Asianet Suvarna News Asianet Suvarna News

ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿ​ಕೆ!

* ವಿಶ್ವ ಯೋಗ​ದಿ​ನ​ವಾದ ಇಂದಿನಿಂದ 18 ವರ್ಷ ಆದ​ವ​ರಿ​ಗೆ ಉಚಿತ ಲಸಿ​ಕೆ

* ಕೇಂದ್ರ​ದಿಂದಲೇ ಲಸಿಕೆ ಖರೀ​ದಿಸಿ ರಾಜ್ಯ​ಗ​ಳಿಗೆ ವಿತ​ರ​ಣೆ

* ಇಷ್ಟು ದಿನ​ಗಳ ಕಾಲ 45 ವರ್ಷ ಮೇಲ್ಪ​ಟ್ಟ​ವ​ರಿಗೆ ವಿತ​ರಿ​ಸ​ಲು ಮಾತ್ರವೇ ರಾಜ್ಯ​ಗ​ಳಿಗೆ ಕೇಂದ್ರ ಸರ್ಕಾರ ಉಚಿತ ಲಸಿ​ಕೆ​ಯನ್ನು ಒದ​ಗಿ​ಸು​ತ್ತಿತ್ತು

Free Covid 19 vaccination for all adults from june 21st pod
Author
Bangalore, First Published Jun 21, 2021, 9:50 AM IST

ನವ​ದೆ​ಹ​ಲಿ(ಜೂ.21): ವಿಶ್ವ ಯೋಗ​ದಿ​ನ​ವಾದ ಜೂ.21ರಿಂದ 18 ವರ್ಷ ಮೇಲ್ಪ​ಟ್ಟ​ ದೇಶದ ಎಲ್ಲಾ ನಾಗ​ರಿ​ಕ​ರಿಗೆ ಕೇಂದ್ರ ಸರ್ಕಾರ ಉಚಿತ ಲಸಿ​ಕೆ​ಯನ್ನು ವಿತ​ರಿ​ಸ​ಲಿದೆ. ಜೂ.7ರಂದು ದೇಶ​ವನ್ನು ಉದ್ದೇ​ಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿ​ದ್ದ​ರು.

ಇಷ್ಟುದಿನ​ಗಳ ಕಾಲ 45 ವರ್ಷ ಮೇಲ್ಪ​ಟ್ಟ​ವ​ರಿಗೆ ವಿತ​ರಿ​ಸ​ಲು ಮಾತ್ರವೇ ರಾಜ್ಯ​ಗ​ಳಿಗೆ ಕೇಂದ್ರ ಸರ್ಕಾರ ಉಚಿತ ಲಸಿ​ಕೆ​ಯನ್ನು ಒದ​ಗಿ​ಸು​ತ್ತಿತ್ತು. ಒಟ್ಟು ಲಸಿ​ಕೆ​ಯಲ್ಲಿ ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.25, ಖಾಸ​ಗಿ ಆಸ್ಪ​ತ್ರೆ​ಗ​ಳಿಗೆ ಶೇ.25ರಷ್ಟುಲಸಿಕೆ ಖರೀ​ದಿಗೆ ಅವ​ಕಾಶ ನೀಡ​ಲಾ​ಗಿತ್ತು. ಆದರೆ, ಕೇಂದ್ರೀ​ಕೃ​ತ​ವಾಗಿ ಲಸಿಕೆ ವಿತ​ರಿ​ಸುವ ಉದ್ದೇ​ಶ​ದಿಂದ ಲಸಿಕೆ ತಯಾ​ರಿಕಾ ಕಂಪ​ನಿ​ಗಳು ಉತ್ಪಾ​ದಿ​ಸುವ ಶೇ.75ರಷ್ಟುಲಸಿ​ಕೆ​ಯನ್ನು ಕೇಂದ್ರ ಸರ್ಕಾ​ರವೇ ಖರೀ​ದಿ​ಸಿ ರಾಜ್ಯ​ಗ​ಳಿಗೆ ಉಚಿ​ತ​ವಾಗಿ ವಿತ​ರಿ​ಸ​ಲಿದೆ. ಶೇ.25ರಷ್ಟುಲಸಿ​ಕೆ​ಗ​ಳನ್ನು ಖಾಸಗಿ ಆಸ್ಪ​ತ್ರೆ​ಗಳು ಖರೀ​ದಿ​ಸು​ವು​ದಕ್ಕೆ ಅವ​ಕಾಶ ನೀಡ​ಲಾ​ಗಿದೆ.

ಲಸಿಕೆ ನೀಡಿಕೆ ಹೇಗೆ?

ಲಸಿಕೆ ಪಡೆ​ಯಲು 18 ವರ್ಷ ಮೇಲ್ಪ​ಟ್ಟ​ವರು ಕೋವಿನ್‌ ವೆಬ್‌​ಸೈ​ಟ್‌​ನ​ಲ್ಲಿ ನೋಂದಣಿ ಮಾಡಿ​ಕೊ​ಳ್ಳ​ಬೇ​ಕಿದೆ. 45 ವರ್ಷ ಮೇಲ್ಪ​ಟ್ಟನಾಗ​ರಿ​ಕರು ನೇರ​ವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿ​ಕೆ​ಯನ್ನು ಪಡೆ​ಯಬ​ಹು​ದಾ​ಗಿ​ದೆ. ಲಸಿ​ಕೆಯ ಸಂಪೂರ್ಣ ವೆಚ್ಚ​ವನ್ನು ಕೇಂದ್ರ ಸರ್ಕಾ​ರವೇ ಭರಿ​ಸ​ಲಿದೆ. ಖಾಸಗಿ ಆಸ್ಪ​ತ್ರೆ​ಗಳಿಗೆ ಲಸಿ​ಕೆಯ ದರ​ಗ​ಳನ್ನು ಈಗಾ​ಗಲೇ ನಿಗದಿ ಪಡಿ​ಸ​ಲಾ​ಗಿದ್ದು, ಪ್ರತಿ ಡೋಸ್‌ ಲಸಿಕೆ ನೀಡಲು ಖಾಸಗಿ ಆಸ್ಪ​ತ್ರೆ​ಗ​ಳಿ​ಗೆ 150 ರು.ಸೇವಾ ಶುಲ್ಕ​ವನ್ನು ನಿಗ​ದಿ​ಪ​ಡಿ​ಸ​ಲಾ​ಗಿ​ದೆ.

ಲಸಿಕೆ ಅಭಿಯಾನ ಸಾಗಿಬಂದ ಹಾದಿ

ಜ.16ರಂದು ಭಾರ​ತ​ದಲ್ಲಿ ಲಸಿಕೆ ಅಭಿ​ಯಾನ ಆರಂಭ​ವಾ​ಗಿತ್ತು. ಮೊದಲ ಹಂತ​ದಲ್ಲಿ ಆರೋಗ್ಯ ಕಾರ್ಯ​ಕ​ರ್ತ​ರಿಗೆ, ಕೊರೋನಾ ವಾರಿ​ಯ್‌್ಸಗೆ ಲಸಿ​ಕೆ​ಯನ್ನು ನೀಡ​ಲಾ​ಗಿತ್ತು. ಬಳಿಕ ಎರ​ಡನೇ ಹಂತ​ದಲ್ಲಿ 60 ವರ್ಷ ಮೇಲ್ಪ​ಟ್ಟ​ವ​ರು ಹಾಗೂ ಕಾಯಿ​ಲೆ​ಯಿಂದ ಬಳ​ಲು​ತ್ತಿ​ರುವ 45 ವರ್ಷ ಮೇಲ್ಪ​ವರಿಗೆ ಲಸಿಕೆ ನೀಡ​ಲಾ​ಗಿತ್ತು. ತದ​ನಂತ​ದಲ್ಲಿ 45 ವರ್ಷ ಮೇಲ್ಪಟ್ಟಎಲ್ಲ​ರಿಗೂ ಉಚಿತ ಲಸಿ​ಕೆ​ಯನ್ನು ಘೋಷಿ​ಸ​ಲಾ​ಗಿತ್ತು. ಮೇ 1ರಿಂದ 18 ವರ್ಷ ಮೇಲ್ಪ​ಟ್ಟ​ವ​ರಿಗೆ ಲಸಿಕೆ ಪಡೆ​ಯಲು ಅವ​ಕಾ​ಶ​ವನ್ನು ನೀಡ​ಲಾ​ಗಿ​ತ್ತು. ಇದ​ವ​ರೆಗೆ 27 ಕೋಟಿ ಡೋಸ್‌ ಲಸಿ​ಕೆ​ಯನ್ನು ನೀಡ​ಲಾ​ಗಿದೆ.

Follow Us:
Download App:
  • android
  • ios