Asianet Suvarna News Asianet Suvarna News

India @75: ಭಾರತದ ಸ್ವಾತಂತ್ರ್ಯದ ಬಗ್ಗೆ ನಿಮಗೆ ತಿಳಿದಿರದ ಇಂಟರೆಸ್ಟಿಂಗ್ ವಿಚಾರಗಳು!

* ಭಾರತ ಸ್ವಾತಂತ್ರ್ಯ ಪಡೆದು 75 ವರ್ಷ

* ಅಮೃತೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯದ ಬಗ್ಗೆ ನಿಮಗೆ ತಿಳಿಯದ ಕೆಲ ಇಂಟರೆಸ್ಟಿಂಗ್ ಮಾಹಿತಿ

India 75 Lesser known facts about Independence Day pod
Author
Bangalore, First Published Sep 29, 2021, 5:30 PM IST
  • Facebook
  • Twitter
  • Whatsapp

ನವದೆಹಲಿ(ಸೆ.29):ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡು ಅನುಭವಿಸಿದ ಸ್ವಾತಂತ್ರ್ಯದ ಸಂಭ್ರಮಕ್ಕೆ 75ನೇ ವರ್ಷ. ಹೀಗಿರುವಾಗ ಈ 75ನೇ ವರ್ಷವನ್ನು ವಿಶೇಷವಾಗಿಸಲು ಈ ಸಂಭ್ರಮವನ್ನು 75 ವಾರಗಳವರೆಗೆ ಆಚರಿಸುವಂತೆ ಮೋದಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತ್ಯೇಕ ವೆಬ್‌ಸೈಟ್‌ ಹಾಗೂ ಲೋಗೋ ಕೂಡಾ ಬಿಡುಗಡೆ ಮಾಡಲಾಗಿದೆ. ಇನ್ನು ಅಮೃತೋತ್ಸವದ ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಾಗಿದೆ. ಹೀಗಿರುವಾಗ ಭಾರತದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

* ಭಾರತದ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 15ರಂದು ಆಚರಿಸುವ ನಿರ್ಧಾರ ಲಾರ್ಡ್‌ ಮೌಂಟ್‌ಬೇಟನ್‌ರದ್ದಾಗಿತ್ತು. ಜಪಾನ್‌ ಒಕ್ಕೂಟ ಪಡೆಗಳೆದುರು ಶರಣಾಗಿ ಎರಡು ವರ್ಷದ ಸ್ಮರಣಾರ್ಥ ಅವರು ಈ ನಿರ್ಧಾರ ಕೈಗೊಂಡಿದ್ದರು. 

ದೇಶದ ಆ ಒಂದು ನಗರದಲ್ಲಿ ಮಧ್ಯರಾತ್ರಿ ಹಾರಿದ ತ್ರಿವರ್ಣ ಧ್ವಜ, ಪಟಾಕಿ ಸಿಡಿಸಿ ಸಂಭ್ರಮ!

* ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾರತದ ಮೊದಲ ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಲ್ಗೊಂಡಿರಲಿಲ್ಲ. 1947ರ ಆಗಸ್ಟ್ 15 ರಂದು ಗಾಂಧೀಜಿ ಕೊಲ್ಕತ್ತಾದಲ್ಲಿದ್ದರು. ಅಲ್ಲಿ ಆ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನದ ವಿಭಜನೆಯಿಂದ ಭಾರೀ ಹಿಂಸಾಚಾರ ಭುಗಿಲೆದ್ದಿತ್ತು.

* ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ ದೆಹಲಿಯ ಕೆಂಪುಕೋಟೆಯಲ್ಲಿ ಒಟ್ಟು 17 ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ.

* ಭಾರತದ ಮೊದಲ ಸ್ವಾತಂತ್ರ್ಯ ದಿನದಂದು ರಾಷ್ಟ್ರಗೀತೆ ಇರಲಿಲ್ಲ. ಭಾರತದ ರಾಷ್ಟ್ರಗೀತೆ ಜನಗಣಮನ ವನ್ನು 1950ರಲ್ಲಿ ರಾಷ್ಟ್ರಗೀತೆ ಎಂದು ಅಧಿಕೇತವಾಗಿ ಘೋಷಿಸಲಾಯ್ತು.

* ಭಾರತದ ಧ್ವಜ ಮೂಲತಃ ಕೇಸರಿ, ಬಿಳಿ, ಹಸಿರು ಇರಲಿಲ್ಲ. 1906ರ ಆಗಸ್ಟ್‌ 7ರಂದು ಕೋಲ್ಕತ್ತಾದ ಪಾರ್ಸಿ ಭಗನ್ ಸ್ಕ್ವೇರ್‌ನಲ್ಲಿ ಹಾರಿಸಿದ್ದ ಧ್ವಜ ಹಸಿರು, ಹಳದಿ ಹಾಗೂ ಕೆಂಪು ಬಣ್ಣವನ್ನು ಹೊಂದಿತ್ತು. ಅಲ್ಲದೇ ಮಧ್ಯದ ಹಳದಿ ಭಾಗದಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು.

ಸೈನಿಕರಿಗೊಂದು ಸಲಾಂ! ಯೋಧರ ಫೋಟೋವುಳ್ಳ ಜಾಕೆಟ್ ಧರಿಸಿ ವೀರಯೋಧರಿಗೆ ನಮನ ಸಲ್ಲಿಸಿದ ಕಾರುಣ್ಯ!

* ಭಾರತದ ಸ್ವಾತಂತ್ರ್ಯ ದಿನದಂದೇ ಬಹ್ರೇನ್‌(1971), ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ(1945), ರಿಪಬ್ಲಿಕ್ ಆಫ್ ಕಾಂಗೋ(1960) ಕೂಡಾ ತಮ್ಮ ಸ್ವಾತಂತ್ರ್ಯ ದಿನ ಆಚರಿಸುತ್ತವೆ. 

Follow Us:
Download App:
  • android
  • ios