ಬೆಂಗಳೂರು: ಪದೆ ಪದೇ ಬುಕ್ಕಿಂಗ್ ಕ್ಯಾನ್ಸಲ್ ಮಾಡೋ ಈ ಕ್ಯಾಬ್ ಡ್ರೈವರ್ಸ್ ಗಳಿಕೆ ನೋಡಿ ನೆಟ್ಟಿಗರು ದಂಗು!
ಉದ್ಯಾನ ನಗರಿ ಬೆಂಗಳೂರಿನಲ್ಲಿ ಕ್ಯಾಬ್‌ಗಳ ಸಂಖ್ಯೆ ಸಾಕಷ್ಟಿದೆ. ಆನ್ಲೈನ್ ಕ್ಯಾಬ್ ಬುಕ್ ಮಾಡಿದ್ರೆ ಆರಾಮವಾಗಿ ನಾವು ನಮ್ಮ ಸ್ಥಳಕ್ಕೆ ತಲುಪಬಹುದು. ನಮ್ಮನ್ನು ಸುರಕ್ಷಿತವಾಗಿ ಗಮ್ಯ ಸ್ಥಾನಕ್ಕೆ ಸೇರಿಸುವ ಈ ಚಾಲಕರ ಸಂಪಾದನೆ ಎಷ್ಟು ಅನ್ನೋದು ನಿಮಗೆ ಗೊತ್ತಾ?
ಕೆಲಸ ಮಾಡುವ ಆಸಕ್ತಿ ಇದ್ದು ಅದಕ್ಕೆ ತಕ್ಕಂತೆ ಶ್ರಮವಹಿಸಿದ್ರೆ ಯಾವುದೇ ಕೆಲಸದಲ್ಲಾದ್ರೂ ಯಶಸ್ಸು ಸಾಧ್ಯ. ಇದಕ್ಕೆ ಅನೇಕರು ನಿಮಗೆ ಉದಾಹರಣೆಯಾಗಿ ಸಿಗ್ತಾರೆ. ಡಾಕ್ಟರ್, ಇಂಜಿನಿಯರ್ ಸೇರಿದಂತೆ ದೊಡ್ಡ ಕೆಲಸದಲ್ಲಿರುವವರು ಮಾತ್ರ ಶ್ರೀಮಂತರ, ಅವರ ಬಳಿ ಹೆಚ್ಚಿನ ಹಣವಿದೆ ಎಂದುಕೊಳ್ಳುವ ಜನರು ತಮ್ಮ ಆಲೋಚನೆಯನ್ನು ಬದಲಿಸಕೊಳ್ಳಬೇಕು ಈಗ. ಬೀದಿಯಲ್ಲಿ ಹಣ್ಣು, ತರಕಾರಿ ಮಾರುವವ , ಬೀದಿ ಬದಿಯಲ್ಲಿ ಪಾನಿಪುರಿ ಮಾರುವ ವ್ಯಕ್ತಿಯಿಂದ ಹಿಡಿದು ನಮ್ಮನ್ನು ಸುರಕ್ಷಿತವಾಗಿ ಗಮ್ಯ ಸ್ಥಾನಕ್ಕೆ ತಲುಪಿಸುವ ಕ್ಯಾಬ್ ಡ್ರೈವರ್ಸ್ ಕೂಡ ಉತ್ತಮ ಹಣ ಸಂಪಾದನೆ ಮಾಡ್ತಾರೆ ಅಂದ್ರೆ ನೀವು ನಂಬ್ಲೇಬೇಕು. ಕೆಲಸ ಯಾವುದೇ ಇರಲಿ, ನಾವು ಆ ಕೆಲಸವನ್ನು ಹೇಗೆ ಮಾಡ್ತೇವೆ ಮತ್ತೆ ಅದಕ್ಕೆ ಎಷ್ಟು ಸಮಯ ಮೀಸಲಿಡ್ತೇವೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ರೆಡ್ಡಿಟ್ ನಲ್ಲಿ ವ್ಯಕ್ತಿಯೊಬ್ಬ ಕ್ಯಾಬ್ ಡ್ರೈವರ್ ಗಳಿಕೆಯ ವಿವರವನ್ನು ಪೋಸ್ಟ್ ಮಾಡಿದ್ದಾನೆ. ಅದನ್ನು ನೋಡಿದ ನೆಟ್ಟಿಗರು ದಂಗಾಗಿದ್ದಾರೆ. ಶ್ರಮಕ್ಕೆ ತಕ್ಕ ಫಲ ಸಿಗ್ತಿದೆ ಎಂಬ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣ (Social Media) ರೆಡ್ಡಿಟ್ ನಲ್ಲಿ, ಕ್ಯಾಬ್ ಡ್ರೈವರ್ ಜೊತೆ ನಡೆದ ಸಂಭಾಷಣೆಯನ್ನು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಕಾರ್ಯಕ್ರಮವೊಂದನ್ನು ಮುಗಿಸಿ ಕ್ಯಾಬ್ (Cab) ಹತ್ತಿದ ವ್ಯಕ್ತಿ, ಕ್ಯಾಬ್ ಚಾಲಕ (Driver) ನ ಜೊತೆ ಮಾತಿಗೆ ಇಳಿದಿದ್ದಾರೆ. ಈ ಸಮಯದಲ್ಲಿ ಚಾಲಕ ತನ್ನ ಗಳಿಗೆ ದಿನಕ್ಕೆ ಮೂರರಿಂದ ನಾಲ್ಕು ಸಾವರವೆಂದಿದ್ದಾನೆ. ಈ ಮಾತು ಕೇಳಿದ ವ್ಯಕ್ತಿಗೆ ಒಮ್ಮೆ ಶಾಕ್ ಆಗಿದೆ. ಮಾತು ಮುಂದುವರೆಸಿದ ವ್ಯಕ್ತಿ, ಕ್ಯಾಬ್ ಚಾಲಕನ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಪಡೆದಿದ್ದು ಅದನ್ನು ರೆಡ್ಡಿಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಟ್ರಿಕ್ ಬಳಸಿದ್ರೆ ಮಹಿಳೆಯರು ಶ್ರೀಮಂತರಾಗಬಹುದು
ಅವರ ಪ್ರಕಾರ, ಇವರು ಬೆಂಗಳೂರಿನ ಕ್ಯಾಬ್ ಚಾಲಕ. ತಿಂಗಳಲ್ಲಿ 26 ದಿನ ಕೆಲಸ ಮಾಡುತ್ತಾರೆ. ದಿನಕ್ಕೆ 3 ಸಾವಿರ ಅಂದ್ರೂ ತಿಂಗಳಿಗೆ ಅವರು 75 ಸಾವಿರ ರೂಪಾಯಿ ಸಂಪಾದನೆ ಮಾಡ್ತಾರೆ. ಅವರ ಮಕ್ಕಳು ಒಳ್ಳೆಯ ಸ್ಕೂಲ್ ನಲ್ಲಿ ಓದುತ್ತಿದ್ದಾರೆ. ಪೆಟ್ರೋಲ್ ಖರ್ಚು ಕಳೆದ್ರೂ ಚಾಲಕನ ಬಳಿ ಸಾಕಷ್ಟು ಹಣ ಉಳಿಯುತ್ತಿದೆ. ಓಲಾ ಕ್ಯಾಬ್ ಜೊತೆ ಇನ್ನೊಂದು ಕ್ಯಾಬ್ ಕೂಡ ಚಾಲಕ ಹೊಂದಿದ್ದಾನೆ ಎಂದು ಬಳಕೆದಾರ ಪೋಸ್ಟ್ ನಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಓಲಾ ಕ್ಯಾಬ್ ಚಾಲಕ, 2019ರಿಂದಲೇ ಡ್ರೈವರ್ ಕೆಲಸ ಶುರು ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ್ಮೇಲೆ ಓಲಾ ಚಾಲಕನಾಗಿ ಸೇರಿಕೊಂಡಿದ್ದಾರೆ.
ರೆಡ್ಡಿಟ್ ನ ಈ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. ಅನೇಕ ಬಳಕೆದಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ದಿನಕ್ಕೆ 3 ಸಾವಿರ ರೂಪಾಯಿ ಬರೋದು ಸರಿ. ಆದ್ರೆ ನಗರದಲ್ಲಿ ದಿನವಿಡಿ ಟ್ರಾಫಿಕ್, ಧೂಳಿನ ಮಧ್ಯೆ ಕೆಲಸ ಮಾಡೋದು ತುಂಬಾ ಒತ್ತಡದಿಂದ ಕೂಡಿರುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಟ್ರಾಫಿಕ್ ಬೇಸರವನ್ನು ದೂರ ಮಾಡಲು ಅನೇಕ ಕ್ಯಾಬ್ ಡ್ರೈವರ್ಸ್ ಸದಾ ಫೋನ್ ನಲ್ಲಿ ಇರ್ತಾರೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದ್ರಲ್ಲಿ ಅಚ್ಚರಿಪಡುವ ವಿಷ್ಯವಿಲ್ಲ. ಇವರ ಶ್ರಮಕ್ಕೆ ತಕ್ಕ ಫಲ ಸಿಕ್ತಿದೆ. ಅನೇಕ ಅಯೋಗ್ಯ ಕಾರ್ಮಿಕರು ಇವರಿಗಿಂತ ಹೆಚ್ಚು ಸಂಪಾದನೆ ಮಾಡ್ತಿದ್ದಾರೆಂದು ಎಂದು ಇನ್ನೊಬ್ಬರು ಬರೆದಿದ್ದಾರೆ.
ಕಾಲಲ್ಲಿ ಪುರುಷರ ಹೆಸರು ಬರೆದು ಮಾರೋ ಹುಡುಗಿ ಗಳಿಸೋದು ಲಕ್ಷ ಲಕ್ಷ!
ಮತ್ತೊಬ್ಬ ಬಳಕೆದಾರ ತಮ್ಮ ಸ್ನೇಹಿತ ಕ್ಯಾಬ್ ಡ್ರೈವರ್ ಬಗ್ಗೆ ಹೇಳಿದ್ದಾರೆ. ನನ್ನ ಸ್ನೇಹಿತ ಕೂಡ ಕ್ಯಾಬ್ ಡ್ರೈವರ್. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರನ್ನು ಡ್ರಾಪ್ ಮಾಡುವ ಅವರು ಎಲ್ಲ ವೆಚ್ಚ ಕಳೆದು ತಿಂಗಳಿಗೆ 80 ಸಾವಿರ ಸಂಪಾದನೆ ಮಾಡುತ್ತಾರೆ. ಯಲಹಂಕದಲ್ಲಿ ಮನೆಯಿದ್ದು, ಎರಡು ಎಕರೆ ಜಮೀನು ಕೂಡ ಇದೆ ಎಂದಿದ್ದಾರೆ.