Asianet Suvarna News Asianet Suvarna News

ಭಯೋತ್ಪಾದನೆಗೆ ಹಣ ವರ್ಗಾವಣೆಗೆ ತಡೆ: ಭಾರತಕ್ಕೆ ಎಫ್‌ಎಟಿಎಫ್‌ ಪ್ರಶಂಸೆ

ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಭಯೋತ್ಪಾದನೆಗೆ ಹಣ ಒದಗಿಸುವುದರ ವಿರುದ್ಧ ಭಾರತ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿದೆ. ಇದು ಸರ್ಕಾರ ಸಾಧಿಸಿದ ಮಹತ್ವದ ಮೈಲಿಗಲ್ಲು ಎಂದು ಹಣಕಾಸು ಕಾರ್ಯಪಡೆ (ಎಫ್‌ಎಟಿಎಸ್‌) ಪ್ರಶಂಸೆ ವ್ಯಕ್ತಪಡಿಸಿದೆ. 

India taken effective steps against money laundering and terrorism financing Financial Task Force hailed indian government akb
Author
First Published Jun 29, 2024, 10:42 AM IST

ಸಿಂಗಾಪುರ: ಅಕ್ರಮ ಹಣ ವರ್ಗಾವಣೆ ತಡೆ ಹಾಗೂ ಭಯೋತ್ಪಾದನೆಗೆ ಹಣ ಒದಗಿಸುವುದರ ವಿರುದ್ಧ ಭಾರತ ಪರಿಣಾಮಕಾರಿ ಹೆಜ್ಜೆಗಳನ್ನಿಟ್ಟಿದೆ. ಇದು ಸರ್ಕಾರ ಸಾಧಿಸಿದ ಮಹತ್ವದ ಮೈಲಿಗಲ್ಲು ಎಂದು ಹಣಕಾಸು ಕಾರ್ಯಪಡೆ (ಎಫ್‌ಎಟಿಎಸ್‌) ಪ್ರಶಂಸೆ ವ್ಯಕ್ತಪಡಿಸಿದೆ. ಎಫ್‌ಎಟಿಎಸ್‌ 2023-24ನೇ ಸಾಲಿನ ಪರಸ್ಪರ ಮೌಲ್ಯಮಾಪನ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮೆಚ್ಚುಗೆಯ ಮಾತುಗಳನ್ನು ಆಡಿದೆ.

ಭ್ರಷ್ಟಾಚಾರ, ವಂಚನೆ ಮತ್ತು ಸಂಘಟಿತ ಅಪರಾಧಗಳಂತಹ ಅಕ್ರಮಗಳನ್ನು ತಡೆಯಲು ಭಾರತ ಕೈಗೊಂಡ ಕ್ರಮಗಳು ಗಮನಾರ್ಹ ಎಂದಿರುವ ಎಫ್‌ಎಟಿಎಫ್‌, ನಗದು ವ್ಯವಹಾರಗಳಿಂದ ಡಿಜಿಟಲ್ ವ್ಯವಹಾರಕ್ಕೆ ಪರಿವರ್ತನೆ, ಜನ್‌ಧನ್, ಆಧಾರ್ ಅನುಷ್ಠಾನಗಳಂತಹ ಕ್ರಮಗಳಿಂದ ಆರ್ಥಿಕ ಒಳಗೊಳ್ಳುಕೆ ಹಾಗೂ ಡಿಜಿಟಲ್ ಪಾವತಿಗಳು ಸಾಧ್ಯವಾಗಿದೆ. 

ಫ್ಲಿಪ್‌ಕಾರ್ಟ್‌ನಲ್ಲಿ ಬುಕ್ ಮಾಡಿದ್ದ ಚಪ್ಪಲಿ 6 ವರ್ಷಗಳ ಬಳಿಕ ಬಂತು; ಗ್ರಾಹಕ ಫುಲ್ ಶಾಕ್!

ಈ ಕ್ರಮಗಳಿಂದ ವ್ಯವಹಾರಗಳ ಮೇಲೆ ನಿಗಾ ಇಟ್ಟು ಅಕ್ರಮಗಳನ್ನು ಮಟ್ಟಹಾಕಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದೆ. ಇದು ಭಾರತಕ್ಕೂ ಅನೇಕ ವಿಧಗಳಲ್ಲಿ ಲಾಭದಾಯಕವಾಗಿದೆ. ಜಾಗತಿಕ ಹಣಕಾಸು ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗುವುದರೊಂದಿಗೆ ಹೂಡಿಕೆದಾರರ ವಿಶ್ವಾಸ ಗಳಿಸುವುದರಲ್ಲೂ ಸಹಕಾರಿ. ಜೊತೆಗೆ ಯುಪಿಐನ ಜಾಗತಿಕ ವಿಸ್ತರಣೆಗೂ ಅನುಕೂಲ.

ಬೆಂಗಳೂರು: ಪದೆ ಪದೇ ಬುಕ್ಕಿಂಗ್ ಕ್ಯಾನ್ಸಲ್ ಮಾಡೋ ಈ ಕ್ಯಾಬ್ ಡ್ರೈವರ್ಸ್ ಗಳಿಕೆ ನೋಡಿ ನೆಟ್ಟಿಗರು ದಂಗು!

Latest Videos
Follow Us:
Download App:
  • android
  • ios