Asianet Suvarna News Asianet Suvarna News

ಫ್ಲಿಪ್‌ಕಾರ್ಟ್‌ನಲ್ಲಿ ಬುಕ್ ಮಾಡಿದ್ದ ಚಪ್ಪಲಿ 6 ವರ್ಷಗಳ ಬಳಿಕ ಬಂತು; ಗ್ರಾಹಕ ಫುಲ್ ಶಾಕ್!

ಬರೋಬ್ಬರಿ ಆರು ವರ್ಷಗಳ ಹಿಂದೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದ ವಸ್ತುವೊಂದು ಗ್ರಾಹಕರನ್ನು ತಲುಪಿದೆ. ವಿಳಂಬ ಆಗಿದ್ದು ಏಕೆ?

customer Receives Call From Flipkart 6 Years After Placing Order mrq
Author
First Published Jun 27, 2024, 4:04 PM IST

ಮುಂಬೈ: ಫ್ಲಿಪ್‌ಕಾರ್ಟ್‌ನಲ್ಲಿ ಬುಕ್ ಮಾಡಿದ್ದ ಚಪ್ಪಲಿ ಬರೋಬ್ಬರಿ ಆರು ವರ್ಷಗಳ ಬಳಿಕ ಗ್ರಾಹಕನಿಗೆ ಬಂದು ತಲುಪಿದೆ. ಮುಂಬೈ ನಿವಾಸಿ ಅಹ್ಸಾನ್ ಖರ್ಬೈ ಎಂಬವರಿಗೆ ಫ್ಲಿಪ್‌ಕಾರ್ಟ್‌ ಸಿಬ್ಬಂದಿಯಿಂದ ಕರೆ ಬಂದಿದೆ. ಡೆಲಿವರಿ ಬಾಯ್ ನಿಮ್ಮ ಪಾರ್ಸೆಲ್ ಬಂದಿದೆ ಅಂತ ಹೇಳಿದಾಗ ಅಹ್ಸಾನ್ ಶಾಕ್ ಆಗಿದ್ದರು. ಆರು ವರ್ಷಗಳ ಹಿಂದೆ ಬುಕ್ ಮಾಡಿದ್ದನ್ನು ಅಹ್ಸಾನ್ ಮರೆತಿದ್ದರು. 

ಆರು ವರ್ಷಗಳ ಬಳಿಕ ಬಂದಿರುವ ಆರ್ಡರ್ ಸ್ಕ್ರೀನ್‌ಶಾಟ್‌ನ್ನು ಅಹ್ಸಾನ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಆರು ವರ್ಷಗಳ ಹಿಂದೆ ಬುಕ್ ಮಾಡಿದ್ದ, ಚಪ್ಪಲಿ ಈಗ ಬರುತ್ತಿದೆ ಎಂದು ಅಹ್ಸಾನ್ ಬರೆದುಕೊಂಡಿದ್ದಾರೆ. ಈ ಟ್ವೀಟ್‌ಗೆ ಫ್ಲಿಪ್‌ಕಾರ್ಟ್‌ ಸಹ ಪ್ರತಿಕ್ರಿಯಿಸಿದೆ. 

ಎತ್ತಿನ ಗಾಡಿಲಿ ಬೇಕಿದ್ರೆ ಹೋಗ್ತೀನಿ ಆದ್ರೆ ಏರ್ ಇಂಡಿಯಾದಲ್ಲಿ ಮಾತ್ರ ಇನ್ನೊಮ್ಮೆ ಹೋಗಲ್ಲ ಎಂದ ಲೇಖಕ!

ಸರ್ವಿಸ್ ವಿಳಂಬವಾಗಿದ್ದಕ್ಕೆ ನಾವು ಕ್ಷಮೆ ಕೇಳುತ್ತವೆ. ನಮ್ಮ ಸಿಬ್ಬಂದಿ ಶೀಘ್ರದಲ್ಲಿಯೇ ನಿಮ್ಮನ್ನು ಸಂಪರ್ಕಿಸಲಿದೆ. ಇತ್ತೀಚಿನ ಆದೇಶದ ಕುರಿತು ನಾವು ಪರಿಶೀಲನೆ ನಡೆಸಲಾಗುವುದು. ನಾವು ನಿಮ್ಮ ಜೊತೆಯಲ್ಲಿರುತ್ತೇವೆ. ನಿಮ್ಮ ತಾಳ್ಮೆಯನ್ನು ನಾವು ಶ್ಲಾಘಿಸುತ್ತೇವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಇನ್ನು ಅಹ್ಸಾನ್ ಟ್ವೀಟ್‌ಗೆ  ನೆಟ್ಟಿಗರು ಸಹ ಪ್ರತಿಕ್ರಿಯಿಸಿದ್ದು, ತುಂಬಾನೇ ವೇಗವಾಗಿ ನಿಮ್ಮ ಆರ್ಡರ್ ತಲುಪಿದೆ ಅಲ್ಲವಾ? ಆರ್ಡರ್ ಬಾರಿದ್ದಾಗ ನೀವು ಯಾರನ್ನು ಸಂಪರ್ಕಿಸಿರಲಿಲ್ಲವಾ? ನಾನು ಇಂದು ಆರ್ಡರ್ ಮಾಡಿದ್ದೇನೆ. ಆದ್ರೆ ಈಗ ನನಗೆ ಚಿಂತೆ ಆಗ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ರೈನ್ ಡ್ಯಾನ್ಸ್ ರೀಲ್ಸ್ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು, ಕೊದಲೆಳೆ ಅಂತರದಲ್ಲಿ ಯವತಿ ಪಾರು!

Latest Videos
Follow Us:
Download App:
  • android
  • ios