ಅತೀ ಹೆಚ್ಚು ಹೆಸರಿನಿಂದ ಗುರುತಿಸಿಕೊಂಡಿರುವ ಏಕೈಕ ದೇಶ ಭಾರತ, ಇಲ್ಲಿದೆ ಇಂಡಿಯಾದ 7 ಹೆಸರು!
ಕೇಂದ್ರ ಸರ್ಕಾರ ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡುತ್ತಿದೆ ಅನ್ನೋ ಚರ್ಚೆ ಜೋರಾಗಿದೆ. ಜಿ20 ಭೋಜನಕೂಟಕ್ಕೆ ನೀಡಿದ ಆಮಂತ್ರ ಪತ್ರ ಈ ಚರ್ಚೆ ಹುಟ್ಟುಹಾಕಿದೆ. ಆದರೆ ಈ ದೇಶಕ್ಕೆ ಇಂಡಿಯಾ ಅಥವಾ ಭಾರತ್ ಅನ್ನೋ ಎರಡೇ ಹೆಸರಲ್ಲ ಒಟ್ಟು 7 ಹೆಸರುಗಳಿವೆ.

ನವದೆಹಲಿ(ಸೆ.05) ಭಾರತ ಅಥವಾ ಇಂಡಿಯಾ..ಇದೀಗ ಎಲ್ಲೆಡೆ ಇದೇ ಚರ್ಚೆ. ಕೇಂದ್ರ ಸರ್ಕಾರ ಜಿ20 ಶೃಂಗಸಭೆಯ ಆಮಂತ್ರದಲ್ಲಿ ಪ್ರಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಿದೆ. ಇಷ್ಟು ದಿನ ಪ್ರಸಿಡೆಂಟ್ ಆಫ್ ಇಂಡಿಯಾ ಬದಲು ಇದೀಗ ಭಾರತ್ ಎಂದು ಕೇಂದ್ರ ಸರ್ಕಾರದ ಅಧಿಕೃತ ಪತ್ರದಲ್ಲಿ ಉಲ್ಲೇಖಿಸಿರಿವುದು ಈ ಎಲ್ಲಾ ಚರ್ಚೆಗಳಿಗೆ ಮೂಲವಾಗಿದೆ. ಇದಕ್ಕೂ ಮೊದಲು ಹಲವು ಬಾರಿ ಇಂಡಿಯಾ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡಬೇಕು ಅನ್ನೋ ಕೂಗು ಎದ್ದಿತ್ತು. ಪ್ರಮುಖವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಹಲವು ಬಾರಿ ಭಾರತ ಎಂದು ಕರೆಯಲು ಮನವಿ ಮಾಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೇಂದ್ರದ ಸರ್ಕಾರದ ನಡುವೆ ಪರ ವಿರೋಧಕ್ಕೆ ಕಾರಣವಾಗಿದೆ. ಆದರೆ ಈ ದೇಶಕ್ಕೆ ಇಂಡಿಯಾ, ಭಾರತ ಎರಡೇ ಹೆಸರಲ್ಲ. ಭಾರತ, ಇಂಡಿಯಾ ಸೇರಿ ಈ ದೇಶ 7 ಹೆಸರಿನಿಂದ ಗುರುತಿಸಿಕೊಂಡಿದೆ.
ಹಲವು ದೇಶಗಳು ಹೆಸರು ಬದಲಾಯಿಸಿಕೊಂಡಿದೆ. ವಸಾಹತುಶಾಹಿ, ದಾಳಿಕೋರರಿಂದ ಹಲವು ದೇಶಗಳು ಮೂಲ ಹೆಸರಿನ ಬದಲು ಬೇರೊಂದು ಹೆಸರಿನಲ್ಲಿ ಗುರುತಿಸಿಕೊಂಡಿದೆ. ಇದರಲ್ಲಿ ಕೆಲ ದೇಶಗಳು ಮತ್ತೆ ಮೂಲ ಸ್ವರೂಪಕ್ಕೆ ಮರಳಿದರೆ, ಕೆಲ ದೇಶಗಳು ಮೂಲ ಹೆಸರಿನಲ್ಲಿ ಹೊಸ ಹೆಸರಿಗೆ ಬದಲಾಯಿಸಿಕೊಂಡಿದೆ. ಸಾವಿರಾರು ವರ್ಷಗಳ ಇತಿಹಾಸ ವಿರುವ ಭಾರತ ಅನಾದಿಕಾಲದಿಂದಲೂ ಕಾಲಕ್ಕೆ ತಕ್ಕಂತೆ ಒಂದೊಂದು ಹೆಸರಿನಲ್ಲಿ ಗುರುತಿಸಿಕೊಂಡಿದೆ. ಈ ಎಲ್ಲಾ ಹೆಸರಗಳು ಹಲವು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಈ ದೇಶ ಒಟ್ಟು 7 ಹೆಸರಿನಿಂದ ಗುರುತಿಸಿಕೊಂಡಿದೆ.
Breaking: ದೇಶದ ಹೆಸರನ್ನು 'ಇಂಡಿಯಾ' ಬದಲು ಭಾರತ ಎಂದು ಮರುನಾಮಕರಣ?
ಪ್ರಾಚೀನ ಕಾಲದಲ್ಲಿ ಭಾರತಕ್ಕಿದ್ದ ಇತರ ಹೆಸರು
ಜಂಬುದ್ವೀಪ
ಹಿಮವರ್ಷ
ಆರ್ಯವರ್ತ
ಅಜ್‌ನಭ್ ವರ್ಷ
ಭರತವರ್ಷ
ಹಿಂದುಸ್ಥಾನ
ಭಾರತ
ಇಂಡಿಯಾ
ವಿಷ್ಣುಪುರಾಣದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಈ ಪ್ರದೇಶವನ್ನು ಭರತವರ್ಷ ಎಂದು ಕರೆಯಲಾಗಿದೆ. ಇನ್ನು ಭರತ ಚಕ್ರವರ್ತಿ ರಾಜ್ಯವಾಳಿದ ಕಾರಣ ಭರತವರ್ಷ ಅನ್ನೋ ಹೆಸರು ಬಂದಿತ್ತು ಎಂದು ಪುರಾಣಗಳು ಉಲ್ಲೇಖಿಸಿದೆ. ರಾಮಚರಿತ ಮಾನಸದಲ್ಲಿ ಶ್ರೀರಾಮ ರಾಜ್ಯಾಡಳಿತವನ್ನು ಕಿರಿಯ ಸಹೋದರ ಭರತನಿಗೆ ನೀಡಲಾಗಿತ್ತು. ಹೀಗಾಗಿ ಭಾರತ ಎಂಬ ಹೆಸರು ಬಂದಿದೆ ಅನ್ನೋ ಹಲವು ಉಲ್ಲೇಖಗಳಿವೆ. ಇದರ ಜೊತೆಗೆ ನಾಟ್ಯಾಶಾಸ್ತ್ರದ ಪ್ರಕಾರ ಭರತ ಮುನಿಗಳಿಂದ ಕೂಡಿದ ಈ ಪ್ರದೇಶವನ್ನು ಭಾರತ ಎಂದುಕರೆಯಲಾಗಿದೆ ಎಂಬ ಉಲ್ಲೇಖವಿದೆ. ಮತ್ಸ ಪುರಾಣದಲ್ಲಿ ಭಾರತ ಅನ್ನೋ ಹೆಸರು ಉಲ್ಲೇಖಿಸಲಾಗಿದೆ.
ಹಿಂದುಸ್ತಾನ ಹಿಂದುಸ್ತಾನವಾಗಿಯೇ ಇದ್ದರೆ ಭಾರತದಲ್ಲಿ ಮುಸ್ಲಿಮರು ಸುರಕ್ಷಿತ: ಮೋಹನ್ ಭಾಗವತ್
ಸಿಂದೂ ನಾಗರೀಕತೆಯ ದೇಶ ಇದು. ಸಿಂದ್ ಪ್ರಾಂತ್ಯದಿಂದ ಹುಟ್ಟಿಕೊಂಡು ಈ ನಾಗರೀಕತೆಯನ್ನು ಕೊನೆಗೂ ಹಿಂದು, ಹಿಂದುಸ್ಥಾನ ಎಂದು ಕರೆಯಲಾಗಿದೆ. ಭಾರತ, ಹಿಂದುಸ್ಥಾನ ಉಚ್ಚಾರಣೆ ಬ್ರಿಟಿಷರಿಗೆ ಸುಲಭವಾಗಿರಲಿಲ್ಲ. ಇಂಡಸ್ ವ್ಯಾಲಿಯ ಈ ದೇಶ ಕೊನೆಗೆ ಇಂಡಿಯಾ ಹೆಸರಿನಿಂದಲೂ ಗುರುತಿಸಿಕೊಂಡಿತು. ಆದರೆ ಇಂಡಿಯಾ ಹೆಸರು ಬ್ರಿಟಿಷರಿಂದ ನಾಮಕರಣವಾದ ಹೆಸರು ಅನ್ನೋ ಮಾತಿದೆ.ಆದರೆ 5ನೇ ಶತಮಾನದಿಂದಲೂ ಇಂಡಸ್ ವ್ಯಾಲಿ ನಾಗರೀಕತೆ ದೇಶವನ್ನು ಇಂಡಿಯಾ ಎಂದು ಕರೆದಿದ್ದಾರೆ ಅನ್ನೋ ಕೆಲ ಉಲ್ಲೇಖಗಳಿವೆ. ಆದರೆ ಬ್ರಿಟಿಷರ ವಸಾತುಶಾಹಿ ಆಡಳಿತದ ಬಳಿಕ ಈಸ್ಟ್ ಇಂಡಿಯಾ, ಬ್ರಿಟಿಷ್ ಇಂಡಿಯಾ ಹೆಸರುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೆಳಕಿಗೆ ಬಂದಿದೆ.