳಿದೆ. ಅರ್ಧಕ್ಕೆ ನಿಂತಿರುವ ಪುತ್ರ ಸ್ಮಾರಕ ನಿರ್ಮಾಣ ಕಾರ್ಯವನ್ನು ಭಾರತೀಯ ಸೇನೆ ಮಾಡಲಿದೆ. ಇದೇ ವೇಳೆ ಸ್ಮಾರಕ ನಿರ್ಮಾಣಕ ವಿಚಾರದಲ್ಲಿ ಯೋಧನ ಕುಟುಂಬಕ್ಕೆ ಕಿರುಕುಳ ನೀಡದಂತೆ ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.

ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಸಲ್ಯೂಟ್, ಟರ್ಕಿ ಕಾರ್ಯಾಚರಣೆ ಮುಗಿಸಿ ತವರಿಗೆ ಬಂದ NDRF ತಂಡಕ್ಕೆ ಮೋದಿ ಪ್ರಶಂಸೆ

ರಾಜ್‌ಕಪೂರ್ ಸಿಂಗ್ ಮತ್ತೋರ್ವ ಪುತ್ರ ನಂದಕಿಶೋರ್ ಸಿಂಗ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ತಂದೆಗೆ ಪೊಲೀಸರು ಕಿರುಕುಳ ನೀಡಿರುವ ವಿಚಾರಕ್ಕೆ ಏಷ್ಯಾನೆಟ್ ಸುವರ್ಣನ್ಯೂಸ್ ಸಹೋದರ ಸಂಸ್ಥೆ ಏಷ್ಯಾನೆಟ್ ನ್ಯೂಸೇಬಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.ಈ ಘಟನೆ ಆಘಾತ ತಂದಿದೆ. ನನ್ನ ಸೋಹದರನ ಸ್ಮಾರಕ ನಿರ್ಮಾಣ ಕಾರ್ಯ ಸ್ಥಳೀಯ ಜಿಲ್ಲಾಡಳಿತ ಮಾಡಬೇಕು.ಆದರೆ ಯಾರೂ ಕಿವಿಗೊಡುತ್ತಿಲ್ಲ. ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ತಂದೆ ಸ್ಮಾರಕ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಈ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ. ನಾವು ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಿದ್ದೇವೆ. ಗಡಿಯ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ನಾವು ಅದೆಂತಾ ಕಠಿಣ ಪರಿಸ್ಥಿತಿ ಎದುರಿಸಿ ನಮ್ಮ ಕುಟುಂಬ ನೋಡಿಕೊಳ್ಳುತ್ತಿದ್ದೇವೆ. ಇದೀಗ ಕುಟುಂಬಕ್ಕೂ ರಕ್ಷಣೆ ಇಲ್ಲದಾಗಿದೆ ಎಂದಿದ್ದರು.

Follow Us:
Download App:
  • android
  • ios