7 ತಿಂಗಳಲ್ಲಿ ಸಮಸ್ತ ಭಾರತೀಯರಿಗೆ ಲಸಿಕೆ; ಕೇಂದ್ರದ ಭರವಸೆ!
- ಕೊರೋನಾ ವೈರಸ್ ವಿರುದ್ಧ ಹೋರಾಟ ಚುರುಕುಗೊಳಿಸಿದ ಕೇಂದ್ರ
- ಈ ವರ್ಷದ ಅಂತ್ಯದಲ್ಲಿ ಸಂಪೂರ್ಣ ಭಾರತೀಯರಿಗೆ ಲಸಿಕೆ
- ರಾಹುಲ್ ಗಾಂಧಿ ಆರೋಪದ ಬೆನ್ನಲ್ಲೇ ಭರವಸೆ ನೀಡಿದ ಕೇಂದ್ರ
ನವದೆಹಲಿ(ಮೇ.28): ಕೊರೋನಾ ವೈರಸ್ 2ನೇ ಅಲೆ ದೇಶದಲ್ಲಿ ಸೃಷ್ಟಿಸಿರುವ ಆತಂಕ, ಸವಾಲು ಪ್ರತಿಯೊಬ್ಬ ಭಾರತೀಯನಿಗೂ ಅರಿವಾಗಿದೆ. ಇತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ತಮ್ಮ ವೈಫಲ್ಯ, ಕುಂದು ಕೊರತೆಗಳ ಅರಿವಾಗಿದೆ. ಕೊರೋನಾ ಹೊಡೆದೋಡಿಸಲು ಲಸಿಕೆ ಪ್ರಮುಖ ಅಸ್ತ್ರ. ಹೀಗಾಗಿ ಸಂಪೂರ್ಣ ಭಾರತಕ್ಕೆ ಇನ್ನು 7 ತಿಂಗಳಲ್ಲಿ ಲಸಿಕೆ ನೀಡುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ದೇಶದಲ್ಲಿ ಲಸಿಕೆ ಅಭಿಯಾನ; ಭಾರತ ಸೋಲ್ತಾ, ಗೆಲ್ತಾ?.
ಕೊರೋನಾ ಲಸಿಕೆ ಅಭಾವ ಸೇರಿದಂತೆ ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಜಾವಡೇಕರ್ ಲಸಿಕೆ ಪೂರೈಕೆ ಹಾಗೂ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಈ ವೇಳೆ 2021ರ ಅಂತ್ಯದ ವೇಳೆ ಭಾರತದ ಎಲ್ಲಾ ಪ್ರಜೆಗಳಿಗೆ ಲಸಿಕೆ ನೀಡಲಾಗುವುದು ಎಂದಿದ್ದಾರೆ.
ದೇಶದ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುವುದು. 2021ರ ಡಿಸೆಂಬರ್ ವೇಳೆ ಈ ಲಸಿಕಾ ಅಭಿಯಾನ ಪೂರ್ಣಗೊಳ್ಳಲಿದೆ. ಇದಕ್ಕಾಗಿ ಲಸಿಕೆ ಉತ್ಪಾದನೆ ಹೆಚ್ಚಳ ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೂನ್ ತಿಂಗಳಿನಿಂದ ಲಸಿಕೆ ಉತ್ಪಾದನೆ ಪ್ರಮಾಣ ದುಪ್ಪಟ್ಟಾಗಲಿದೆ.
ನಿರ್ಲಕ್ಷ್ಯದ ಪರಮಾವಧಿ: ಕೊರತೆ ಇದ್ದರೂ ಲಸಿಕೆ ಹಾಳು ಮಾಡುತ್ತಿವೆ ರಾಜ್ಯಗಳು!.
130ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಭಾರದದಲ್ಲಿ ಮಕ್ಕಳುನ್ನು ಹೊರತು ಪಡಿಸಿ 108 ಕೋಟಿ ಮಂದಿಗೆ ಒಟ್ಟು 2016 ಕೋಟಿ ಲಸಿಕೆ ನೀಡಲಾಗುವುದು. ರಾಹುಲ್ ಗಾಂಧಿ, ತಮ್ಮ ಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಲಸಿಕೆ ಅವ್ಯವಸ್ಥೆ ಸರಿಮಾಡಲಿ ಎಂದು ಜಾವಡೇಕರ್ ಕಿವಿ ಮಾತು ಹೇಳಿದ್ದಾರೆ.