Asianet Suvarna News Asianet Suvarna News

ಲಸಿಕೆಯಿಂದ ಕೋವಿಡ್‌ ವಿರುದ್ಧ 94% ಸುರಕ್ಷತೆ, ಆಸ್ಪತ್ರೆ ದಾಖಲಾಗುವ ಅಪಾಯ 80% ಕಡಿತ!

  • ಕೊರೋನಾದಿಂದ ದೂರವಿರಲು ಲಸಿಕೆ ಅತ್ಯಂತ ಅಗತ್ಯ
  • ಕೋವಿಡ್‌ನಿಂದ ಶೇಕಡಾ 94 ರಷ್ಟು ಸುರಕ್ಷತೆ ನೀಡಲಿದೆ ಲಸಿಕೆ
  • ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟನೆ
Covid vaccination will reduce chances of hospitalisation by 80 per cent says VK Paul ckm
Author
Bengaluru, First Published Jun 18, 2021, 8:47 PM IST

ನವದೆಹಲಿ(ಜೂ.18): ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿಯೊಂದನ್ನು ಬಹಿರಂಗ ಪಡಿಸಿದೆ. ಲಸಿಕೆ ಪಡೆಯುವುದರಿಂದ ಶೇಕಡಾ 94 ರಷ್ಟು ಕೋವಿಡ್ ಆಪಾಯವಿಲ್ಲ. ಇದರ ಜೊತೆಗೆ ಲಸಿಕೆ ಪಡೆದವವರು ಆಸ್ಪತ್ರೆ ದಾಖಲಾಗುವ ಸಂಭವ ಶೇಕಡಾ 80 ರಷ್ಟು ಕಡಿತಗೊಳ್ಳಲಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗೆ 1.29 ಕೋಟಿ ಡೋಸ್, ಬಳಕೆ ಮಾಡಿದ್ದು 22 ಲಕ್ಷ ಮಾತ್ರ!

ಲಸಿಕೆ ಎಷ್ಟು ಪರಿಣಾಮಕಾರಿ ಅನ್ನೋ ಕುರಿತು ಆರೋಗ್ಯ ಕಾರ್ಯಕರ್ತರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಾಗಿತ್ತು. ಈ ಅಧ್ಯಯನ ವರದಿ ಮಾಹಿತಿ ದೇಶದ ನಾಗರೀಕರಲ್ಲಿ ಮತ್ತಷ್ಟು ಸಮಾಧಾನ ತಂದಿದೆ.  ಲಸಿಕೆ ಪಡೆದವರಿಗೆ ಕೋವಿಡ್ ತಗುಲಿದರೆ ಆಮ್ಲಜನಕ ಅಗತ್ಯ ಬೀಳುವ ಸಾಧ್ಯತೆ ಶೇಕಡಾ 8 ರಷ್ಟಿದೆ. ಇನ್ನು ಐಸಿಯು ದಾಖಲಾತಿ ಸಾಧ್ಯತೆ ಶೇಕಡಾ 6 ರಷ್ಟಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಈ ಮಾಹಿತನ್ನು ವಿಕೆ ಪೌಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಲಸಿಕೆ ಹಾಕಿಸಿದ ಅತ್ಯಂತ ಹಿರಿಯ ವ್ಯಕ್ತಿ; ಯುವಕರ ನಾಚಿಸಿದ 125 ವರ್ಷದ ಸ್ವಾಮೀಜಿ!...

ಲಸಿಕೆ ಪಡೆದ ವ್ಯಕ್ತಿಗಳು ಅತ್ಯಂತ ಸುರಕ್ಷಿತ. ಹಾಗಂತ ಮುಂಜಾಗ್ರತ ಕ್ರಮಗಳನ್ನು ಮರೆಯಬಾರದು ಎಂದು ವಿಕೆ ಪೌಲ್ ಎಚ್ಚರಿಸಿದ್ದಾರೆ. 45 ವರ್ಷಕ್ಕಿಂತ ಮೇಲ್ಪಟ್ಟ ಕೆಲವರು ಲಸಿಕೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಸುಳ್ಳು ವದಂತಿಗಳಿಕೆ ಕಿವಿಗೊಟ್ಟು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಲಸಿಕೆಯಿಂದ ಯಾವುದೇ ಅಪಾಯವಿಲ್ಲ. ನಿಮ್ಮ ಲಸಿಕೆಯನ್ನು ಬೇಗನೆ ಹಾಕಿಸಿಕೊಂಡು ಸುರಕ್ಷಿತವಾಗಿರಿ ಎಂದು ಪೌಲ್ ಹೇಳಿದ್ದಾರೆ. 

Follow Us:
Download App:
  • android
  • ios