Asianet Suvarna News Asianet Suvarna News

India @75: ದೇಶದಲ್ಲಿ ಒಂದು ಸ್ಥಳದಲ್ಲಿ ಮಾತ್ರ ಸಿದ್ಧವಾಗುತ್ತೆ ರಾಷ್ಟ್ರಧ್ವಜ..!

  • ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಅಮೃತಮಹೋತ್ಸವದ ಖುಷಿ
  • ಸ್ವಾತಂತ್ರ್ಯೋತ್ಸವ ಆಚರಣೆ ಪ್ರಾಮುಖ್ಯತೆ, ಮಹತ್ವ
India75 Indian flag is manufactured and supplied from only one place in the nation these are lesser known facts about Independence day dpl
Author
Bangalore, First Published Sep 29, 2021, 5:53 PM IST
  • Facebook
  • Twitter
  • Whatsapp

ಈ ವರ್ಷ ಭಾರತ ಸ್ವಾತಂತ್ರ್ಯೋತ್ಸವ ಆಚರಣೆಗೆ ವಿಶೇಷತೆ ಇತ್ತು. 75ನೇ ವರ್ಷದ ಆಚರಣೆ ಅಂದರೆ ಅಮೃತಮಹೋತ್ಸವದ ಖುಷಿಯೂ ಈ ಬಾರಿಯ ಆಚರಣೆಯಲ್ಲಿದೆ. ಹಾಗಾಗಿಯೇ ಇದು ವಿಶೇಷ. 2021 ಆಗಸ್ಟ್ 15ಕ್ಕೆ ಭಾರತ ಸ್ವಾತಂತ್ರ ಪಡೆದು 75 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿರುವಾಗ ಇದು ಇಡೀ ದೇಶಕ್ಕೇ ವಿಶೇಷ.

ಮೊದಲ ಜಾಗತಿಕ ಮಹಾಯುದ್ಧದ ಸಂದರ್ಭ ಭಾರತದ ಸ್ವಾತಂತ್ರ್ಯ ಸಂಗ್ರಾಮ(Freedom Fight) ಆರಂಭಗೊಂಡಿತ್ತು. ಮೋಹನದಾಸ ಕರಮಚಂದ್ ಗಾಂಧಿ ಅವರ ನೇತೃತ್ವದಲ್ಲಿ ಆರಂಭವಾದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರತಿಫಲ ಸಿಕ್ಕಿದ್ದು 1947 ಆಗಸ್ಟ್ 15ರಂದು. ಸಮೃದ್ಧವಾಗಿದ್ದ ಭಾರತವನ್ನು ದರ್ಪ, ಕ್ರೌರ್ಯದಿಂದ ಬರೋಬ್ಬರಿ 200 ವರ್ಷ ಕಾಲ ಆಳಿದ ಬ್ರಿಟಿಷರು(British Rule) 1947ರಲ್ಲಿ ಹಿಂದೂಸ್ಥಾನವನ್ನು ಬಿಟ್ಟು ಹೋದರು.

India75 Indian flag is manufactured and supplied from only one place in the nation these are lesser known facts about Independence day dpl

1947 ಜುಲೈ 4ರಂದು ಬ್ರಿಟಿಷ್ ಹೌಸ್ ಆಫ್ ಕಾಮನ್ಸ್‌ನಲ್ಲಿ ಭಾರತೀಯ ಸ್ವಾತಂತ್ರ್ಯ ಮಸೂದೆಯನ್ನು(The Indian Independence Bill)  ಮಂಡಿಸಲಾಯಿತು. ಮುಂದಿನ ಹದಿನೈದು ದಿನಗಳಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಯಿತು. ಇದರ ಪರಿಣಾಮವಾಗಿ 1947ರಲ್ಲಿ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅದರ ನಂತರ, ಭಾರತ ಮತ್ತು ಪಾಕಿಸ್ತಾನದ ವಿಭಜನೆಯೊಂದಿಗೆ ಭಾರತವು ಸ್ವತಂತ್ರ ದೇಶವಾಯಿತು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ: ನೆಹರೂ ಫೋಟೋ ಮಾಯ, ಕಾಂಗ್ರೆಸ್‌ ಕಿಡಿ!

ಮಹಾತ್ಮ ಗಾಂಧಿ, ಜವಹರಲಾಲ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಭಗತ್ ಸಿಂಗ್, ಚಂದ್ರ ಶೇಖರ್ ಅಝಾದ್, ಸುಭಾಷ್ ಚಂದ್ರ ಬೋಸ್ ಸೇರಿ ಬಹಳಷ್ಟು ಜನ ವೀರರು ಸ್ವತಂತ್ರ ಭಾರತಕ್ಕಾಗಿ ಹೋರಾಡಿದರು.

ಬ್ರಿಟಿಷರ ದರ್ಪ, ದೌರ್ಜನ್ಯದ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸಲು, ಸ್ವತಂತ್ರ ರಾಷ್ಟ್ರವನ್ನಾಗಿಸಲು ಸ್ವಾತಂತ್ರ್ಯ ಹೋರಾಟಗಾರು ಮಾಡಿದ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಳ್ಳುವ ಸ್ವಾತಂತ್ರ್ಯೋತ್ಸವ ದಿನ ಮಹತ್ವಪೂರ್ಣವಾದದ್ದು. ದೇಶಾದ್ಯಂತ ಅಂದು ರಜೆ ಇದ್ದು, ಧ್ವಜಾರೋಹಣ, ಪೆರೇಡ್‌ಗಳೂ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ಕೆಂಪುಕೋಟೆಯ ಲಹೋರಿ ಗೇಟ್‌ನಲ್ಲಿ ಧ್ವಜಾರೋಹಣ ಮಾಡಿದ್ದರು. ನಂತರದಲ್ಲಿ ಇದೇ ಮುಂದುವರಿದು ಬಂದಿದ್ದು ಪ್ರಧಾನಿ ಧ್ವಜಾರೋಹಣ ಮಾಡಿ ಭಾಷಣ ಮಾಡುತ್ತಾರೆ. ಇದರಲ್ಲಿ ಗಣ್ಯರು ಭಾಗವಹಿಸುತ್ತಾರೆ.

ಭಾರತದ ಸ್ವಾತಂತ್ರ್ಯ ದಿನದ ಕುರಿತು ಕೆಲವು ಅಪರೂಪದ ವಿಚಾರಗಳಿವು

1. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ 1911 ರಲ್ಲಿ ರಚಿಸಿದ ‘ಭರತ ಭಾಗ್ಯ ವಿಧಾತ’ ಹಾಡನ್ನು ‘ಜನ ಗಣ ಮನ’ ಎಂದು ಮರುನಾಮಕರಣ ಮಾಡಲಾಯಿತು. ಜನವರಿ 24, 1950 ರಂದು ಭಾರತದ ಸಂವಿಧಾನ ಸಭೆಯು ಇದನ್ನು ರಾಷ್ಟ್ರಗೀತೆಯಾಗಿ (National Anthem) ಅಂಗೀಕರಿಸಿತು.

2. ಕೆಂಪು, ಹಳದಿ ಮತ್ತು ಹಸಿರು ಬಣ್ಣದ ಮೂರು ಅಡ್ಡ ಪಟ್ಟೆಗಳನ್ನು ಹೊಂದಿರುವ ಭಾರತೀಯ ರಾಷ್ಟ್ರೀಯ ಧ್ವಜವನ್ನು(Flag) ಆಗಸ್ಟ್ 7, 1906 ರಂದು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಭಾರತದ ಪ್ರಸ್ತುತ ರಾಷ್ಟ್ರಧ್ವಜದ ಮೊದಲ ರೂಪಾಂತರವನ್ನು ಸ್ವಾತಂತ್ರ್ಯ ಹೋರಾಟಗಾರ ಪಿಂಗಲಿ ವೆಂಕಯ್ಯ 1921 ರಲ್ಲಿ ವಿನ್ಯಾಸಗೊಳಿಸಿದರು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ಮತ್ತು ಮಧ್ಯದಲ್ಲಿ ಅಶೋಕ್ ಚಕ್ರವನ್ನು ಹೊಂದಿರುವ ಪ್ರಸ್ತುತ ಧ್ವಜವನ್ನು ಅಧಿಕೃತವಾಗಿ ಜುಲೈ 22, 1947 ರಂದು ಅಂಗೀಕರಿಸಲಾಯಿತು. 1947 ಆಗಸ್ಟ್ 15 ರಂದು ಹಾರಿಸಲಾಯಿತು.

India @75: ಭಾರತದ ಸ್ವಾತಂತ್ರ್ಯದ ಬಗ್ಗೆ ನಿಮಗೆ ತಿಳಿದಿರದ ಇಂಟರೆಸ್ಟಿಂಗ್ ವಿಚಾರಗಳು!

3. ಇತರ ಐದು ದೇಶಗಳು ಆಗಸ್ಟ್ 15 ರಂದು ಭಾರತದೊಂದಿಗೆ ತಮ್ಮ ಸ್ವಾತಂತ್ರ್ಯವನ್ನು ಆಚರಿಸುತ್ತವೆ. ಅವುಗಳು ಬಹ್ರೇನ್, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ಲಿಚ್ಟೆನ್‌ಸ್ಟೈನ್.

4. ಭಾರತೀಯ ಧ್ವಜವನ್ನು ರಾಷ್ಟ್ರದಲ್ಲಿ ಕೇವಲ ಒಂದು ಸ್ಥಳದಲ್ಲಿ ತಯಾರಿಸಿ ಸರಬರಾಜು ಮಾಡಲಾಗುತ್ತದೆ. ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಕೆಕೆಜಿಎಸ್ಎಸ್), ಕರ್ನಾಟಕದ(Karnataka) ಧಾರವಾಡದಲ್ಲಿದೆ. ಭಾರತೀಯ ರಾಷ್ಟ್ರಧ್ವಜವನ್ನು ತಯಾರಿಸುವ ಮತ್ತು ಪೂರೈಸುವ ಅಧಿಕಾರವನ್ನು ಇದು ಹೊಂದಿದೆ. ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪ್ರಕಾರ, ಧ್ವಜವನ್ನು ಕೈಯಿಂದ ನೇಯ್ದ ಹತ್ತಿ ಖಾದಿ ವೇಫ್ಟಿಂಗ್‌ನಿಂದ ಮಾತ್ರ ತಯಾರಿಸಲಾಗುತ್ತದೆ.

5. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಗೋವಾ(Goa) ಪೋರ್ಚುಗೀಸ್ ವಸಾಹತು ಆಗಿತ್ತು. ಇದನ್ನು ಭಾರತೀಯ ಸೇನೆಯು(Indian Army) 1961 ರಲ್ಲಿ ಭಾರತಕ್ಕೆ ಸೇರಿಸಿತು. ಹೀಗಾಗಿ, ಗೋವಾ ಭಾರತದ ಭೂಪ್ರದೇಶವನ್ನು ಸೇರುವ ಕೊನೆಯ ರಾಜ್ಯವಾಗಿತ್ತು.

Follow Us:
Download App:
  • android
  • ios