ಜಮ್ಮು ಕಾಶ್ಮೀರ(ಜೂ.12): ಕೊರೋನಾ ವೈರಸ್‌ ಹಾಗೂ ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನ ನಲುಗಿಲ ಹೋಗಿದೆ. ಕೊರೋನಾ ವಿರುದ್ಧ ಹೋರಾಡುವುದನ್ನು ಬಿಟ್ಟು, ಪಾಕಿಸ್ತಾನ ಗಡಿಯಲ್ಲಿ ಭಾರತದ ಜೊತೆ ಕಾಲು ಕೆರೆದು ನಿಂತಿದೆ. ಜಮ್ಮು ಕಾಶ್ಮೀರದ ರಜೌರಿ ವಲಯದಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.  ರಾತ್ರಿ 10 ಗಂಟೆಯಿಂದ 11 ಗಂಟೆ ವರೆಗೆ ಪಾಕಿಸ್ತಾನ ಸೇನೆ ಭಾರತದ ಗಡಿಯೊಳಕ್ಕೆ ಶೆಲ್, ಗುಂಡಿನ ಮೂಲಕ ದಾಳಿ ನಡೆಸಿದೆ. 

ಶೋಪಿಯಾನ್ ಎನ್‌ಕೌಂಟರ್; 24 ಗಂಟೆಯಲ್ಲಿ 9 ಉಗ್ರರ ಹೊಡೆದುರಳಿಸಿದ ಭಾರತೀಯ ಸೇನೆ

ಪಾಕಿಸ್ತಾನ ದಿಢೀರ್ ಗಡಿ ನಿಯಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಕಾರಣ ಒರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾರೆ. ಇದರಿಂದ ಕೆರಳಿದ ಭಾರತೀಯ ಸೇನೆ, ಗಡಿ ಭಾಗಗಳಾದ ರಜೌರಿ, ಪೂಂಚ್, ಕಥುವಾ, ಕೆರಿ, ಮಂಜಾಕೋಟ್, ಬಾಲಾಕೋಟ್ ಹಾಗೂ ಕರೋಲ್ ವಲಯದಲ್ಲಿ ತಕ್ಕ ತಿರುಗೇಟು ನೀಡಿದೆ. ಭಾರತೀಯ ಸೇನೆ, ಈ ಗಡಿ ಪ್ರದೇಶದಲ್ಲಿ ನಿರ್ಮಿಸಿದ್ದ ಪಾಕಿಸ್ತಾನ ಸೇನಾ ಪೋಸ್ಟ್‌ಗಳನ್ನು ಧ್ವಂಸ ಮಾಡಿದೆ. 

ನದಿಗೆ ಹಾರಿ ಗರ್ಭಿಣಿ ಜಿಂಕೆ ರಕ್ಷಿಸಿದ ಭಾರತೀಯ ಸೇನಾ ಯೋಧರು!

ಪಾಕಿಸ್ತಾನ ಸೇನೆ, ಭಾರತೀಯ ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದನ್ನು ಯಾವತ್ತೂ ಭಾರತ ಸಹಿಸುವುದಿಲ್ಲ. ಈ ಹಿಂದೆ ಹಲವು ಬಾರಿ ಗಡಿ ನಿಯಮ ಉಲ್ಲಂಘಿಸಿ ಉದ್ದಟತನ ತೋರಿರುವ ಪಾಕಿಸ್ತಾನ ಸೇನೆಗೆ ಸರಿಯಾದ ಉತ್ತರ ನೀಡಲಾಗಿದೆ. ಇದೀಗ ಗಡಿ ನಿಯಂತ್ರಣ ರೇಖೆ ಬಳಿ ಇರುವ ಪಾಕಿಸ್ತಾನ ಸೇನಾ ಪೋಸ್ಟ್‌ಗಳನ್ನು ಧ್ವಂಸ ಮಾಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಪಾಕಿಸ್ತಾನ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲ ಶಾಂತಿ ಕದಡುವ ಯತ್ನಕ್ಕೆ ಪಾಕಿಸ್ತಾನ ಕೈ ಹಾಕಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"